HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ: ಕೋವಿಡ್-19 ಮುಂಜಾಗ್ರತಾ ಸಭೆ | ಗ್ರಾಮವನ್ನು ಕೊರೊನಾಮುಕ್ತ ಗ್ರಾಮವನ್ನಾಗಿಸಲು ಕಾರ್ಯಯೋಜನೆ ರೂಪಿಸಿ-ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆಸ್ಪತ್ರೆಯಲ್ಲಿ ಶಾಮಿಯಾನ ವ್ಯವಸ್ಥೆಗೆ ಸೂಚನೆ
  • ಪಂಚಾಯಿತಿಯಲ್ಲಿ 2 ದಿನಗಳಿಗೊಮ್ಮೆ ಕಾರ್ಯಪಡೆ ಸಭೆ ನಡೆಸಬೇಕು.
  • ಉಪ್ಪಿನಂಗಡಿ ಪಿಡಿಓ. ಗೈರು, ಕೆರಳಿದ ಶಾಸಕರು


ಉಪ್ಪಿನಂಗಡಿ: ಕೋವಿಡ್-೧೯ ಎರಡನೇ ಅಲೆ ಅತೀ ವೇಗದಲ್ಲಿ ಹರಡುತ್ತಿದ್ದು, ಭಾರೀ ಅಪಾಯವನ್ನು ಸೃಷ್ಠಿಸುವ ಸಾಧ್ಯತೆ ಇರುವುದರಿಂದ ಎಲ್ಲರೂ ಮುನ್ನೆಚ್ಚರಿಕಾ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಗ್ರಾಮ ಮಟ್ಟದ ಪ್ರತಿಯೊಬ್ಬ ಅಧಿಕಾರಿಯೂ ಕೇಂದ್ರ ಸ್ಥಾನದಲ್ಲೇ ಇದ್ದು, ಪ್ರತಿಯೊಂದು ಗ್ರಾಮವನ್ನೂ ಕೊರೊನಾಮುಕ್ತ ಗ್ರಾಮವನ್ನಾಗಿಸಲು ಕಾರ್ಯಯೋಜನೆ ರೂಪಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಸೂಚನೆ ನೀಡಿದರು.

ಅವರು ಎ. ೩೦ರಂದು ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಆಸ್ಪತ್ರೆ ವ್ಯಾಪ್ತಿಯ ಗ್ರಾಮಗಳ ಪಿಡಿಓ. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಒಳಗೊಂಡಂತೆ ಕರೆಯಲಾದ ಕೋವಿಡ್-೧೯ ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸವನ್ನು ಬದಿಗಿಟ್ಟು, ಜನರ ಆರೋಗ್ಯ ರಕ್ಷಣೆ ಮತ್ತು ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ. ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಕೋವಿಡ್-೧೯ ಎದುರಿಸುವ ಸಲುವಾಗಿ ಆರೋಗ್ಯ ಇಲಾಖೆಗೆ ನೆರವಾಗಲು ತಲಾ ಇಬ್ಬರು ಶಿಕ್ಷಕರನ್ನು ನಿಯೋಜಿಸಲಾಗಿದೆ. ಅವರ ಸಹಕಾರ ಮತ್ತು ಆಶಾ ಕಾರ್‍ಯಕರ್ತೆಯರು, ಅಂಗನವಾಡಿ ಕಾರ್‍ಯಕರ್ತೆಯರ ಸಹಕಾರ ಪಡೆದು ಪ್ರತಿನಿತ್ಯ ಗ್ರಾಮದ ಸ್ಥಿತಿಗತಿಯ ಬಗ್ಗೆ ಅವಲೋಕನ ನಡೆಸಬೇಕು, ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು, ತಲಾ ೨ ದಿನಗಳಿಗೊಮ್ಮೆ ಗ್ರಾಮ ಪಂಚಾಯಿತಿ ಕಾರ್ಯಪಡೆಯ ಸಭೆ ನಡೆಸಬೇಕು ಎಂದು ಸೂಚಿಸಿದರು.
ಅಕ್ಸಿಜನ್ ಕೊರತೆಯನ್ನು ನೀಗಿಸಲು ಸರ್ಕಾರ ಈಗಾಗಲೇ ಕಾರ್ಯ ಯೋಜನೆಯನ್ನು ರೂಪಿಸಿದ್ದು, ಪುತ್ತೂರಿನಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ, ಉಪ್ಪಿನಂಗಡಿಯಲ್ಲಿ ಯಥೇಚ್ಚಾ ದಸ್ತಾನು ಯೋಜನೆಯನ್ನು ರೂಪಿಸಲಾಗಿದ್ದು, ವಾರದೊಳಗೆ ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಲಭ್ಯವಾಗಲಿದೆ. ಪರಿಸ್ಥಿತಿಯ ಮೇಲೆ ನಿಗಾವಿರಿಸಲಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆ ಬಂದೊದಗಿದರೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಕೊರೊನಾ ಪೀಡಿತರ ಚಿಕಿತ್ಸೆಗೆ ಸಕಲ ಸಿದ್ದತೆ ನಡೆದಿದೆ. ಮಾತ್ರವಲ್ಲದೆ ಉಪ್ಪಿನಂಗಡಿಯ ವಿದ್ಯಾರ್ಥಿನಿ ನಿಲಯವನ್ನೂ ತಾತ್ಕಾಲಿಕ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.

ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದವರ ಬಗ್ಗೆ ನಿಗಾವಿರಿಸಿಸುವುದು. ಅವರನ್ನು ಹೋಂ ಕ್ವಾರೆಂಟೈನ್‌ಗೆ ಒಳಪಡಿಸುವುದು, ಪಾಸಿಟಿವ್ ಬಂದವರ, ಮತ್ತವರ ಸಂಪರ್ಕದವರ ನಿಯಂತ್ರಿಸುವ ಕಾರ್ಯವನ್ನು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಟ್ಟುನಿಟ್ಟಾಗಿ ನಡೆಸಬೇಕೆಂದು ಸೂಚಿಸಿದರು. ಬೀಟ್ ಪೊಲೀಸರ ಮೂಲಕ ಪ್ರತಿ ಗ್ರಾಮವೂ ಕೊರೊನಾ ಮುನ್ನೆಚರಿಕಾ ನಿಯಮಾವಳಿಯನ್ನು ಪಾಲಿಸುವಂತಾಗಲು ಗಮನ ಹರಿಸಬೇಕು. ಸರ್ಕಾರದ ನಿಯಮಾವಳಿಯನ್ನು ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆಯಲ್ಲಿ ಶಾಮಿಯಾನ ವ್ಯವಸ್ಥೆಗೆ ಸೂಚನೆ:
ಸಭೆಗೆ ಶಾಸಕರು ಬಂದಾಗ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆ ಮುಂದೆ ಜನ ದಟ್ಟನೆ, ಯಾವುದೇ ಅಂತರ ಪಾಲಿಸಲಾಗದೇ ವ್ಯಾಕ್ಸಿನ್‌ಗಾಗಿ ಕಾಯುತ್ತಿದ್ದ ದೃಶ್ಯವನ್ನು ಕಂಡು ಅಸಮಾಧಾನಗೊಂಡ ಶಾಸಕರು, ತಾಲೂಕು ಆರೋಗ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಹೊರಾಂಗಣದಲ್ಲಿ ಶಾಮಿಯಾನ ಹಾಕಿ ಜನರು ಅಂತರವನ್ನು ಪಾಲಿಸಿಕೊಂಡು ಸಾವಕಾಶವಾಗಿ ಸೇವೆ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಆದೇಶಿಸಿದರು.

ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್ ಕುಮಾರ್ ರೈ, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ಮುಷಾಕಿರ್ ಹುಸೇನ್, ವೈಧ್ಯಾಧಿಕಾರಿ ಡಾ| ಝರಿನಾ ಫಾತಿಮಾ ಪೂರಕ ಮಾಹಿತಿ ನೀಡಿದರು. ವೈದ್ಯರಾದ ಡಾ. ಅನೀಶ್ ಕುಮಾರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕುಮಾರ್ ಕಾಂಬ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಜಾತ ಕೃಷ್ಣ ಆಚಾರ್ಯ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ, ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಸುರೇಶ್ ಅತ್ರಮಜಲು, ಲೊಕೇಶ್ ಬೆತ್ತೋಡಿ, ಧನಂಜಯ, ಲೆಕ್ಕ ಸಹಾಯಕ ರವಿಚಂದ್ರ, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷೆ ಸ್ವಪ್ನ ಜೀವನ್, ಪಿಡಿಓ. ಕುಮಾರಯ್ಯ, ಕೋಡಿಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ, ಉಪಾಧ್ಯಕ್ಷೆ ಉಷಾ ಲಕ್ಷ್ಮಣ ಪೂಜಾರಿ, ಪಿಡಿಓ. ಚಿತ್ರಾವತಿ, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಪಿಡಿಓ. ದಿನೇಶ್ ಶೆಟ್ಟಿ, ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ, ಉಪಾಧ್ಯಕ್ಷೆ ಸ್ಮಿತಾ, ಕಾರ್‍ಯದರ್ಶಿ ಗಿರಿಯಪ್ಪ ಗೌಡ, ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯ, ಲೆಕ್ಕ ಸಹಾಯಕಿ ಜಯಂತಿ, ಆರೋಗ್ಯ ಇಲಾಖೆಯ ರವಿಶಂಕರ ಉಪಸ್ಥಿತರಿದ್ದರು.

