HomePage_Banner
HomePage_Banner
HomePage_Banner
HomePage_Banner

ಬೀಡಿ ಉದ್ಯಮ ಚಾಲನೆಗೆ ಆಗ್ರಹ – ಬಿಎಂ.ಭಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯದ ಜನತಾ ಕರ್ಫ್ಯೂ ನಡುವೆ ಬೀಡಿ ಉದ್ಯಮದ ಚಾಲನೆಗೆ ಅವಕಾಶ ನೀಡಿ ಲಕ್ಷಾಂತರ ಬೀಡಿಕಾರ್ಮಿಕರ ಆರ್ಥಿಕತೆ ಕುಂದದಂತೆ ಮಾಡಲು ಒತ್ತಾಯಿಸಿ ಬಿ.ಎಂ.ಭಟ್ ನೇತೃತ್ವದ ಪುತ್ತೂರು, ಬೆಳ್ತಂಗಡಿ, ಹಾಗೂ ದ.ಕ.ಜಿಲ್ಲಾ ಬೀಡಿಕಾರ್ಮಿಕರ ಸಂಘಟನೆಗಳು ಮತ್ತು ದ.ಕ. ಮತ್ತು ಉಡುಪಿ ಜಿಲಾ ಬೀಡಿ ಗುತ್ತಿಗೆದಾರರ ಸಂಘಗಳ ನೇತೃತ್ವದಲ್ಲಿದ.ಕ.ಜಿಲ್ಲಾಧಕಾರಿಗೆ ಹಾಗೂ ಜಿಲ್ಲಾಉಸ್ತುವಾರಿ ಸಚಿವರಿಗೆ ಕಾರ್ಮಿಕ ಮುಖಂಡ ಬಿ.ಎಂ.ಭಟ್ ಹಾಗೂ ಗುತ್ತಿಗೆದಾರ ಸಂಘದ ಮುಖಂಡರಾದ ಲಕ್ಷ್ಮಣ ಪರಂಗಿಪೇಟೆ ಅವರುಗಳು ಮನವಿ ನೀಡಿ ಒತ್ತಾಯಿಸಿದರು.

ಕರ್ನಾಟಕ ಬಿಗಿ ಕ್ರಮದ ಜನತಾ ಕರ್ಫ್ಯೂ ನಡುವೆ ಉತ್ಪಾದನಾ ವಲಯಗಳಿಗೆ, ಕೃಷಿಗೆ ಸರಕಾರ ಅನುಮತಿ ನೀಡಿದೆ. ಜನರ ಆರ್ಥಿಕ ಶಕ್ತಿ ಕುಂದದಿರಲು ಕೈಗಾರಿಕೆಯ ಚಾಲನೆ ಅತೀಅಗತ್ಯವಿದೆ. ಎಂಬುದನ್ನ ಒಪ್ಪಿದ ಸರಕಾರ ಬೀಡಿ ಉದ್ಯಮ ಚಾಲನೆಗೆ ಅವಕಾಶ ನೀಡಿದೆ. ಬೀಡಿ ಉದ್ಯಮದ ಕೆಲಸ ನಡೆಸಲು ಯಾವುದೇ ಪಾಸು ಅಗತ್ಯವಿರುವುದಿಲ್ಲ ಎಂದು ಅದಿಕಾರಿಗಳು ತಿಳಿಸಿರುತ್ತಾರೆ ಎಂದು ಅವರುಗಳು ತಿಳಿಸಿದರು. ಬೀಡಿ ಗುತ್ತಿಗೆದಾರರು ಬೀಡಿಕಾರ್ಮಿಕರಿಗೆ ಕಚ್ಚಾ ವಸ್ತುಗಳ ನೀಡಲು ಹಾಗೂ ಬ್ರಾಂಚುಗಳಿಗೆ ಹೋಗಿ ಬೀಡಿ ಸಂಗ್ರಹ ಮಾಡವುದಕ್ಕೆ ವಿರೋದ ಇಲ್ಲ. ಕಂಪೆನಿಗಳು ತಮ್ಮ ನೌಕರರನ್ನು ತರಿಸಲು ಅವರವರೇ ವ್ಯವಸ್ಥೆ ಮಾಡಬೇಕಿದೆ. ಬೀಡಿ ಸಾಗಾಟದ ಸಂದರ್ಭ ಪೋಲೀಸರ ತಡೆ ಮಾಡದಂತೆ ಪೋಲೀಸ್ ವರಿಷ್ಟಾಧಿಕಾರಿವರಲ್ಲಿ ತಿಳಿಸಿ ಒಪ್ಪಿಗೆ ಪಡೆಯಲಾಗಿದೆ. ಹಾಗೂ ಪೋಲೀಸರು ತಡೆ ಮಾಡಿದಲ್ಲಿ ಅವರ ಗಮನಕ್ಕೆ ಮತ್ತು ವೃತ್ತ ನೀರೀಕ್ಷಕರ ಗಮನಕ್ಕೆ ತರಲು ಸೂಚಿಸಿರುತ್ತಾರೆ ಎಂದುಕಾರ್ಮಿಕ ಮುಖಂಡರು ತಿಳಿಸಿದರು.

