HomePage_Banner
HomePage_Banner
HomePage_Banner
HomePage_Banner

ಕುಪ್ಪೆಟ್ಟಿಯ ಸನಿಹ ರವರಿಗೆ ಕನ್ ಸ್ಟ್ರಕ್ಷನ್ ಮ್ಯಾನೇಜ್ ಮೆಂಟ್ ನಲ್ಲಿ ಎಂ.ಎಸ್ ಪದವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು:  ಕುಪ್ಪೆಟ್ಟಿ ನಿವಾಸಿ ಉದ್ಯಮಿ ರಾಜೇಂದ್ರ ಮತ್ತು ಉಪನ್ಯಾಸಕಿ ರೇಖಾ ರಾಜೇಂದ್ರ  ದಂಪತಿ ಪುತ್ರಿ ಸನಿಹ ಕುಪ್ಪೆಟ್ಟಿ ರವರು  ದ ಯುನಿವರ್ಸಿಟಿ ಆಫ್  ಅಡಿಲೈಡ್ , ಸೌತ್ ಆಸ್ಟ್ರೇಲಿಯಾ (THE UNIVERSITY OF ADELAIDE ,SOUTH AUSTRALIYA, AUSTRALIA) ದಲ್ಲಿ   ಕನ್ ಸ್ಟ್ರಕ್ಷನ್ ಮ್ಯಾನೇಜ್ ಮೆಂಟ್ ನಲ್ಲಿ  ಮಾಸ್ಟರ್ ಪದವಿಯನ್ನು ಪಡೆದಿದ್ದಾರೆ

ಇವರು ಉಪ್ಪಿನಂಗಡಿಯ ಇಂದ್ರಪ್ರಸ್ತ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣ, ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಹಾಗೂ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಲ್ಲಿ ಪಿಯುಸಿ ವ್ಯಾಸಂಗ ಮಾಡಿರುತ್ತಾರೆ. ತುಮಕೂರಿನ ಸಿದ್ದಗಂಗಾ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನಲ್ಲಿ ಆರ್ಕಿಟೆಕ್ಟರ್ ( ARCHITECTURE ) ಪದವಿಯನ್ನು ಪಡೆದಿರುತ್ತಾರೆ.

ಬಾಲ್ಯದಿಂದಲೂ ಕಲಿಕೆ, ಭರತನಾಟ್ಯ, ಸಂಗೀತ, ಚಿತ್ರಕಲೆ, ನಾಟಕ, ಛದ್ಮವೇಷ, ಅಭಿನಯ ಇನ್ನಿತರ ಪಠ್ಯೇತರ ವಿಷಯಗಳಲ್ಲಿ ಸಕ್ರಿಯರಾಗಿದ್ದ  ಇವರಿಗೆ ಯುವ ವಿಜ್ಞಾನಿ ಪ್ರಶಸ್ತಿ, ರಾಷ್ಟ್ರಪತಿ ಪುರಸ್ಕಾರ, ಅಸಾಧಾರಣ ಪ್ರತಿಭೆ ಪುರಸ್ಕಾರ, NTSE ಸ್ಕಾಲರ್ ಶಿಪ್ ಇತ್ಯಾದಿ 500ಕ್ಕೂ ಅಧಿಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ.  ಪ್ರಸ್ತುತ ಇವರು ಆಸ್ಟ್ರೇಲಿಯಾದಲ್ಲಿ ಎಂ.ಎಸ್ ಪದವಿ ಜೊತೆಗೆ ಭರತನಾಟ್ಯ ತರಗತಿಗಳನ್ನು ನಡೆಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.