HomePage_Banner
HomePage_Banner
HomePage_Banner
HomePage_Banner

ಕುಂಬ್ರ: ಉದಾಸೀನವೋ… ನಿರ್ಲಕ್ಷ್ಯವೋ…! ರಸ್ತೆಯ ಮೇಲೆಯೇ ನೀರಿನ ಪೈಪ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇದು ಉದಾಸೀನದ ಫಲವೋ ಅಥವಾ ನಿರ್ಲಕ್ಷ್ಯದ ಕಾರಣವೋ ಗೊತ್ತಿಲ್ಲ ಒಳಮೊಗ್ರು ಗ್ರಾಮದ ಡಿಂಬ್ರಿ ರಸ್ತೆಯ ಮಗಿರೆ ಬಳಿ ರಸ್ತೆಯ ಮೇಲೆಯೇ ಪೈಪ್ ಅಳವಡಿಸಲಾಗಿದೆ. ಇದು ಕಳೆದ ಅವಧಿಯ ಗ್ರಾಪಂ ಅಧಿಕಾರದಲ್ಲಿರುವ ವೇಳೆ ಹಾಕಲಾದ ಪೈಪ್ ಆಗಿದ್ದು ಇನ್ನೂ ಅದನ್ನು ಗುಂಡಿಗೆ ಹಾಕುವ ಕೆಲಸ ನಡೆದಿಲ್ಲ.

ಕುಡಿಯುವ ನೀರಿನ ಪೈಪ್ ಗುಂಡಿ ತೆಗೆದು ಮಣ್ಣಿನ ಅಡಿಯಲ್ಲಿ ಹಾಕುವುದು ನಿಯಮ. ಯಾಕೆಂದರೆ ಪೈಪ್‌ನಲ್ಲಿಕುಡಿಯುವ ನೀರು ಸರಬರಾಜು ಆಗುವುದರಿಂದ ಎಚ್ಚರ ಇರಬೇಕಾಗುತ್ತದೆ. ಯಾರಾದರೂ ಕುಚೇಷ್ಠೆಗೆ ಪೈಪ್ ಒಡೆದು ಹಾಕಬಹುದು ಅಥವಾ ಪೈಪ್‌ಗೆ ಬೇರೆ ರೀತಿಯ ಹಾನಿಯನ್ನು ಮಾಡುವ ಸಾಧ್ಯತೆ ಇದೆ. ಕಳೆದ ಒಂದು ವರ್ಷದಿಂದ ಇದೇ ಸ್ಥಿತಿಯಲ್ಲಿರುವುದು ಅಚ್ಚರಿಗೂ ಕಾರಣವಾಗಿದೆ. ಪೈಪ್ ಮೇಲೆ ಹಾಕಿರುವ ಜಾಗದಲ್ಲಿ ಕಲ್ಲು ಬಂಡೆಗಳೇನೂ ಇಲ್ಲ ಗುಂಡಿ ತೆಗೆಯಬಹುದಾಗಿದೆ ಆದರೆ ಕಾಮಗಾರಿ ಮಾತ್ರ ಯಾಕೆ ಹೀಗಾಗಿದೆ ಎಂದು ಹಾಕಿದವರೇ ಉತ್ತರಿಸಬೇಕಿದೆ.

ಅದು ಕಳೆದ ಅವಧಿಯಲ್ಲಿ ಅಳವಡಿಸಲಾದ ಪೈಪ್, ಅದನ್ನು ತೆರವು ಮಾಡಿ ಹೊಸದಾಗಿ ಈ ಭಾಗದಲ್ಲಿ ಪೈಪ್ ಲೈನ್ ಹಾಕಲಾಗುತ್ತದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯವೂ ಆಗಿದೆ – ತ್ರಿವೇಣಿ ಪಳ್ಳತ್ತಾರು, ಗ್ರಾಪಂ ಅಧ್ಯಕ್ಷರು

ಯಾವ ಕಾರಣಕ್ಕೆ ಪೈಪ್ ಮೇಲೆ ಹಾಕಿದ್ದಾರೋ ಗೊತ್ತಿಲ್ಲ, ಅದನ್ನು ತೆರವು ಮಾಡಿ ಹೊಸ ಪೈಪ್ ಲೈನ್ ಹಾಕುವಂತೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಲಾಗಿದ್ದು , ಹೊಸ ಪೈಪ್ ಲೈನ್ ಹಾಕುವ ಬಗ್ಗೆ ಗ್ರಾಪಂ ಕ್ರಮೈಗೊಳ್ಳಲಿದೆ – ವಿನೋದ್ ಶೆಟ್ಟಿ ಮುಡಾ, ಸ್ಥಳೀಯ ಗ್ರಾಪಂ ಸದಸ್ಯರು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.