HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಗ್ರಾ.ಪಂ. ಗ್ರೇಡ್-1 ಕಾರ್ಯದರ್ಶಿ ಮರಿಯಮ್ಮ ವಿ.ಎಂ.ಇಂದು ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಗ್ರೇಡ್-೧ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮರಿಯಮ್ಮ ವಿ.ಎಂ.,ರವರು ಎ.೩೦ರಂದು ಸೇವಾ ನಿವೃತ್ತರಾಗುತ್ತಿದ್ದಾರೆ.

ಇವರು ೧-೬-೧೯೮೫ರಿಂದ ೩೧-೩-೧೯೮೮ರ ತನಕ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಗುಮಾಸ್ತೆಯಾಗಿ, ೧೦-೪-೧೯೮೯ ರಿಂದ ೩೧-೩-೧೯೯೩ರ ತನಕ ಉಪ್ಪಿನಂಗಡಿ, ಬಜತ್ತೂರು, ಹಿರೇಬಂಡಾಡಿ ಗ್ರಾಮಗಳನ್ನೊಳಗೊಂಡ ಉಪ್ಪಿನಂಗಡಿ ಮಂಡಲ ಪಂಚಾಯತ್‌ನಲ್ಲಿ, ಬಳಿಕ ೧-೪-೧೯೯೪ ರಿಂದ ೧೭-೭-೨೦೦೭ರ ತನಕ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನಲ್ಲಿ ಗುಮಾಸ್ತೆಯಾಗಿ ಕೆಲಸ ನಿರ್ವಹಿಸಿದ್ದರು. ೨೦-೭-೨೦೦೭ರಂದು ಕಾರ್ಯದರ್ಶಿ ಗ್ರೇಡ್-೨ ಹುದ್ದೆಗೆ ಭಡ್ತಿಗೊಂಡು ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾ.ಪಂ.ಗೆ ನೇಮಕಗೊಂಡಿದ್ದರು. ಬಳಿಕ ಪೆರಾಬೆ, ಕೌಕ್ರಾಡಿ, ರಾಮಕುಂಜ ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇವರು ರಾಮಕುಂಜ ಗ್ರಾ.ಪಂ.ನಲ್ಲಿ ಕಾರ್ಯದರ್ಶಿಯಾಗಿದ್ದ ವೇಳೆ ೨೦೧೪-೧೫ನೇ ಸಾಲಿನಲ್ಲಿ ಗ್ರಾ.ಪಂ.ಗೆ ಸ್ವಚ್ಛ ಆಡಳಿತ ನಿರ್ವಹಣೆಗೆ ಕೋಟ ಶಿವರಾಮ ಕಾರಂತ ಪ್ರಶಸ್ತಿ ಮತ್ತು ೨೦೧೫-೧೬ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರವು ಲಭಿಸಿತ್ತು.

ಬಳಿಕ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾ.ಪಂ.ಗೆ ವರ್ಗಾವಣೆಗೊಂಡು ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ೭-೬-೨೦೧೮ರಂದು ಕಾರ್ಯದರ್ಶಿ ಗ್ರೇಡ್-೧ ಹುದ್ದೆಗೆ ಭಡ್ತಿಗೊಂಡು ಉಪ್ಪಿನಂಗಡಿ ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದರು. ಇವರ ಕರ್ತವ್ಯದ ಅವಧಿಯಾಗಿದ್ದ ೨೦೧೮-೧೯ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಉಪ್ಪಿನಂಗಡಿ ಗ್ರಾ.ಪಂ.ಗೆ ಲಭಿಸಿತ್ತು. ಬಳಿಕ ಪುತ್ತೂರು ತಾ.ಪಂ.ಗೆ ವರ್ಗಾವಣೆಗೊಂಡು ಸ್ವಚ್ಛ ಭಾರತ್ ಮಿಷನ್ ಮತ್ತು ವಿಷಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಗ್ರೇಡ್-೧ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಎ.೩೦ರಂದು ನಿವೃತ್ತರಾಗಲಿದ್ದಾರೆ. ಇವರು ಪಂಚಾಯತ್ ರಾಜ್ ಇಲಾಖೆಯಲ್ಲಿ ಒಟ್ಟು ೩೨ ವರ್ಷ ೩ ತಿಂಗಳ ಮತ್ತು ಶಿಕ್ಷಣ ಇಲಾಖೆಯಲ್ಲಿ ೩ ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ.

ಉಪ್ಪಿನಂಗಡಿ ಗ್ರಾಮದ ಲಕ್ಷ್ಮೀನಗರ ದಿ.ಮೇಥ್ಯು ವಿ.ಯಂ.ಮತ್ತು ದಿ.ಕೆ.ಪಿ.ಮೇರಿ ದಂಪತಿಯ ಪುತ್ರಿಯಾದ ಮರಿಯಮ್ಮರವರು ಉಪ್ಪಿನಂಗಡಿ ಸೈಂಟ್ ಫಿಲೋಮಿನಾ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಉಪ್ಪಿನಂಗಡಿ ಸರಕಾರಿ ಪ.ಪೂ.ಕಾಲೇಜಿನಲ್ಲಿ ಹೈಸ್ಕೂಲ್, ಪಿಯುಸಿ ಶಿಕ್ಷಣವನ್ನು ಪಡೆದಿದ್ದಾರೆ. ಪ್ರಸ್ತುತ ಉಪ್ಪಿನಂಗಡಿ ಸಮೀಪದ ಲಕ್ಷ್ಮೀನಗರದಲ್ಲಿ ಪತಿ ರಾಜನ್ ಕೆ.ಕೆ.ರವರೊಂದಿಗೆ ವಾಸ್ತವ್ಯವಿದ್ದು ಇವರ ಪುತ್ರ ಎಬಲ್‌ರಾಜ್‌ರವರು ಕೆನಡಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ಎಂಜೆಲ್ ಪ್ರಿನ್ಸಿ ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಫಾರ್ಮಾ ಡಿ ಮಾಡುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.