HomePage_Banner
HomePage_Banner
HomePage_Banner
HomePage_Banner

ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಈಶ್ವರಮಂಗಲ ಶಾಖೆ ಉದ್ಘಾಟನೆ | “ಬಂಟ ಸಿರಿ ಸಂಸ್ಥೆ”ಸಹಕಾರ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಲಿ -ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬಂಟ ಸಮಾಜವು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುವ ಜೊತೆಗೆ ಬ್ಯಾಕಿಂಗ್ ಮತ್ತು ಸಹಕಾರ ಕ್ಷೇತ್ರದಲ್ಲಿ ತಮ್ಮ ಸಾಧನೆಯನ್ನು ಮಾಡುವ ಮೂಲಕ ದೇಶದ ಅರ್ಥಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.
ಅವರು ಎ. ೨೭ ರಂದು ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಈಶ್ವರಮಂಗಲ ಶಾಖೆಯನ್ನು ಹಿರಾ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೈದು ಮಾತನಾಡಿ ಬ್ಯಾಕಿಂಗ್ ಕ್ಷೇತ್ರದಲ್ಲಿ ಬಂಟ ಸಮಾಜದ ಮೂಲ್ಕಿ ಸುಂದರರಾಮ್ ಶೆಟ್ಟಿರವರು ವಿಜಯ ಬ್ಯಾಂಕ್ ಸ್ಥಾಪಿಸಿ, ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿರುವುದು ನಮಗೆ ತುಂಬಾ ಹೆಮ್ಮೆಯ ವಿಚಾರವಾಗಿದೆ. ಇದೀಗ ಬಂಟಸಿರಿ ಸಹಕಾರ ಸಂಘವು ಪುತ್ತೂರಿನಲ್ಲಿ ೨೦೧೩ರಲ್ಲಿ ಸ್ಥಾಪನೆಗೊಂಡ ಬಳಿಕ ಅಲಂಕಾರಿನಲ್ಲಿ ಶಾಖೆ ತೆರದು ಇದೀಗ ಈಶ್ವರಮಂಗಲದಲ್ಲಿ ತನ್ನ ೨ ನೇ ಶಾಖೆಯನ್ನು ಪ್ರಾರಂಭಸುವ ಮೂಲಕ ಸಹಕಾರ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿದೆ. ಈ ಶಾಖೆಯಿಂದ ಈಶ್ವರ ಮಂಗಲ ಮತ್ತು ಸುಳ್ಯಪದವು ಜನತೆಗೆ ಬಹುದೊಡ್ಡ ಉಪಕಾರವಾಗಲಿದೆ. ಬಂಟ ಸಿರಿ ಸಹಕಾರ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಜಗನ್ನಾಥ ರೈ ಮಾದೋಡಿರವರ ನೇತ್ರತ್ವದಲ್ಲಿ ಸಂಸ್ಥೆಯು ಮತ್ತಷ್ಟು ಶಾಖೆಗಳು ಜಿಲ್ಲೆಯಾದ್ಯಾಂತ ತೆರೆಯಲಿ ಎಂದು ಶುಭಹಾರೈಸಿ, ಕರೋನಾ ಕಾಲಘಟ್ಟದಲ್ಲಿ ಈ ಸ್ಥಿತಿಯಲ್ಲಿ ಜನರ ಬದುಕಿಗೆ ಸಹಕಾರ ಸಂಘುಗಳು ಪೂರಕವಾಗಿ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿ. ಬಂಟ ಸಿರಿ ಸಂಸ್ಥೆಯು ಗ್ರಾಹಕರ ಬದುಕಿನ ಆಶಯಕ್ಕೆ ಸರಿಯಾಗಿ ಉತ್ತಮ ಸೌಲಭ್ಯ ನೀಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಲಿ ಎಂದು ಹೇಳಿದರು.

