HomePage_Banner
HomePage_Banner
HomePage_Banner
HomePage_Banner

ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ವಾರ್ಷಿಕ ರೂ.420.65 ಕೋಟಿ ವ್ಯವಹಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರೂ.೧.೦೪ ಕೋಟಿ ರೂ. ನಿವ್ವಳ ಲಾಭ : ಕೆ.ಸೀತಾರಾಮ ರೈ ಸವಣೂರು

ಪುತ್ತೂರು: ಪುತ್ತೂರಿನಲ್ಲಿ ಕೇ೦ದ್ರ ಕಚೇರಿಯನ್ನು ಹೊ೦ದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸ೦ಘವು ೧೯ ವರ್ಷಗಳಿ೦ದ ಸಹಕಾರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಪುತ್ತೂರು, ಸುಳ್ಯ, ಬೆಳ್ತ೦ಗಡಿ ಮತ್ತು ಬ೦ಟ್ವಾಳ ತಾಲೂಕಿನಲ್ಲಿರುವ ೧೨ ಶಾಖೆಗಳ ಮೂಲಕ ನೀಡಿಕೊ೦ಡು ಬರುತ್ತಿದ್ದು ೨೦೨೦-೨೧ ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕೋವಿಡ್-೧೯ ನ ಸ೦ಕಷ್ಟದ ಸಮಯದಲ್ಲಿಯೂ ತನ್ನ ಸ೦ಘದ ಸದಸ್ಯರ ಸಹಕಾರದಿ೦ದ ಅತ್ಯುತ್ತಮ ಕಾರ್ಯದಕ್ಷತೆಯನ್ನು ಸಾಧಿಸಿ ಸ೦ಘವು ೪೨೦.೬೫ ಕೋಟಿ ರೂ. ಗಳ ದಾಖಲೆಯ ವ್ಯವಹಾರಗವನ್ನು ನಡೆಸಿ ರೂ.೧.೦೪ ಕೋಟಿ ರೂ. ಗಳಷ್ಟು ಲಾಭವನ್ನು ಗಳಿಸಿದೆ ಎ೦ದು ಸ೦ಘದ ಅಧ್ಯಕ್ಷ ಕೆ.ಸೀತಾರಾಮ ಸವಣೂರು ರವರು ತಿಳಿಸಿದ್ದಾರೆ.

ಸ೦ಘದ ೨೦೨೦-೨೧ ನೇ ಆರ್ಥಿಕ ಸಾಲಿನ ಅ೦ತ್ಯಕ್ಕೆ ಸ೦ಘದಲ್ಲಿ ಒಟ್ಟು ೬೯೦೪ ಸದಸ್ಯರಿದ್ದು ಒಟ್ಟು ೨.೩೨ ಕೋಟಿ ರೂ. ಗಳಷ್ಟು ಪಾಲು ಬ೦ಡವಾಳವನ್ನು ಹೊ೦ದಿರುತ್ತದೆ. ಸ೦ಘವು ೮೪.೩೦ ಕೋಟಿ ರೂ. ಠೇವಣಿಯನ್ನು ಹೊ೦ದಿದ್ದು, ಕಳೆದ ವರ್ಷ ಕ್ಕೆ ಹೋಲಿಸಿದರೆ ಶೇಕಡಾ ೨೦.೪೨ ರಷ್ಟು ಹೆಚ್ಚಳವಾಗಿದೆ. ರೂ. ೬೭.೧೦ ಕೋಟಿ ರೂ.ಗಳಷ್ಟು ಹೊರಬಾಕಿ ಸಾಲ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೧೩.೩೦ ರಷ್ಟು ಹೆಚ್ಚಳವಾಗಿದೆ. ಸ೦ಘವು ೨.೦೬ ಕೋಟಿ ರೂ.ಗಳಷ್ಟು ಕ್ಷೇಮ ನಿಧಿ ಮತ್ತು ೪.೮೮ ಕೋಟಿ ರೂ. ಗಳಷ್ಟು ಇತರ ನಿಧಿಗಳನ್ನು ಹೊ೦ದಿ ರೂ. ೯೦.೩೮ ಕೋಟಿಗಳಷ್ಟು ದುಡಿಯುವ ಬ೦ಡವಾಳವನ್ನು ಹೊ೦ದಿರುತ್ತದೆ. ಸ೦ಘವು ಸ್ಥಾಪನೆಗೊ೦ಡ ವರ್ಷದಿ೦ದ ತನ್ನ ಸದಸ್ಯರಿಗೆ ಡಿವಿಡೆ೦ಡ್ ನೀಡಿಕೊ೦ಡು ಬರುತ್ತಿರುವ ಏಕೈಕ ಸ೦ಘವಾಗಿರುತ್ತದೆ. ಮಾತ್ರವಲ್ಲದೆ ಆಡಿಟ್ ವರ್ಗದಲ್ಲಿ ಸತತವಾಗಿ “ಏ” ತರಗತಿಯನ್ನು ಕಾಯ್ದುಕೊ೦ಡು ಬ೦ದಿರುತ್ತದೆ. ೨೦೨೧-೨೨ ನೇ ಸಾಲಿನಲ್ಲಿ ಸ೦ಘವು ರೂ.೧೦೦ ಕೋಟಿ ರೂ. ಗಳ ಠೇವಣಿ ಹಾಗೂ ರೂ.೭೮ ಕೋಟಿ ರೂ. ಗಳಷ್ಟು ಸಾಲ ಹೊರಬಾಕಿ ಮಾಡಿ ಸುಮಾರು ೧.೨೫ ಕೋಟಿ ರೂ.ಗಳ ಲಾಭವನ್ನು ದಾಖಲಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎ೦ದು ಅಧ್ಯಕ್ಷರು ತಿಳಿಸಿದರು.

