HomePage_Banner
HomePage_Banner
HomePage_Banner
HomePage_Banner

ಕುಂಬ್ರ ಗೂಡಂಗಡಿ ಭಸ್ಮ: ವರ್ತಕರ ಸಂಘದಿಂದ ಧನ ಸಹಾಯ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಪೇಟೆಯಲ್ಲಿ ಕಳೆದ 12 ವರ್ಷಗಳಿಂದ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಶೇಖಮಲೆ ನಿವಾಸಿ ಅಬ್ದುಲ್ ಬಶೀರ್ ಎಂಬವರ ಗೂಡಂಗಡಿಯು ಇತ್ತೀಚೆಗೆ ಬೆಂಕಿ ಆಕಸ್ಮಿಕದಿಂದ ಸಂಪೂರ್ಣ ಭಸ್ಮಗೊಂಡು ೫ ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿತ್ತು. ಈ ಬಗ್ಗೆ ಕುಂಬ್ರ ವರ್ತಕರ ಸಂಘವು ತುರ್ತು ಸ್ಪಂದನೆ ನೀಡುವ ಮೂಲಕ ಅಬ್ದುಲ್ ಬಶೀರ್‌ರವರಿಗೆ ಸಂಘದ ವತಿಯಿಂದ ಸಹಾಯಧನ ವಿತರಣೆ ಮಾಡಲಾಯಿತು.

ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರರವರು ಸಹಾಯಧನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೊಪ್ಪಳ, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನಿತೀಶ್ ಕುಮಾರ್ ಶಾಂತಿವನ, ಹನೀಫ್ ಶೇಖಮಲೆ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ೧೨ ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದ ಅಬ್ದುಲ್ ಬಶೀರ್‌ರವರು ವರ್ತಕ ಸಂಘದ ಸಕ್ರೀಯ ಸದಸ್ಯರಾಗಿದ್ದರು. ಸಂಘದ ವತಿಯಿಂದ ತುರ್ತು ಸಹಾಯಧನ ನೀಡಿದ್ದೇವೆ. ಏನಾದರೂ ಸಹಾಯಧನ ನೀಡುವಂತೆ ಸಂಘದ ವತಿಯಿಂದ ಶಾಸಕರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು – ಶ್ಯಾಮ್‌ಸುಂದರ್ ರೈ ಕೊಪ್ಪಳ, ಸ್ಥಾಪಕ ಅಧ್ಯಕ್ಷರು ವರ್ತಕರ ಸಂಘ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.