HomePage_Banner
HomePage_Banner
HomePage_Banner
HomePage_Banner

ಸರ್ವೆ: ಶಾಲಾ ಶೌಚಾಲಯದ ಕಳಪೆ ಕಾಮಗಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಲಾ ಶೌಚಾಲಯದ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿರುಸುವಂತೆ ಮುಂಡೂರು ಗ್ರಾಪಂ ಸದಸ್ಯ ಕಮಲೇಶ್‌ರವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.

ಸರ್ವೆ ತಾಲೂಕು ಪಂಚಾಯತ್ ಕ್ಷೇತ್ರ ಹಾಗೂ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸ.ಹಿ.ಪ್ರಾ.ಶಾಲೆ ಸರ್ವೆ ಕಲ್ಪಣೆ ಇಲ್ಲಿ ತಾ.ಪಂ ಸದಸ್ಯರಾದ ಶಿವರಂಜನ್ ಅವರ ಅನುದಾನದಡಿಯಲ್ಲಿ ಗುತ್ತಿಗೆದಾರ ವಾಸುದೇವ ಸಾಲ್ಯಾನ್ ನಿರ್ಮಿಸಿರುವ ಶೌಚಾಲಯದ ಕಾಮಗಾರಿಯು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು ಅಂಗೀಕೃತ ಅಂದಾಜು ಪಟ್ಟಿಯ ಪ್ರಕಾರ ನಡೆದಿರುವುದಿಲ್ಲ, ಇದಲ್ಲದೆ ಶೌಚಾಲಯವನ್ನು ಶಾಲೆಯ ತರಗತಿಯ ಗೋಡೆಯೊಂದಕ್ಕೆ ಹೊಂದಿಕೊಂಡಂತೆ ರಚಿಸಲಾಗಿದೆ.

ತಾಂತ್ರಿಕವಾಗಿ ಇಂತಹ ಕಳಪೆಗುಣಮಟ್ಟದ ಶೌಚಾಲಯ ಕಾಮಗಾರಿಯನ್ನು ಪರಿಶೀಲಿಸದೆ ಇಂಜಿನಿಯರ್ ವಿಭಾಗದವರು ಅಳತೆ ಪುಸ್ತಕದಲ್ಲಿ ದಾಖಳು ಮಾಡಿಕೊಂಡಿರುವುದು ಮೇಲ್ನೊಟಕ್ಕೆ ಸಾಭಿತಾಗಿದ್ದು ಗುತ್ತಿಗೆದಾರರಿಗೆ ಹಣ ಪಾವತಿಯಾಗಿದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಶೌಚಾಲಯದ ಗುಂಡಿಯನ್ನು ಪುನರ್ ನಿರ್ಮಿಸಿ, ಬೇಸಿನ್‌ಗಳನ್ನು ಅಳವಡಿಸಲು ಗುತ್ತಿಗೆದಾರರಿಗೆ ಸೂಚಿಸಬೇಕು ಹಾಗೂ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ.

ಶೌಚಾಲಯದ ಗುಂಡಿಗೆ ಯಾವುದೇ ರಿಂಗ್ ಅಳವಡಿಸದೆ,ಕಲ್ಲು ಕಟ್ಟದೆ ಗುಂಡಿಯ ಮೇಲೆ ಒಂದು ಫೀಟ್ ಅಗಲದ ಸ್ಲಾಬ್‌ಗಳನ್ನು ಹಾಕಿ ಮುಚ್ಚಲಾಗಿದೆ. ಈ ಸ್ಲಾಬ್‌ಗಳು ಕೂಡ ಮುರಿದು ಬಿದ್ದಿದ್ದು ಶಾಲಾ ಮಕ್ಕಳ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಅಲ್ಲದೆ ಮೂತ್ರಾಲಯಕ್ಕೆ ಯಾವುದೇ ಬೇಸಿನ್‌ಗಳನ್ನು ಅಳವಡಿಸದೆ ಟ್ಯಾಪ್‌ಗಳನ್ನು ಅಳವಡಿಸಲಾಗಿದೆ. ಇದು ಸ್ವಚ್ಛ ಭಾರತ್ ಅಭಿಯಾನವನ್ನೇ ಅಣಕಿಸುವಂತಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.