ಗ್ರಾಹಕರಿಗೆ ಹೆಚ್ಚಿನ ಬಡ್ಡಿ, ಕ್ಲಪ್ತ ಸಮಯದಲ್ಲಿ ಸಾಲ- ಜಗನ್ನಾಥ ರೈ
ಅಧ್ಯಕ್ಷತೆ ವಹಿಸಿದ್ದ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎನ್.ಜಗನ್ನಾಥ ರೈ ಮಾದೋಡಿರವರು ೨೦೧೩ರಲ್ಲಿ ಪುತ್ತೂರಿನಲ್ಲಿ ಆರಂಭಗೊಂಡ ಬಂಟಸಿರಿ ಸಹಕಾರ ಸಂಸ್ಥೆಯು ಇದೀಗ ೨ ನೇ ಶಾಖೆಯನ್ನು ಈಶ್ವರಮಂಗಲದಲ್ಲಿ ಪ್ರಾರಂಭಿಸಿದ್ದೇವೆ. ಪುತ್ತೂರಿನಲ್ಲಿ ಸಂಸ್ಥೆಯನ್ನು ಆರಂಭಮಾಡುವಾಗ ಸವಣೂರು ಸೀತಾರಾಮ ರೈರವರು ಉಚಿತವಾಗಿ ಸ್ಥಳವಕಾಶವನ್ನು ನೀಡುವ ಮೂಲಕ ಸಹಕಾರವನ್ನು ನೀಡಿದ್ದರು. ಬಳಿಕ ದರ್ಬೆಯ ಶ್ರೀರಾಮ ಸೌಧದಲ್ಲಿ ನಮ್ಮ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರಾರಂಭಿಸಿದ್ದೇವೆ. ಇದೀಗ ಈಶ್ವರಮಂಗಲದಲ್ಲಿ ಶಾಖೆಯನ್ನು ಪ್ರಾರಂಭಮಾಡಿದ್ದೇವೆ. ಗ್ರಾಹಕರು ಸೂಕ್ತವಾದ ದಾಖಲೆಯನ್ನು ನೀಡಿದಲ್ಲಿ ತಕ್ಷಣವೇ ೧೦ ಲಕ್ಷ ರೂ, ಸಾಲವನ್ನು ನೀಡುತ್ತೇವೆ. ಜೊತೆಗೆ ಗ್ರಾಹಕರ ಠೇವಣಿತಿಗೆ ಹೆಚ್ಚಿನ ಬಡ್ಡಿ ನೀಡುತ್ತೇವೆ ಎಂದು ಹೇಳಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಖೆಗಳನ್ನು ಮಾಡುವ ಯೋಜನೆ ಇದೆ ಎಂದು ಹೇಳಿದರು. ಬಂಟಸಿರಿ ಸಂಸ್ಥೆಯ ಮೂಲಕ ಎಲ್ಲಾ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರ ನೀಡುವ ಕಾರ್‍ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ- ರಮೇಶ್ ರೈ ಸಾಂತ್ಯ
ಸಂಸ್ಥೆಯ ಭದ್ರತಾ ಕೋಶವನ್ನು ಉದ್ಘಾಟನೆಗೈದ ನೆಟ್ಟಿಣಿಗೆ-ಮುಡ್ನೂರು ಗ್ರಾ.ಪಂ, ಅಧ್ಯಕ್ಷ ರಮೇಶ್ ರೈ ಸಾಂತ್ಯರವರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈಶ್ವರ ಮಂಗಲ ಇಂದು ಪ್ರಸಿದ್ಧಿಯನ್ನು ಪಡೆಯುತ್ತಿರುವ ಊರಾಗಿದ್ದು, ಇದೀಗ ಈ ಊರಿನಲ್ಲಿ ಬಂಟಸಿರಿ ಸಹಕಾರ ಸಂಸ್ಥೆಯು ತನ್ನ ಶಾಖೆಯನ್ನು ಆರಂಭಸಿದ್ದು, ತುಂಬಾ ಸಂತೋಷದ ವಿಷಯವಾಗಿದ್ದು, ಈಶ್ವರಮಂಗಲದ ಜನತೆ ಯಾವಾಗಲೂ ಪ್ರೋತ್ಸಾಹ ಮತ್ತು ಸಹಕಾರ ನೀಡುವ ದೊಡ್ಡ ಗುಣವನ್ನು ಬೆಳೆಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಬಂಟಸಿರಿ ಸಂಸ್ಥೆಯು ಇಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಾಲಿದೆ ಎಂದರು.

