HomePage_Banner
HomePage_Banner
HomePage_Banner
HomePage_Banner

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಬಂಧಕ ರಾಮಚಂದ್ರ ಪುಚ್ಚೇರಿ ಏ.30ರಂದು ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಮಾರು ೨೫ ವರ್ಷ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಬಂಧಕ ಹಾಗೂ ನಿವೃತ್ತ ಸೈನಿಕರಾಗಿರುವ ರಾಮಚಂದ್ರ ಪುಚ್ಚೇರಿಯವರು ಏ.30ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.

ನೆಲ್ಯಾಡಿಯ ಪುಚ್ಚೇರಿ ಎಂಬಲ್ಲಿ ಶಿಕ್ಷಕ ಪಮ್ಮಣ್ಣ ಗೌಡ ಮತ್ತು ಶ್ರೀಮತಿ ವಾರಿಜಾ ದಂಪತಿಗಳ ಪುತ್ರನಾಗಿ ೧೯೬೧, ಏಪ್ರಿಲ್ ೩ ರಂದು ಜನಿಸಿದ ರಾಮಚಂದ್ರ ಪುಚ್ಚೇರಿಯವರು ತಮ್ಮ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಅನುಕ್ರಮವಾಗಿ ನೆಲ್ಯಾಡಿ, ಕುಂತೂರು, ಉಪ್ಪಿನಂಗಡಿ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. ೧೯೯೬ರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗುಮಾಸ್ತ ಹಾಗೂ ಕ್ಯಾಶಿಯರ್ ಆಗಿ ಸೇವೆಗೆ ಸೇರಿದ ಬಳಿಕ ೨೦೦೬ರಲ್ಲಿ ಪ್ರಬಂಧಕರಾಗಿ ಬಡ್ತಿಯನ್ನು ಪಡೆದುಕೊಂಡಿರುವ ರಾಮಚಂದ್ರ ಪುಚ್ಚೇರಿಯವರು ಬಳಿಕ ಬೆಳಗಾಂ, ಮಡಿಕೇರಿ, ಹೈದರಾಬಾದ್, ಚಿತ್ತೂರು(ತಿರುಪತಿ)ನಲ್ಲಿ ಸೇವೆ ಸಲ್ಲಿಸಿ, ೨೦೧೭ ರಿಂದ ೨೦೧೯ರ ವರೆಗೆ ಸುಳ್ಯದಲ್ಲಿ ಶಾಖಾ ವ್ಯವಸ್ಥಾಪಕರಾಗಿ ಸೇವೆಯನ್ನು ಸಲ್ಲಿಸಿದ್ದರು. ೨೦೨೧, ಏಪ್ರಿಲ್ ಒಂದರಂದು ಬ್ಯಾಂಕ್ ಪ್ರಬಂಧಕರಾಗಿ ಬಡ್ತಿ ಪಡೆದು ಪುತ್ತೂರಿನಲ್ಲಿ ಉಪ ಶಾಖಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ.

ಭಾರತೀಯ ವಾಯುಸೇನೆಯಲ್ಲಿ ಸೇವೆ:
೧೯೭೯ ರಂದು ಫಿಲೋಮಿನಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸ ಸಂದರ್ಭದಲ್ಲಿ ಅಂದರೆ ತನ್ನ ೧೮ನೇ ವಯಸ್ಸಿನಲ್ಲಿಯೇ ಭಾರತೀಯ ವಾಯುಪಡೆಗೆ ಸೇರಿದ್ದರು. ಭಾರತೀಯ ವಾಯುಪಡೆ ಸಂದರ್ಭದಲ್ಲಿ ಎಎಫ್ ಬೆಲ್ಗಾಂನಲ್ಲಿ ೧೮ ತಿಂಗಳ ಕಾಲ ಪೂರ್ಣ ಪ್ರಮಾಣದ ದೈಹಿಕ ತರಬೇತಿ, ಸ್ಕೈ ಡೈವಿಂಗ್ ಮತ್ತು ಶಸ್ತ್ರಾಸ್ರಾ ತರಬೇತಿಯಲ್ಲಿ ಬೋಧಕ ತರಬೇತಿ, ಎಎಸ್ಪಿಟಿ ಪುಣೆಯಲ್ಲಿ ೯ ತಿಂಗಳ ಕಾಲ ದೈಹಿಕ ತರಬೇತಿ ಶಾಲೆಯ ಆರ್ಮಿ ಶಾಲೆಯಲ್ಲಿ ತರಬೇತಿ ಬಳಿಕ ಆಗ್ರಾದ ಪ್ರತಿಷ್ಠಿತ ಪ್ಯಾರಾ ತರಬೇತಿ ಶಾಲೆಗೆ ಸೇರಿ ಉತ್ಕೃಷ್ಟ ಜೀವನವನ್ನು ಹೊಂದುವ ಅಗತ್ಯವನ್ನು ರಾಮಚಂದ್ರ ಪುಚ್ಚೇರಿಯವರು ಪಡೆದಿರುತ್ತಾರೆ. ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ನಲ್ಲಿನ ಹಲವು ಭಾರತೀಯ ವಾಯುಪಡೆ ಕಾರ್ಯಾಚರಣೆಗಳಲ್ಲಿ ಭಾಗವಹಿಸಿರುತ್ತಾರೆ ಅಲ್ಲದೆ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳ ಸಮ್ಮುಖದಲ್ಲಿ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸ್ಕೈ ಡೈವಿಂಗ್ ಕೌಶಲ್ಯಗಳಲ್ಲಿ ರಾಮಚಂದ್ರ ಪುಚ್ಚೇರಿಯವರು ಭಾಗವಹಿಸಿರುತ್ತಾರೆ.

ರಾಮಚಂದ್ರ ಪುಚ್ಚೇರಿಯವರು ಓರ್ವ ವಾಲಿಬಾಲ್, ಐಎಎಫ್ ಜಿಮ್ನಾಸ್ಟ್, ಹ್ಯಾಂಡ್‌ಬಾಲ್ ಕ್ರೀಡಾಪಟುವಾಗಿದ್ದು, ಪತ್ನಿ ಬೈಲಾಡಿ ಕುಟುಂಬದ ಶ್ರೀಮತಿ ಧರ್ಮವತಿ ಹಾಗೂ ಪುತ್ರ ದೀಪಕ್‌ರವರೊಂದಿಗೆ ಮುಕ್ರಂಪಾಡಿ ಅಪೂರ್ವ ಲೇಔಟ್ ಎಂಬಲ್ಲಿ ವಾಸವಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.