HomePage_Banner
HomePage_Banner
HomePage_Banner
HomePage_Banner

ಕೋವಿಡ್ ಜನತಾ ಕರ್ಫ್ಯೂ ಇಫೆಕ್ಟ್ – ಬಲ್ನಾಡು ದೈವಸ್ಥಾನದಲ್ಲಿ ನೇಮೋತ್ಸವದ ಬದಲು ಗಣಪತಿ ಹೋಮ, ಶುದ್ದಕಲಶ, ಮಹಾಪೂಜೆ ಪ್ರಾರ್ಥನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಎ.೨೮ ರಂದು ನಡೆಯಬೇಕಾಗಿದ್ದ ವಾರ್ಷಿಕ ನೇಮೋತ್ಸವವು ಕೋವಿಡ್ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ರದ್ದು ಗೊಳಿಸಿ ಬೆಳಿಗ್ಗೆ ಭಂಡಾರದ ಮನೆಯಲ್ಲಿ ಶುದ್ದ ಕಲಶ , ಮಹಾಪೂಜೆ ಪ್ರಾರ್ಥನೆ ನಡೆಯಿತು.

ಬೆಳಿಗ್ಗೆ ಭಂಡಾರದ ಮನೆಯಲ್ಲಿ ಪ್ರಾರ್ಥನೆ ಮಾಡಿ ದೈವಸ್ಥಾನದ ಬಳಿ ಪ್ರಾರ್ಥನೆ ಮಾಡಲಾಯಿತು. ಬಳಿಕ ಭಂಡಾರದ ಮನೆಯಲ್ಲಿ ಗಣಪತಿ ಹೋಮ, ಶುದ್ದಕಲಶ ಮತ್ತು ಮಹಾಪೂಜೆ ಮಾಡಲಾಯಿತು. ಬೆಳಿಗ್ಗೆ ಗಂಟೆ ೨೦ ರ ಒಳಗೆ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಮುಗಿಸಲಾಗಿತ್ತು. ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಮತ್ತು ಸದಸ್ಯರು ಉಪಸ್ಥಿತರಿದ್ದರು. ದೈವಸ್ಥಾನದ ಪ್ರಧಾನ ಅರ್ಚಕ ರವಿ ನೆಲ್ಲಿತ್ತಾತ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.