ಉತ್ತಮ ಸಂಸ್ಥೆಯಾಗಿ ಬೆಳೆಯಲಿ-ಜಿ.ಕೆ.ಮಹಾಬಲೇಶ್ವರ ಭಟ್
ಬಂಟಸಿರಿ ಸಂಸ್ಥೆಯ ಈಶ್ವರಮಂಗಲ ಶಾಖೆಯ ಪ್ರಥಮ ಠೇವಣಿ ಪತ್ರವನ್ನುವನ್ನು ಕೃಷಿಕರಾದ
ಬಾಲಕೃಷ್ಣ ರೈಯವರಿಗೆ ಹಸ್ತಾಂತರ ಮಾಡಿ, ಮಾತನಾಡಿದ ಈಶ್ವರಮಂಗಲ ಪಂಚಮುಖಿ ದೇವಾಲಯದ ಮಹಾಪೋಷಕ ಜಿ.ಕೆ.ಮಹಾಬಲೇಶ್ವರ ಭಟ್‌ರವರು ಮಾತನಾಡಿ ಬಂಟಸಿರಿ ಸಹಕಾರ ಸಂಸ್ಥೆಯು ಈ ಭಾಗದಲ್ಲಿ ಉತ್ತಮ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಅತಿಥಿಯಾದ ಈಶ್ವರಮಂಗಲ ಹಿರಾ ಕಾಂಪ್ಲೆಕ್ಸ್ ಮಾಲಕ ಅಬ್ದುಲ್ ಖಾದರ್, ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ನಿರ್ದೇಶಕರುಗಳಾದ ದಯಾನಂದ ರೈ ಮನವಳಿಕೆಗುತ್ತು, ಬೂಡಿಯಾರ್ ರಾಧಾಕೃಷ್ಣ ರೈ, ವಸಂತ ಕುಮಾರ್ ರೈ ದುಗ್ಗಳ, ಎಚ್.ಪ್ರವೀಣ್ ಭಂಡಾರಿ, ಜಯರಾಮ ರೈ ನುಳಿಯಾಲು, ಸಂಜೀವ ಆಳ್ವ ಹಾರಾಡಿ, ಚನಿಲ ತಿಮ್ಮಪ್ಪ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಕೊಂಡೆವೂರು, ವಿದ್ಯಾಪ್ರಸಾದ್ ಆಳ್ವ ” ಆಳ್ವರ ಮನೆ” ಉಪ್ಪಳಿಗೆ, ಅನಿತಾ ಹೇಮನಾಥ್ ಶೆಟ್ಟಿ ಕಾವು, ಸಂಸ್ಥೆಯ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲುರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಪುರಂದರ ರೈ ಮಿತ್ರಂಪಾಡಿ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು.

ಸಂಸ್ಥೆಯ ಈಶ್ವರಮಂಗಲ ಶಾಖಾ ಮ್ಯಾನೇಜರ್ ಸುಮಂತ್ ರೈ, ಸಿಬ್ಬಂಧಿ ಐಶ್ವರ್ಯ ರೈರವರು ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು.

ಸಂಸ್ಥೆಯಿಂದ ಮತ್ತಷ್ಟು ಶಾಖೆ ಆರಂಭ
ಬಂಟಸಿರಿ ಸಂಸ್ಥೆಯು ಪುತ್ತೂರಿನಲ್ಲಿ ಪ್ರಧಾನ ಕಚೇರಿ, ಅಲಂಕಾರು ಮತ್ತು ಈಶ್ವರಮಂಗಲ ದಲ್ಲಿ ಶಾಖೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮುಖ ಸ್ಥಳಗಳಲ್ಲಿ ಶಾಖೆಯನ್ನು ಆರಂಭ ಮಾಡಲಿದ್ದೇವೆ, ನಮ್ಮ ಸಂಸ್ಥೆಯಲ್ಲಿ ಗ್ರಾಹಕರಿಗೆ ಕಡಿಮೆ ಸಮಯದಲ್ಲಿ ಸಾಲವನ್ನು ನೀಡಲಿದ್ದೇವೆ. ಸಂಸ್ಥೆಯ ಮುಖ್ಯಕಾರ್‍ಯನಿರ್ವಹಣಾದಿಕಾರಿ ಸತೀಶ್ ರೈ ನಡುಬೈಲುರವರು ಕರ್ತವ್ಯ ನಿಷ್ಠೆಯಿಂದ ಸಂಸ್ಥೆಯ ಬೆಳವಣಿಗೆಯಲ್ಲಿ ಆರ್ಹನಿಶಿ ದುಡಿಯುವ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಮತ್ತು ಗ್ರಾಹಕರ ಪ್ರೋತ್ಸಾಹಕ್ಕೆ ಸದಾ ಅಭಾರಿಯಾಗಿದ್ದೇನೆ.
ಜಗನ್ನಾಥ ರೈ ಮಾದೋಡಿ,  ಅಧ್ಯಕ್ಷರು

ಆಡಳಿತ ಮಂಡಳಿ- ಸಿಬ್ಬಂಧಿಗಳ ಸಹಕಾರ
ಸಂಸ್ಥೆಯ ಬೆಳವಣಿಗೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎನ್. ಜಗನ್ನಾಥ ರೈ ಮಾದೋಡಿ ಮತ್ತು ಆಡಳಿತ ಮಂಡಳಿ ಹಾಗೂ ಸಿಬ್ಬಂಧಿಗಳ ಪೂರ್ಣ ಸಹಕಾರ ದೊರೆಯುತ್ತಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ನಮ್ಮಲ್ಲಿ ಸಾಲ ಸೌಲಭ್ಯ ಇದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಸತೀಶ್ ರೈ ನಡುಬೈಲು- ಮುಖ್ಯಕಾರ್‍ಯನಿರ್ವಹಣಾಧಿಕಾರಿ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.