HomePage_Banner
HomePage_Banner
HomePage_Banner
HomePage_Banner

ಡಾ.ರೋಹಿಣಾಕ್ಷ ಶಿರ್ಲಾಲುರವರಿಗೆ 2020ರ ಸಾಲಿನ ಕುವೆಂಪು ಹಿರಿಯ ಫೆಲೋಶಿಪ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಕುವೆಂಪು ಸಾಹಿತ್ಯ ಅಧ್ಯಯನಕ್ಕಾಗಿ ನೀಡುವ ಬಹು ಪ್ರತಿಷ್ಠಿತ ೨೦೨೦ರ ಸಾಲಿನ ಕುವೆಂಪು ಹಿರಿಯ ಫೆಲೋಶಿಪ್‌ಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿಯ ಜಾನಪದಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ರವರು ಆಯ್ಕೆಯಾಗಿದ್ದಾರೆ. ಈ ಫೆಲೋಶಿಪ್ ಮೂರು ಲಕ್ಷ ರೂಪಾಯಿಗಳದ್ದಾಗಿದ್ದು ಹತ್ತು ತಿಂಗಳ ಕಾಲಾವಧಿಯದ್ದಾಗಿರುತ್ತದೆ.

“ಕುವೆಂಪು ಸಾಹಿತ್ಯದಲ್ಲಿ ಪ್ರಕಟಗೊಂಡ ದಾರ್ಶನಿಕತೆ, ಆಧ್ಯಾತ್ಮಿಕತೆ ಮತ್ತು ವೈಚಾರಿಕತೆಯ ಸ್ವರೂಪ ವಿವೇಚನೆ” ಎಂಬ ವಿಷಯದಲ್ಲಿ ಇವರು ಸಲ್ಲಿಸಿದ ಸಂಶೋಧನಾ ಪ್ರಸ್ತಾವನೆಯನ್ನು ಪ್ರಾಧಿಕಾರದ ತಜ್ಞರ ಸಮಿತಿ ಪರಿಶೀಲಿಸಿ ಸಂದರ್ಶನ ನಡೆಸಿ ಈ ಆಯ್ಕೆಯನ್ನು ನಡೆಸಿದೆ. ಹತ್ತು ತಿಂಗಳ ಅವಧಿಯಲ್ಲಿ ಪ್ರಾಧಿಕಾರವು ಸೂಚಿಸುವ ಸ್ಥಳದಲ್ಲಿ ಎರಡು ಉಪನ್ಯಾಸಗಳನ್ನು ಇವರು ನೀಡಬೇಕಾಗುತ್ತದೆ ಮತ್ತು ಅಧ್ಯಯನದ ಮಹಾಪ್ರಬಂಧವನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಇವರು ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ಈ ಹಿಂದೆ ಕನ್ನಡ ಉಪನ್ಯಾಸಕಾರಾಗಿ ಕರ್ತವ್ಯ ನಿರ್ವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.