HomePage_Banner
HomePage_Banner
HomePage_Banner
HomePage_Banner

ಲಾಕ್‌ಡೌನ್ ಎಫೆಕ್ಟ್: ಶ್ವಾನಕ್ಕೂ ಮಾಸ್ಕ್ – ದರ್ಬೆ ಜಂಕ್ಷನ್‌ನಲ್ಲಿ ಕಂಡು ಬಂದ ದೃಶ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಎರಡನೇ ಅಲೆಯಿಂದಾಗಿ ಜನ ತತ್ತರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ೧೪ ದಿನಗಳ ಲಾಕ್‌ಡೌನ್ ಘೋಷಿಸಿದೆ. ಪ್ರತಿಯೋರ್ವರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎನ್ನುವ ಘೋಷಣೆಯನ್ನು ನಿರಂತರ ಘೋಷಿಸುತ್ತಾ ಬಂದಿದೆ. ಆದರೆ ಕೆಲವರು ಮಾಸ್ಕ್ ಧರಿಸುವಲ್ಲಿ ಉಡಾಫೆ ತೋರಿಸುತ್ತಿರುವುದು ಅಲ್ಲಲ್ಲಿ ಕಂಡು ಬಂದಿತ್ತಾದರೂ, ಶ್ವಾನವೊಂದು ಮಾಸ್ಕ್ ಧರಿಸಿ ಎಲ್ಲರಿಗೂ ಮಾದರಿಯಾಗಿರುವುದು ಕಂಡು ಬಂದಿದೆ.

ಹೌದು, ಇಲ್ಲಿನ ದರ್ಬೆ ಜಂಕ್ಷನ್‌ನಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸರು ಬೆಳಿಗ್ಗೆ ಹತ್ತು ಗಂಟೆಯ ನಂತರ ಅನಗತ್ಯ ವಾಹನ ಓಡಾಟವನ್ನು ನಿಯಂತ್ರಿಸುತ್ತಿದ್ದಾಗ ಕಂಡು ಬಂದ ದೃಶ್ಯವಿದು. ಸರಕಾರ ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿತ್ತು. ಈ ಸಂದರ್ಭದಲ್ಲಿ ದರ್ಬೆ ಮುಖೇನ ಆಗಮಿಸಿದ ದರ್ಬೆ ಪ್ರವೀಣ್ ಡ್ರೈವಿಂಗ್ ಸ್ಕೂಲ್‌ನ ಮಾಲಕರಾದ ಪ್ರವೀಣ್ ಡಿ’ಸೋಜರವರು ತಮ್ಮ ಪ್ರೀತಿಯ ಎರಡೂವರೆ ವರ್ಷದ ಪ್ರೀತಿಯ `ಹಗ್’ ನಾಮಾಂಕಿತ ಶ್ವಾನ(ವೊಡಾಫೋನ್ ಸಿಂಬಲ್ ಖ್ಯಾತಿ)ದ ಮುಖಕ್ಕೆ ಮಾಸ್ಕ್ ಧರಿಸಿರುವುದು ಸ್ಥಳದಲ್ಲಿದ್ದ ಪೊಲೀಸರ ಹಾಗೂ ಪತ್ರಿಕಾ/ಮೀಡಿಯಾ ವರದಿಗಾರರ ಕುತೂಹಲಕ್ಕೆ ಎಡೆಮಾಡಿತ್ತು. ಸರಕಾರದ ಮಾರ್ಗಸೂಚಿಗಳನ್ನು ಜನಸಾಮಾನ್ಯರೇ ಉಲ್ಲಂಘಿಸುವ ಈ ಸಂದರ್ಭದಲ್ಲಿ ಮಾತನಾಡಲು ಬಾರದ ಶ್ವಾನವೊಂದು ಮಾಸ್ಕ್ ಧರಿಸಿರುವುದು ಮಾನವನಿಗೆ ಮಾದರಿಯಾಗಿದೆ. ಇದೇ ಪ್ರವೀಣ್ ಡ್ರೈವಿಂಗ್ ಸ್ಕೂಲ್‌ನ ಪ್ರವೀಣ್ ಡಿ’ಸೋಜರವರು ಕೊರೋನಾ ಸಂದರ್ಭದಲ್ಲಿ ಕ್ವಾರಂಟೈನ್‌ನಲ್ಲಿರುವವರಿಗೆ ಅಗತ್ಯ ಸಾಮಾಗ್ರಿಗಳನ್ನು ತಲುಪಿಸುವುದು ಹಾಗೂ ವ್ಯಾಕ್ಸಿನ್ ತೆಗೆದುಕೊಳ್ಳುವವರಿಗೆ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಉಚಿತ ಸೇವೆಯನ್ನು ನೀಡುತ್ತಾ ಬಂದಿದ್ದೇನೆ ಎಂದು ಪ್ರವೀಣ್ ಡಿ’ಸೋಜರವರು `ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.