HomePage_Banner
HomePage_Banner
HomePage_Banner
HomePage_Banner

ಕೋವಿಡ್ ಕರ್ಫ್ಯೂ – ಜನ ಜೀವನ ಅಸ್ತವ್ಯಸ್ತ; ಬೆಂಗಳೂರಿನಿಂದ ಅಗಮಿಸಿದ ರೈಲಿನಲ್ಲಿ ಪುತ್ತೂರಿನವರೇ ಅಧಿಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 10 ಗಂಟೆ ಬಳಿಕ ಪೊಲೀಸ್ ತಪಾಸಣೆ ಬಳಿಕವೇ ವಾಹನ ಸಂಚಾರಕ್ಕೆ ಅವಕಾಶ

ಪುತ್ತೂರು: ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ಸರಕಾರ ಜಾರಿಗೊಳಿಸಿರುವ ಕೋವಿಡ್ ಕರ್ಫ್ಯೂನಿಂದಾಗಿ ಈಗಾಗಲೇ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೆಳಗ್ಗೆ ೬ರಿಂದ ೧೦ ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತಾದರೂ ಎ.೨೮ರಂದು ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಜನ ದಟ್ಟಣೆ ಇರಲಿಲ್ಲ.ಆದರೆ ಬೆಳಗ್ಗೆ ಗಂಟೆ ೬ಕ್ಕೆ ಬೆಂಗಳೂರಿನಿಂದ ಬಂದ ರೈಲಿನಲ್ಲಿ ಮಾತ್ರ ಪುತ್ತೂರಿನ ಪ್ರಯಾಣಿಕರೇ ಅಧಿಕ ಸಂಖ್ಯೆಯಲ್ಲಿದ್ದರು.ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪುತ್ತೂರಿಗೆ ಆಗಮಿಸಿರುವುದರಿಂದ ನಾಗರಿಕರು ಆತಂಕಗೊಳಗಾಗಿದ್ದಾರೆ.

ಪುತ್ತೂರು ಪೇಟೆ ಪರಿಸರದಲ್ಲಿ ಮಂಗಳವಾರವೇ ಹೆಚ್ಚಿನ ಜನರು ಅಗತ್ಯ ವಸ್ತುಗಳನ್ನು ಖರೀದಿಸಿ ಕೊಂಡೊಯ್ದ ಕಾರಣ ಬುಧವಾರ ಅಂಗಡಿಗಳ ಮುಂಭಾಗದಲ್ಲಿ ಜನದಟ್ಟಣೆ ಕಂಡು ಬಂದಿರಲಿಲ್ಲ.ಬಸ್ಸು ಸಂಚಾರ ಇಲ್ಲದ ಕಾರಣ ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚಿನ ಜನರು ನಗರಕ್ಕೆ ಆಗಮಿಸಿರಲಿಲ್ಲ.ನಗರದಲ್ಲಿ ಹೊಟೇಲ್‌ಗಳು ಬೆಳಗ್ಗೆ ೬ರಿಂದ ೧೦ರ ತನಕ ಮಾತ್ರ ತೆರೆದಿದ್ದು, ನಂತರ ಮುಚ್ಚಲ್ಪಟ್ಟಿತು.ಸರಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ ಮತ್ತಿತರ ಇಲಾಖೆ ಕಚೇರಿಗಳು ಮಧ್ಯಾಹ್ನದ ತನಕ ಕಾರ್ಯ ನಿರ್ವಹಿಸಿವೆ.
೧೦ ಗಂಟೆಯ ಬಳಿಕ ಪುತ್ತೂರು ಸ್ತಬ್ಧ: ನಗರ ಪ್ರದೇಶದಲ್ಲಿ ಬೆಳಗ್ಗೆ ವಾಹನ ಸಂಚಾರ ವಿರಳವಾಗಿದ್ದರೂ ಅಲ್ಲಿ ಇಲ್ಲಿ ಕೋವಿಡ್ ಲಸಿಕೆ ಪಡೆಯಲು ಆಟೋ ರಿಕ್ಷಾದಲ್ಲಿ ಪ್ರಯಾಣಿಕರು ಹೋಗುತ್ತಿರುವುದು ಮತ್ತು ಕೆಲವು ದ್ವಿಚಕ್ರ ವಾಹನ ಸಂಚಾರ ಕಂಡು ಬಂತು.ಆದರೆ ೧೦ ಗಂಟೆಯ ಬಳಿಕ ವಾಹನ ಓಡಾಟ ವಿರಳವಾಗಿತ್ತು.ಬಳಿಕ ಆಗಮಿಸಿದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿ ಕಳುಹಿಸುತ್ತಿದ್ದರು.೧೦ ಗಂಟೆಯ ಬಳಿಕ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು.ಪುತ್ತೂರು ಪೇಟೆಯಲ್ಲಿ ದರ್ಬೆ, ಬಸ್ ನಿಲ್ದಾಣದ ಬಳಿ, ಮಂಜಲ್ಪಡ್ಪು, ನೆಹರುನಗರ, ದರ್ಬೆ ಬೈಪಾಸ್, ಕೂರ್ನಡ್ಕ ಬಳಿ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಿತ್ತು.ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರ ಮಾರ್ಗದರ್ಶನದಂತೆ ಪುತ್ತೂರು ನಗರ ಪೊಲೀಸ್ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್, ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ್, ಎಸ್.ಐ ಜಂಬುರಾಜ್ ಮಹಾಜನ್ ಮತ್ತು ಮಹಿಳಾ ಪೊಲೀಸ್ ಠಾಣೆಯ ತಿಮ್ಮಪ್ಪ ನಾಯ್ಕ ಅವರು ಆಗಾಗ್ಗೆ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದರು.

ಬೀದಿಬದಿ ವ್ಯಾಪಾರಿಗಳ ಗೋಳು ಕೇಳುವವರಿಲ್ಲ!: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ ೬ರಿಂದ ೧೦ ಗಂಟೆಯವರೆಗೆ ಹಣ್ಣು, ತರಕಾರಿ, ದಿನಸಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.ಆದರೆ ಸಾರ್ವಜನಿಕ ವಾಹನಕ್ಕೆ ಅವಕಾಶ ಇಲ್ಲದ ಕಾರಣ ಗ್ರಾಹಕರ ಸಂಖ್ಯೆ ತೀರಾ ವಿರಳವಾಗಿತ್ತು.ಕೋರ್ಟು ರಸ್ತೆಯ ಉದ್ದಕ್ಕೂ ಮತ್ತು ಪೇಟೆಯ ವಿವಿಧ ಕಡೆ ಹಣ್ಣು, ತರಕಾರಿ ವ್ಯಾಪಾರಿಗಳ ಗೋಳು ಮಾತ್ರ ಹೇಳತೀರದು.ವಿನಾಯಿತಿ ಅವಧಿಯಲ್ಲೂ ಗ್ರಾಹಕರಿಲ್ಲದೆ ಕೊರಗುವ ಪರಿಸ್ಥಿತಿ ಅವರದಾಗಿತ್ತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.