ಕೊರೊನಾ ಲಾಕ್‌ಡೌನ್ ಹಿನ್ನೆಲೆ : ಪುರುಷರಕಟ್ಟೆ ಸಂಪೂರ್ಣ ಸ್ತಬ್ಧ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸವಣೂರು : ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೇರಿರುವ ಲಾಕ್‌ಡೌನ್‌ನ ಮೂರನೇ ದಿನವಾದ ಶುಕ್ರವಾರವೂ ಗ್ರಾಮಾಂತರ ಭಾಗ ಸಂಪೂರ್ಣವಾಗಿ ಸ್ತಬ್ದವಾಗಿದೆ.ಸದಾ ವಾಹನಗಳು,ಜನರಿಂದ ತುಂಬಿರುತ್ತಿದ್ದ ಪುರುಷರಕಟ್ಟೆ ಬಿಕೋ ಎನ್ನುತ್ತಿದೆ.ನರಿಮೊಗರು ಗ್ರಾ.ಪಂ.ಕಛೇರಿ,ನರಿಮೊಗರು ಸಹಕಾರಿ ಸಂಘ,ಖಾಸಗಿ ಕ್ಲಿನಿಕ್‌ಗಳು ಕಾರ್ಯಾಚರಿಸಿದೆ. ಪುರುಷರಕಟ್ಟೆಯಿಂದ ಪುತ್ತೂರಿಗೆ ನಿತ್ಯ ಆಟೋರಿಕ್ಷಾ ಸರ್ವೀಸ್ ಇರುತ್ತಿದ್ದು,ಲಾಕ್‌ಡೌನ್ ಹಿನ್ನೆಲೆಯಲ್ಲಿ ರಿಕ್ಷಾ ತಂಗುದಾಣ ಖಾಲಿ ಖಾಲಿಯಾಗಿವೆ.

೧೦ ಗಂಟೆಯವರೆಗೆ ಅಗತ್ಯ ಸೇವೆಗಳ ಅಂಗಡಿಗಳು ತೆರೆದಿದ್ದವು,ಹೋಟೆಲ್‌ನಲ್ಲಿ ಪಾರ್ಸೆಲ್ ವ್ಯವಸ್ಥೆ ಮಾತ್ರ ಇತ್ತು.ಹೆಚ್ಚಾಗಿ ಮಧ್ಯಾಹ್ನದ ಊಟಕ್ಕೆ ಹೋಟೆಲ್ ನೆಚ್ಚಿಕೊಂಡ ವಿವಿಧ ಕಾಮಗಾರಿಗಳ ನಿರ್ವಹಣೆಯ ಗುತ್ತಿಗೆದಾರರು ಈಗ ಅಡುಗೆಗೆಂದೇ ಒಬ್ಬ ವ್ಯಕ್ತಿಯನ್ನು ನೇಮಿಸುವಂತಾಗಿದೆ.

ನರಿಮೊಗರಿನಲ್ಲಿ ವಾಹನ ತಪಾಸಣೆ
ನರಿಮೊಗರು ಜಂಕ್ಷನ್ ಬಳಿ ಪೊಲೀಸರು ಪೇಟೆಗೆ ಹೋಗುವ ವಾಹನಗಳನ್ನು ತಡೆದು ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿ ಸಂಚಾರಕ್ಕೆ ಅವಕಾಶ ನೀಡುತ್ತಿದ್ದರು.ಆದರೂ ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಒಳರಸ್ತೆಯ ಮೂಲಕ ಪೇಟೆಗೆ ಬರುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.