ಉಪ್ಪಿನಂಗಡಿ ಪಿಡಿಓ. ಗೈರು, ಕೆರಳಿದ ಶಾಸಕರು
ಸಭೆಗೆ ಆಗಮಿಸುತ್ತಿದ್ದಂತೆಯೇ ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡ ಶಾಸಕರು ಅಗತ್ಯ ಕ್ರಮ ಕೈಗೊಳ್ಳಲು ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಓ.ರನ್ನು ಕರೆದಾಗ ಅವರು ಹಾಜರಿರಲಿಲ್ಲ. ಸಭೆ ಆರಂಭವಾಗಿ ಗ್ರಾಮ ಪಂಚಾಯಿತಿವಾರು ಶಾಸಕರು ಪಂಚಾಯಿತಿಯಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಲು ಉಪ್ಪಿನಂಗಡಿ ಪಿಡಿಓ.ರನ್ನು ಕರೆದಾಗಲೂ ಅವರು ಬಂದಿರಲಿಲ್ಲ. ಅವರನ್ನು ಕೂಡಲೇ ಕರೆಸಬೇಕೆಂದು ಶಾಸಕರು ನಿರ್ದೇಶನ ನೀಡಿದರೂ ಸಭೆ ಮುಗಿಯುವ ತನಕ ಪಿಡಿಓ ಆಗಮಿಸಲಿಲ್ಲ.

ಪಿಡಿಓ.ರವರ ಪರವಾಗಿ ಸಭೆಗೆ ಬಂದಿದ್ದ ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ರವಿಚಂದ್ರರಲ್ಲಿ ಸ್ಪಷ್ಟ ಮಾಹಿತಿ ಇರಲಿಲ್ಲ. ಗ್ರಾಮ ಪಂಚಾಯಿತಿನಲ್ಲಿ ಕಾರ್ಯಪಡೆಯನ್ನು ರಚಿಸಿದ ಬಗ್ಗೆ ಕೇಳಲಾದ ಪ್ರಶ್ನೆಗೂ, ನಡೆದ ಸಭೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ಇರಲಿಲ್ಲ. ಗ್ರಾಮದಲ್ಲಿ ಒಂದೂ ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲ ಎನ್ನುತ್ತಿದ್ದಂತೆ ಸಭೆಯಲ್ಲಿದ್ದ ಆರೋಗ್ಯ ಸಹಾಯಕಿ ೫ ಪ್ರಕರಣ ನಿನ್ನೆವರೆಗೆ ದಾಖಲಾಗಿದೆ ಎಂದು ಹೇಳುತ್ತಿದ್ದಂತೆ ಅವರು ತಬ್ಬಿಬ್ಬಾದರು.

ಇದರಿಂದ ಕೆರಳಿದ ಶಾಸಕರು, ಪಿಡಿಓ. ಏಕೆ ಬಂದಿಲ್ಲ, ಅವರು ಎಲ್ಲಿ ಎಂದರು, ಆಗ ರವಿಚಂದ್ರರವರು ಅವರು ಮಂಗಳೂರು ಜಿಲ್ಲಾ ಪಂಚಾಯಿತಿ ಕಚೇರಿಗೆ ಹೋಗಿದ್ದಾರೆ, ಎನ್ನುತ್ತಿದಂತೆ ಅವರು ಸಭೆ ಕರೆದಿರುವಾಗ ಗೈರು ಹಾಜರಾಗಿರುವುದು ಕ್ಷಮಿಸುವಂತದ್ದಲ್ಲ, ಅವರಿಗೆ ಇಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂದಾದರೆ, ಬೇರೆ ಎಲ್ಲಾದರೂ ಹೋಗಲಿ, ಇಡೀ ದೇಶವೇ ತಲ್ಲಣಗೊಂಡರೂ ಇಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗಂಭೀರತೆಯೇ ಇಲ್ಲ. ಗ್ರಾಮದ ಸೂಕ್ಷ್ಮತೆಯ ಮಾಹಿತಿಯೇ ಇಲ್ಲ. ಸಭೆಗೆ ಹಾಜರಾತಿ ಕಡ್ಡಾಯವೆಂದರೂ ಸಭೆಯನ್ನು ನಿರ್ಲಕ್ಷಿಸಿದ ಪಿಡಿಓ. ವಿರುದ್ದ ಶಿಸ್ತುಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.