HomePage_Banner
HomePage_Banner
HomePage_Banner
HomePage_Banner

ರೋಟರಿ ಪುತ್ತೂರು ಎಲೈಟ್‌ನಿಂದ ಸರಕಾರಿ ಆಸ್ಪತ್ರೆಗೆ ಫ್ಯಾನ್‌ಗಳ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಎರಡು ದಿನದ ಹಿಂದೆ ಶಾಸಕರ ವಾರ್ ರೂಮ್‌ನ ತುರ್ತುವಾಹನಕ್ಕೆ ಕೋವಿಡ್ ಕಿಟ್‌ಗಳನ್ನು ನೀಡಿದ ರೋಟರಿ ಪುತ್ತೂರು ಎಲೈಟ್‌ನಿಂದ ಪುತ್ತೂರು ಸರಕಾರಿ ಅಸ್ಪತ್ರೆಗೆ ನಾಲ್ಕು ಗೋಡೆಗೆ ಅಳವಡಿಸುವ ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದೆ.

ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡುವ ನಿಟ್ಟಿನಲ್ಲಿ ಆಸ್ಪತ್ರೆಯ ಸುಪರ್ದಿಗೆಯಲ್ಲಿರುವ ಸ್ಥಳೀಯ ಹಳೆ ಸಬ್‌ರಿಜಿಸ್ಟ್ರಾರ್ ಕಚೇರಿ ಕಟ್ಟಡದಲ್ಲಿ ಕೋವಿಡ್ ಲಸಿಕೆ ನೀಡುವ ಸಂದರ್ಭ ಫ್ಯಾನ್‌ನ ಅವಶ್ಯಕತೆಯನ್ನು ಮನಗಂಡ ರೋಟರಿ ಪುತ್ತೂರು ಎಲೈಟ್ ನಾಲ್ಕು ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದೆ. ರೋಟರಿ ರೋಟರಿ ಜಿಲ್ಲೆ ೩೧೮೧ರ ಡಿಸ್ಟ್ರಿಕ್ಟ್ ಸೆಕ್ರೆಟರಿ (ಪ್ರಾಜೆಕ್ಟ್) ಆಸ್ಕರ್ ಆನಂದ್, ರೋಟರಿ ಪುತ್ತೂರು ಎಲೈಟ್‌ನ ಕ್ಲಬ್ ಸರ್ವಿಸ್ ಚೇರ್ಮನ್ ಪ್ರೇಮಾನಂದ್, ಯೂತ್ ಸರ್ವೀಸ್ ಡೈರೆಕ್ಟರ್ ಮೌನೇಶ ವಿಶ್ವಕರ್ಮ, ಬಾಲುನಾಯ್ಕ್ ಅವರು ಫ್ಯಾನ್‌ಗಳನ್ನು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಫೀಕ್ ದರ್ಬೆ, ಡಾ.ಕೃಷ್ಣಪ್ರಸನ್ನ, ರಾಜೇಶ್ ಬನ್ನೂರು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಸಕರ ವಾರ್‌ರೂಮ್‌ನ ಪಿ.ಜಿ.ಜಗನ್ನಿವಾಸ ರಾವ್,  ಚಂದ್ರಶೇಖರ್ ರಾವ್ ಬಪ್ಪಳಿಗೆ, ಶಿವಕುಮಾರ್ ಪಿ.ಬಿ, ರಾಘವೇಂದ್ರ ಪ್ರಭು, ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.