HomePage_Banner
HomePage_Banner
HomePage_Banner
HomePage_Banner

ಚೆಕ್‌ಪೋಸ್ಟ್ ತಪಾಸಣೆ ಬಿಗಿ :ಪೂರಕ ದಾಖಲೆ ಇಲ್ಲದ ವಾಹನವನ್ನು ವಾಪಸ್ ಕಳುಹಿಸುತ್ತಿರುವ ಪೊಲೀಸರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸವಣೂರು : ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೇರಿರುವ ಲಾಕ್‌ಡೌನ್‌ನ ಎರಡನೇ ದಿನವಾದ ಗುರುವಾರ ವಿವಿಧ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಬಿಗಿಗೊಳಿಸಿದ್ದಾರೆ.

ಬುಧವಾರಕ್ಕೆ ಹೋಲಿಸಿದರೆ ಗುರುವಾರ ತಪಾಸಣೆಯ ವೇಳೆ ಬಿಗಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.ಎಲ್ಲಾ ವಾಹನಗಳನ್ನು ನಿಲ್ಲಿಸಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವುದು ಕಂಡು ಬಂತು.

ಮುಖ್ಯರಸ್ತೆಯಲ್ಲಿ ಸರಕು ಸಾಗಾಟದ ವಾಹನ,ಕಟ್ಟಡ ನಿರ್ಮಾಣ ಸಂಬಂಧಿ ಸಾಗಾಟದ ವಾಹನಗಳು ಹಾಗೂ ಕೆಲ ಖಾಸಗಿ ವಾಹನಗಳು ಸಂಚಾರ ನಡೆಸಿದೆ.ಬೆಳಿಗ್ಗೆ ೧೦ ಗಂಟೆಗೆ ಸ್ವಯಂಪ್ರೇರಿತರಾಗಿ ವರ್ತಕರು ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದಾರೆ.ಸರಿಯಾದ ಮಾಹಿತಿ ಹಾಗೂ ಪೂರಕ ದಾಖಲೆಗಳನ್ನು ತೋರಿಸದ ವಾಹನಗಳನ್ನು ವಾಪಾಸ್ ಕಳುಹಿಸುವ ದೃಶ್ಯವೂ ಕಂಡುಬಂತು.

ಬೆಳ್ಳಾರೆ ಪೊಲೀಸ್ ಠಾಣೆ ನಾಲ್ಕು ಚೆಕ್‌ಪೋಸ್ಟ್‌ನಿಂದ ಬಿಗಿ ತಪಾಸಣೆ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಿಂದ ನಾಲ್ಕು ಕಡೆ ಚೆಕ್‌ಪೋಸ್ಟ್ ಮಾಡಲಾಗಿದೆ.ಪಾಲ್ತಾಡಿಯ ಅಂಕತ್ತಡ್ಕ,ಸವಣೂರು ಜಂಕ್ಷನ್ ಬಳಿ,ನಿಂತಿಕಲ್‌ಜಂಕ್ಷನ್ ಬಳಿ,ಬೆಳ್ಳಾರೆ ಬಸ್ ನಿಲ್ದಾಣದ ಬಳಿ ಚೆಕ್ ಪೋಸ್ಟ್ ತೆರೆಯಲಾಗಿದ್ದು,ಅನಗತ್ಯ ವಾಹನ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.