HomePage_Banner
HomePage_Banner
HomePage_Banner
HomePage_Banner

ಅರಿಯಡ್ಕ ಗ್ರಾಮ ಪಂಚಾಯತ್ ಕೊರೋನ ವಾರಿಯರ್ಸ್ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರೋನ ವಾರಿಯರ್ಸ್ ಸಭೆ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆಯಲ್ಲಿ ಎ.೨೭ರಂದು ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು. ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಕಿರಿಯ ಆರೋಗ್ಯ ಸಹಾಯಕಿ ನವ್ಯಾ ಇಲಾಖಾ ಮಾಹಿತಿ ನೀಡಿದರು. ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಗ್ರಾಮಕರಣಿಕ ಶಬ್ಬೀರ್, ಕಿರಿಯ ಆರೋಗ್ಯ ಸಹಾಯಕಿ ನವ್ಯಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮ ಕುಮಾರಿ, ಪಂಚಾಯತ್ ಕಾರ್ಯದರ್ಶಿ ಶಿವರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ಮೋನಪ್ಪ ಪೂಜಾರಿ ಕಾವು, ವಿನುತಾ,ವಿಜೀತ್ ಕಾವು, ಮೀನಾಕ್ಷಿ ಪಾಪೆಮಜಲು, ಹರೀಶ್ ರೈ ಜಾರತ್ತಾರು,ಶಂಕರ ಕಾವು,ಉಷಾರೇಖಾರೈ, ರಾಜೇಶ್ ಮಣಿಯಾಣಿ, ಜಯಂತಿ ಪಟ್ಟು ಮೂಲೆ, ಪುಷ್ಪಲತಾ, ಮತ್ತುಭಾರತಿ ವಸಂತ್ ಕೌಡಿಚ್ಚಾರು, ಕರೋನ ವಾರಿಯರ್ಸ್ ತಂಡದ ಸದಸ್ಯರಾದ ಸಚಿನ್ ರೈ ಪಾಪೆಮಜಲು, ದಿವ್ಯಪ್ರಸಾದ್, ತಿಲಕ್ ರೈ ಕುತ್ಯಾಡಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಉಪಸ್ಥಿತರಿದ್ದರು. ಪಿಡಿಓ ಪದ್ಮ ಕುಮಾರಿ ಸ್ವಾಗತಿಸಿ, ಪಂಚಾಯತ್ ಸಿಬ್ಬಂದಿ ಪ್ರಭಾಕರ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.