HomePage_Banner
HomePage_Banner
HomePage_Banner
HomePage_Banner

ಇಲಾಖಾಧಿಕಾರಿಗಳ ಅನುಕ್ರಮಣಿಕೆಯೊಂದಿಗೆ ನಾಳೆ(ಎ.27) ತಾಲೂಕು ಪಂಚಾಯತ್ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಎ.೨೭ರಂದು ನಡೆಯಲಿದ್ದು, ಕೋವಿಡ್ -೧೯ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಇಲಾಖಾಧಿಕಾರಿಗಳ ಅನುಕ್ರಮಣಿಕೆಯೊಂದಿಗೆ ಸಭೆಗೆ ಹಾಜರಾಗುವ ಮೂಲಕ ಸಾಮಾನ್ಯ ಸಭೆ ನಡೆಸಲಾಗುವುದು ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.

ಸಾಮಾನ್ಯ ಸಭೆಯು ಬೆಳಿಗ್ಗೆ ಗಂಟೆ ೧೧ಕ್ಕೆ ಆರಂಭಗೊಳ್ಳಲಿದ್ದು, ಎರಡು ಹಂತದಲ್ಲಿ ಇಲಾಖಾಧಿಕಾರಿಗಳು ಸಭೆಗೆ ಹಾಜರಾಗಲಿದ್ದು, ಪ್ರಥಮ ಹಂತದ ಸಾಮಾನ್ಯ ಸಭೆಯಲ್ಲಿ ಅನುಷ್ಟಾನಾ ಇಲಾಖೆಗಳಾದ ತಹಶೀಲ್ದರ್ ಪುತ್ತೂರು, ಸಹಾಯಕ ನಿರ್ದೇಶಕರು ಭೂಮಾಪನ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಆಡಳಿತ ವೈದ್ಯಾಧಿಕಾರಿ ಸರಕಾರಿ ಆಸ್ಪತ್ರೆ ಪುತ್ತೂರು, ಪಂಚಾಯತ್ ರಾಜ್‌ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಾಲ್ಗೊಳ್ಳಲಿದ್ದಾರೆ. ದ್ವಿತೀಯ ಹಂತದಲ್ಲಿ ಅನುಷ್ಟಾನ ಇಲಾಖೆಗಳಾದ ತಾಲೂಕು ಆರೋಗ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪಶುಸಂಗೋಪನ ಇಲಾಖೆ, ಸಹಕಾರ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಗಳ ಸಹಾಯಕ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ. ಒಟ್ಟು ಸಭೆಯಲ್ಲಿ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾ.ಪಂ ಸದಸ್ಯರುಗಳು ಎರಡು ಅವಧಿಯಲ್ಲೂ ಉಪಸ್ಥಿತರಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.