ಆದರೆ ಬೀಡಿ ಉದ್ಯಮದವರಿಂದ ಕೊರೋನಾ ಹರಡದಂತೆ ಮುಂಜಾಗ್ರತಾಕ್ರಮವನ್ನು ಎಲ್ಲರೂ ಪಾಲಿಸಬೇಕು. ಬ್ರಾಂಚುಗಳಿಗೆ ಕಾರ್ಮಿಕರು ಒಬ್ಬೊಬ್ಬರೇ ಬರುವಂತೆಯೂ, ಬಂದವರು ದೈಹಿಕ ದೂರ ಕಾಪಾಡುವುದು ಮತ್ತು ಮಾಸ್ಕ್ ದರಿಸಿಕೊಳ್ಳವುದು ಅಗತ್ಯ. ಬೀಡಿ ಬ್ರಾಂಚುಗಳಲ್ಲಿ ಸಾನಿಟೈಸರ್ ವ್ಯವಸ್ಥೆ ಇರಬೇಕು. ಯಾರನ್ನೂ ಜಾಸ್ತಿ ಸಮಯ ಬ್ರಾಂಚಲ್ಲಿ ನಿಲ್ಲಿಸಬಾರದು. ಇದಕ್ಕೆ ಮಾಲಕರು ಮತ್ತುಗುತ್ತಿಗೆದಾರರು ವ್ಯವಸ್ಥೆ ಮಾಡಬೇಕು ಎಂದವರು ಎಚ್ಚರಿಸಿದರು. ಈ ಸಂದರ್ಬ ಬೀಡಿಗುತ್ತಿಗೆದಾರರ ಸಂಘದ ರಾಜ್ಯ ಮುಖಂಡರಾದ ರವಿ ಪೂಜಾರಿ, ಜಿಲ್ಲಾದ್ಯಕ್ಷರಾದ ಕಷ್ಣಪ್ಪ, ಜಯಕರ್ನಾಟಕ ಸಂಘದ ಗಂಗಾಧರ ಶೆಟ್ಟಿ ಪುತ್ತೂರು, ರಾಧಾಕೃಷ್ಣ ಪುತ್ತೂರು, ಜಲೀಲ್ ಸಂಪ್ಯ, ಸಂಜೀವ ಪೂಜಾರಿ, ಮಹಾಲಿಂಗ ನಾಯ್ಕ, ಸಿ ಮಹಮ್ಮದ್ ಬೆಳ್ತಂಗಡಿ ಮೊದಲಾದವರು ಸಹಕಾರದಿಂದ ಪುತ್ತೂರಲ್ಲಿ ಈ ಮೀಟಿಂಗ್ ನಡೆಸಿ ಈ ಮನವಿ ನೀಡಲು ನಿರ್ಧರಿಸಿ ಮನವಿ ನೀಡಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.