HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ: ಕೊರೊನಾದಿಂದ ಮೃತಪಟ್ಟಿರುವುದಾಗಿ ಹೇಳಲಾದ ವೃದ್ಧೆಯ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ…!!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೊರೊನಾ ಭಾದಿತರಾಗಿ ಭಾನುವಾರ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯಿಂದ ಹೇಳಲಾಗಿದ್ದ ನೆಕ್ಕಿಲಾಡಿ ಗ್ರಾಮದ ನಿವಾಸಿ ೬೮ ವರ್ಷ ಪ್ರಾಯದ ವೃದ್ಧರೋರ್ವರ ಕೋವಿಡ್-೧೯ ಪರೀಕ್ಷೆಯ ವರದಿ ಸೋಮವಾರ ಬಂದಿದ್ದು, ಇದರಲ್ಲಿ ನೆಗೆಟಿವ್ ವರದಿ ದಾಖಲಾಗಿದೆ.

ನೆಕ್ಕಿಲಾಡಿ ಗ್ರಾಮದ ಐಸಮ್ಮ ಎಂಬವರು ಉಸಿರಾಟ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಇವರು ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಔಷದೋಪಚಾರ ಪಡೆಯುತ್ತಿದ್ದವರು, ಅನಾರೋಗ್ಯ ಉಲ್ಬಣಿಸಿದ ಕಾರಣಕ್ಕೆ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲ್ಪಟ್ಟಿದ್ದರು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅಲ್ಲಿನ ವೈದ್ಯರು ಕೊರೊನಾದಿಂದ ಮೃತಪಟ್ಟಿರುವುದಾಗಿ ತಿಳಿಸಿರುವುದರಿಂದಾಗಿ ಅವರ ಶವ ಸಂಸ್ಕಾರವನ್ನು ಭಾನುವಾರ ಕೊರೊನಾ ನಿಯಮಾವಳಿ ಅನುಸಾರ ನಡೆಸಲಾಗಿತ್ತು.

ಆದರೆ ಆಸ್ಪತ್ರೆಯಲ್ಲಿ ಐಸಮ್ಮ ಅವರ ವಾರೀಸುದಾರರಾಗಿ ಇದ್ದ ಅವರ ಮೊಮ್ಮಗ ನೌಶಾದ್ ಎಂಬವರ ಮೊಬೈಲ್‌ಗೆ ಸೋಮವಾರ ಸರ್ಕಾರದಿಂದ ಮೆಸೇಜ್ ಬಂದಿದ್ದು, “ಆತ್ಮೀಯ ಐಸಮ್ಮ (೬೭), ನಿಮ್ಮ ಕೋವಿಡ್-೧೯ ಸ್ವ್ಯಾಬ್ ಪರೀಕ್ಷೆ ಎಸ್.ಆರ್.ಎಫ್. ಸಂಖ್ಯೆ, ೨೯೫೩೪೦೦೭೯೩೩೯೫ ಫಲಿತಾಂಶವು ನೆಗೆಟಿವ್ ಆಗಿರುತ್ತದೆ. ಸುರಕ್ಷಿತವಾಗಿರಿ, ಯಾವುದೇ ಲಕ್ಷಣಗಳು ಕಂಡು ಬಂದರೆ ೧೪೪೧೦ಗೆ ಕರೆ ಮಾಡಿ” ಎಂದು ಅದರಲ್ಲಿ ತಿಳಿಸಲಾಗಿದೆ. ಒಟ್ಟಿನಲ್ಲಿ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯನ್ನು ಕೊರೊನಾದಿಂದ ಮೃತಪಟ್ಟಿರುವುದಾಗಿ ಹೇಳಲಾಗಿರುವ ಅಸ್ಪತ್ರೆಯ ವೈದ್ಯರ ಬಗ್ಗೆ ಮತ್ತು ಪ್ರಸಕ್ತ ವ್ಯವಸ್ಥೆಯ ಬಗ್ಗೆ ಅವರ ಕುಟುಂಬದವರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.