ಈ ಸ೦ದರ್ಭದಲ್ಲಿ ಸ೦ಘದ ಉಪಾಧ್ಯಕ್ಷರಾದ ಎನ್. ಸು೦ದರ್ ರೈ ನಿರ್ದೇಶಕರಾದ ರಾಮಯ್ಯ ರೈ, ಜೈರಾಜ್ ಭ೦ಡಾರಿ, ಅಶ್ವಿನ್ ಎಲ್. ಶೆಟ್ಟಿ ಮತ್ತು ಮಹಾಪ್ರಬ೦ಧಕರಾದ ವಸ೦ತ ಜಾಲಾಡಿ ಉಪಸ್ಥಿತರಿದ್ದರು.

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ಸೇರಿದಂತೆ ೧೨ ಶಾಖೆಗಳಲ್ಲಿ ೫೩ ಮಂದಿ ಸಿಬ್ಬಂದಿ ಹಾಗೂ ೧೫ ಮಂದಿ ಪಿಗ್ಮಿ ಸಂಗ್ರಾಹಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

೨೦೦೨ ರಲ್ಲಿ ಆರಂಭಗೊಂಡ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘವು ಸುಳ್ಯ, ಪುತ್ತೂರು, ಬೆಳ್ತಂಗಡಿ ಮತ್ತು ಬಂಟ್ವಾಳ ಸೇರಿದಂತೆ ಒಟ್ಟು ೧೨ ಶಾಖೆಗಳನ್ನು ಹೊಂದಿದೆ. ಅವುಗಳು ಪುತ್ತೂರು ದರ್ಬೆ, ಪುತ್ತೂರು ಬೊಳುವಾರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ ಮತ್ತು ಪಂಜದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಹಕಾರಿ ಕ್ಷೇತ್ರದಲ್ಲಿ ನನಗಿದ್ದ ೩೨ ವರ್ಷಗಳ ಅನುಭವದ ಆಧಾರದಲ್ಲಿ ಈ ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದೇವೆ. ಗ್ರಾಹಕರಿಗೆ ಕೂಡಲೇ ಸೇವೆ ಸಿಗಬೇಕು, ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ವಾರದೊಳಗೆ ಸಾಲ ಸೌಲಭ್ಯದ ವ್ಯವಸ್ಥೆಯಾಗಬೇಕು ಎಂಬ ನಿಟ್ಟಿನಲ್ಲಿ ಮತ್ತು ತೆಗೆದುಕೊಂಡ ಸಾಲದ ಸದುಪಯೋಗದೊಂದಿಗೆ ಮರುವಪಾವತಿಯೂ ಸರಿಯಾದ ರೀತಿಯಲ್ಲಿ ಆಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ದಿ.ಸುಂದರ ಶೆಟ್ಟಿ, ದಿ.ನಾರಾಯಣ ಗೌಡ ಮತ್ತಿತರರು ಸೇರಿಕೊಂಡು ಈ ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದೇವೆ. ಗ್ರಾಹಕರ ಸಹಕಾರದಿಂದ ಸಂಘವು ಉತ್ತಮ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದು ಮುಂದೆಯೂ ನಿಮ್ಮೆಲ್ಲರ ಸಹಕಾರ ಹೀಗೆಯೇ ಇರಲಿ ಎಂದು ಬಯಸುತ್ತೇನೆ –  ಕೆ.ಸೀತಾರಾಮ ರೈ ಸವಣೂರು, ಅಧ್ಯಕ್ಷರು ಆದರ್ಶ ವಿವಿಧೋದ್ಧೇಶ ಸಹಕಾರಿ ಸಂಘ 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.