HomePage_Banner
HomePage_Banner
HomePage_Banner
HomePage_Banner

ನಿರಾಶ್ರಿತ ತಾಣಗಳಲ್ಲಿ ಸೇವಭಾರತಿ ಪುತ್ತೂರುನಿಂದ ಚಟುವಟಿಕೆ ಆರಂಭ | ನಗರಸಭಾ ವ್ಯಾಪ್ತಿಯಲ್ಲಿ ನಿರಾಶ್ರಿತರಿಗೆ ಭೋಜನ ವ್ಯವಸ್ಥೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಗ್ಗಟ್ಟಿನಿಂದ ಕೋವಿಡ್ ಸೋಲಿಸೋಣ – ಸೇವಾ ಕಾರ್ಯಕ್ಕೆ ಕೈಜೋಡಿಸೋಣ ಎಂಬಂತೆ ಕೋವಿಡ್-೧೯ ಸೋಂಕನ್ನು ನಿಯಂತ್ರಣ ಮಾಡುವ ನಿಟ್ಟಿಲ್ಲಿ ಜನತಾ ಕರ್ಫ್ಯೂವಿನ ಸಂದರ್ಭ ನಿರಾಶ್ರಿತರ ಬದುಕಿಗಾಗಿ ಅನೇಕ ಸಾಮಾಜಿಕ ಸಂಘಟನೆಗಳು ಸಮಾಜಕ್ಕೆ ಅಗತ್ಯವಿರುವ ಸಹಾಯ ಮಾಡಲು ಮುಂದೆ ಬಂದಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ಅವುಗಳಲ್ಲಿ ಒಂದಾಗಿದ್ದು, ಗಂಭೀರ ಸ್ವರೂಪದ ಎರಡನೇ ಅಲೆಯ ಮಧ್ಯೆ ಸಮಾಜಕ್ಕೆ ಸಹಾಯ ಮಾಡಲು ೧೨ ಉಪಕ್ರಮಗಳನ್ನು ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ನಿರಾಶ್ರಿತರಿಗೆ ಭೋಜನ ವ್ಯವಸ್ಥೆ ಆರಂಭಿಸಲಾಗಿದೆ.

“ರಾಷ್ಟ್ರದ ಸೇವೆಗಾಗಿ ದೃಢಇಚ್ಛಾ ಶಕ್ತಿಯೊಂದಿಗೆ ದಶಕಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ದುಡಿಯುತ್ತಿದಿದ್ದರೂ ಯಾವತ್ತೂ ಪ್ರಚಾರವನ್ನು ಬಯಸಿಲ್ಲ. ಆದರೆ ಪುತ್ತೂರಿನಲ್ಲಿಲ ಆರ್‌ಎಸ್‌ಎಸ್ ಸೇವಾ ಕಾರ್ಯ ಆರಂಭಗೊಂಡಿರುವ ಮಾಹಿತಿ ಲಭ್ಯವಾಗಿದೆ. ಪುತ್ತೂರು ನಗರಸಭೆ ವ್ಯಾಪ್ತಿಯ ನೆಲ್ಲಿಕಟ್ಟೆ, ಎಂ.ಟಿ ರಸ್ತೆ, ಏಳ್ಮುಡಿ ಸೇರಿದಂತೆ ಹಲವೆಡೆ ಎ.೨೯ರಂದು ಸೇವಾಭಾರತಿ ಮೂಲಕ ನಿರಾಶ್ರಿತರಿಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಚಾರಕ್ ರೋಹಿತ್, ವಿಶ್ವಹಿಂದು ಪರಿಷತ್‌ನ ಜಿತೇಶ್, ಸಂತೋಷ್ ಬೋನಂತಾಯ ಅವರು ವಿವಿಧ ಕಡೆ ಮಧ್ಯಾಹ್ನದ ಬೋಜನ ವ್ಯವಸ್ಥೆ ಕಲ್ಪಿಸಿದ್ದರು. ಈಗಾಗಲೇ ಸಂಘದ ಕಾರ್ಯಕರ್ತರು ಒಟ್ಟಾಗಿ ಪ್ರತ್ಯೇಕ ವಾಸದ ಶಿಬಿರಗಳನ್ನು, ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ, ಆಂಬುಲೆನ್ಸ್ ಸೇವೆಗಳು, ಆಹಾರ ಪೂರೈಕೆ, ಸಮಾಲೋಚನೆ ಮತ್ತು ಇತ್ಯಾದಿ ಉಪಕ್ರಮಗಳನ್ನು ಪ್ರಾರಂಭಿಸಿದ್ದಾರೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಸುನೀಲ್ ಅಂಬೇಕರ್ ದೆಹಲಿಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.