HomePage_Banner
HomePage_Banner
HomePage_Banner
HomePage_Banner

ಪುತ್ತೂರು ಸರಕಾರಿ ಆಸ್ಪತ್ರೆಗೆ ರಾಜ್ಯದಲ್ಲಿ ಮೂರನೇ ಸ್ಥಾನ.. ಇ-ಹಾಸ್ಪಿಟಲ್ ಹಂತದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

✍️ ಲೋಕೇಶ್ ಬನ್ನೂರು

  • ಸಿಬಂದಿಗಳ ಕೊರತೆ ನಡುವೆಯೂ ಕೋವಿಡ್ ಸಂದರ್ಭ ಉತ್ತಮ ಕಾರ್ಯನಿರ್ವಹಣೆ

ಪುತ್ತೂರು:ಸಿಬ್ಬಂದಿಗಳ ಕೊರತೆ ಹಾಗೂ ಸವಲತ್ತುಗಳ ಕೊರತೆಯ ನಡುವೆಯೂ ಕಳೆದ ಬಾರಿಯ ಕೋವಿಡ್ ಸಂದರ್ಭದಲ್ಲಿ ತೋರಿದ ಉತ್ತಮ ಕಾರ್ಯ ನಿರ್ವಹಣೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸರಕಾರದ ಪ್ರಶಂಸೆ ಸಿಕ್ಕಿದ್ದು, ರಾಜ್ಯದಲ್ಲಿ ೩ನೇ ಸ್ಥಾನ ಮತ್ತು ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ.

ಮುಖ್ಯವಾಗಿ ಈ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕಕ್ಕೆ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುತ್ತಿದ್ದು, ದಿನವೊಂದಕ್ಕೆ ೫೦ಕ್ಕೂ ಮಿಕ್ಕಿದ ರೋಗಿಗಳಿಗೆ ಡಯಾಲಿಸಿಸ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.ಕಳೆದ ಕೋವಿಡ್ ಸಂದರ್ಭದಲ್ಲಿ ಡಯಾಲಿಸಿಸ್ ಘಟಕವನ್ನು ತೆರೆಯುವ ಮೂಲಕ ಯಾವುದೇ ರೋಗಿಗೂ ಕೊರೋನಾ ವೈರಾಣು ತಗುಲದಂತೆ ನೋಡಿಕೊಳ್ಳಲಾಗಿದೆ.ಈ ನಿಟ್ಟಿನಲ್ಲಿ ಉತ್ತಮ ನಿರ್ವಹಣೆಗಾಗಿ ಆಸ್ಪತ್ರೆಗೆ ಮೂರನೆ ಸ್ಥಾನ ಲಭಿಸಿದೆ.ಕೋವಿಡ್ ಮಹಾಮಾರಿ ಎಲ್ಲಾ ಕಡೆಗಳಲ್ಲಿ ಹೆಚ್ಚಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೂ ಹೆಚ್ಚಿನ ಸಂಖ್ಯೆಯ ಕೋವಿಡ್ ಪಾಸಿಟಿವ್ ರೋಗಿಗಳು ಚಿಕಿತ್ಸೆಗಾಗಿ ದಾಖಲಾಗಿದ್ದರು.ಕಳೆದ ಬಾರಿ ಇನ್ನೂರಕ್ಕೂ ಮಿಕ್ಕಿದ ಕೋವಿಡ್ ಪಾಸಿಟಿವ್ ರೋಗಿಗಳು ಈ ಆಸ್ಪತ್ರೆಯಲ್ಲಿ ದಾಖಲಾಗಿ, ಯಾವುದೇ ತೊಂದರೆಯಿಲ್ಲದೆ ಗುಣಮುಖರಾಗಿ ಹೋಗಿದ್ದಾರೆ.ಕೇವಲ ಇಬ್ಬರು ರೋಗಿಗಳನ್ನು ಮಾತ್ರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿರುವುದನ್ನು ಹೊರತುಪಡಿಸಿ ಉಳಿದೆಲ್ಲಾ ರೋಗಿಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.ಅಲ್ಲದೇ ಈ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ ಯಾವೊಬ್ಬ ರೋಗಿಯೂ ಮೃತಪಟ್ಟಿಲ್ಲ.ಈ ಬಾರಿಯೂ ಕೋವಿಡ್ ೧೯ನ ಎರಡನೇ ಅಲೆ ಕಾರಣದಿಂದಾಗಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯ ಕೋವಿಡ್ ಪಾಸಿಟಿವ್ ರೋಗಿಗಳು ದಾಖಲಾಗುತ್ತಿದ್ದಾರೆ.ಈ ಕಾರಣಕ್ಕಾಗಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ೫೦ ಬೆಡ್‌ಗಳಿಗೆ ಆಕ್ಸಿಜನ್ ಪೈಪ್ ಲೈನ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ೨೬ ಬೆಡ್ ಗಳನ್ನು ಕೇವಲ ಕೋವಿಡ್ ರೋಗಿಗಳಿಗಾಗಿಯೇ ಮೀಸಲಿಡಲಾಗಿದೆ.

ಇ-ಹಾಸ್ಪಿಟಲ್ ಹಂತದಲ್ಲಿರುವ ಆಸ್ಪತ್ರೆ: ಪುತ್ತೂರು ಸರಕಾರಿ ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕು ಮತ್ತು ಸರಕಾರಿ ವೈದ್ಯಕೀಯ ಕಾಲೇಜು ಆಗಬೇಕೆನ್ನುವ ಬೇಡಿಕೆಯ ಮಧ್ಯೆ ಆಸ್ಪತ್ರೆ ಹಂತ ಹಂತವಾಗಿ ವಿವಿಧ ತಾಂತ್ರಿಕ ಸೌಕರ್ಯಗಳನ್ನು ಹೊಂದುತ್ತಿರುವುದು ಪುತ್ತೂರು ಹಾಗೂ ಸುತ್ತಮುತ್ತಲಿನ ತಾಲೂಕುಗಳ ಬಡ ಫಲಾನುಭವಿಗಳಿಗೆ ಆಶಾಕಿರಣವಾಗುತ್ತಿದೆ.

ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಸರಕಾರಿ ಆಸ್ಪತ್ರೆಯಾಗಿರುವ ಪುತ್ತೂರು ಸರಕಾರಿ ಆಸ್ಪತ್ರೆ ೧೦೦ ಬೆಡ್‌ಗಳ ಆಸ್ಪತ್ರೆಯಾಗಿದೆ.ಕಳೆದ ಬಾರಿ ಇನ್ನೂರಕ್ಕೂ ಮಿಕ್ಕಿದ ಕೋವಿಡ್ ಪಾಸಿಟಿವ್ ರೋಗಿಗಳು ಈ ಆಸ್ಪತ್ರೆಯಲ್ಲಿ ದಾಖಲಾಗಿ, ಯಾವುದೇ ತೊಂದರೆಯಿಲ್ಲದೆ ಗುಣಮುಖರಾಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಈಗಾಗಲೇ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಖಾಸಗಿ ಆಸ್ಪತ್ರೆಯಲ್ಲೂ ಇಲ್ಲದ ಆಧುನಿಕ ೨ ಎಕ್ಸ್‌ರೇ ಯಂತ್ರಗಳು, ಡಯಾಲಿಸಿಸ್ ವ್ಯವಸ್ಥೆಯಲ್ಲಿ ಬಳಕೆಗೆ ಹೊಸದಾಗಿ ೩೦ ಕೆ.ವಿ. ಜನರೇಟರ್ ಸೇರಿದಂತೆ ಕೋವಿಡ್ ಬರುವುದಕ್ಕೆ ಮುಂಚೆ ೧೦ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯಿದ್ದ ಈ ಆಸ್ಪತ್ರೆಯಲ್ಲಿ ಇದೀಗ ೩೪ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ, ಜಂಬೋಸಿಲಿಂಡರ್ ಮೂಲಕ ನೇರ ೫೦ ಬೆಡ್‌ಗಳಿಗೂ ಸಂಪರ್ಕ ಹೊಂದುವ ಮೂಲಕ ಇ- ಹಾಸ್ಪಿಟಲ್ ಹಂತದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ನಿರೀಕ್ಷಣ ಕೊಠಡಿ, ಲಾಂಡ್ರಿ: ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸುವ ಕೊಠಡಿಯ ಬಳಿ ಸಂಬಂಧಿಕರು ಹಾಗೂ ಪೊಲೀಸರಿಗೆ ನಿಲ್ಲಲು ನಿರೀಕ್ಷಣ ಕೊಠಡಿ ನಿರ್ಮಾಣಗೊಂಡಿದೆ.ಅದೇ ರೀತಿ ಲಾಂಡ್ರಿ ನಿರ್ಮಾಣದ ಉzಶದಿಂದ ಆತ್ಯಾಧುನಿಕ ತಾಂತ್ರಿಕ ವಾಶಿಂಗ್ ಮೆಶಿನ್ ಕಾರ್ಯ ನಿರ್ವಹಿಸುತ್ತಿದೆ.ಒಮ್ಮೆಗೇ ೬೦ ಬೆಡ್‌ಶೀಟ್‌ಗಳನ್ನು ಈ ವಾಷಿಂಗ್ ಮೆಷಿನ್‌ನಲ್ಲಿ ಸ್ವಚ್ಛಗೊಳಿಸಬಹುದಾದ ವ್ಯವಸ್ಥೆಯನ್ನು ಹೊಂದಿದೆ.

ತಾಂತ್ರಿಕವಾಗಿಯೂ ಪುತ್ತೂರು ಸರಕಾರಿ ಆಸ್ಪತ್ರೆ ಪ್ರಗತಿಯ ಕಡೆಗೆ ಸಾಗುತ್ತಿದ್ದು, ಇ ಹಾಸ್ಪಿಟಲ್ ವ್ಯವಸ್ಥೆಗೆ ಸಿದ್ಧಗೊಂಡಿದೆ. ಆಸ್ಪತ್ರೆಯಲ್ಲಿ ಇರುವ ಮ್ಯಾನ್ಯುವಲ್ ಪ್ರಕ್ರಿಯೆಗೆ ಮುಕ್ತಾಯ ಹಾಕಲಾಗಿದ್ದು, ಎಲ್ಲವೂ ಆನ್‌ಲೈನ್ ನೋಂದಣಿ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಆನ್‌ಲೈನ್ ನೋಂದಣಿ ಚೀಟಿ ಲಭ್ಯವಾಗಲಿದ್ದು, ಇ ಹಾಸ್ಪಿಟಲ್ ವೆಬ್‌ಸೈಟ್‌ನಲ್ಲಿ ಒಮ್ಮೆ ಆಸ್ಪತ್ರೆಗೆ ಭೇಟಿ ನೀಡಿದ ರೋಗಿಯ ಎಲ್ಲ ಮಾಹಿತಿಗಳು ಶೇಖರಣೆಗೊಂಡಿರುತ್ತವೆ. ಮತ್ತೆ ಭೇಟಿ ನೀಡಿದ ಸಂದರ್ಭ ನೋಂದಣಿ ಸಂಖ್ಯೆಯ ಮೂಲಕ ಎಲ್ಲ ಡಾಟಾಗಳನ್ನು ತೆಗೆಯಲು ಸುಲಭ ಸಾಧ್ಯವಾಗುತ್ತದೆ.

5 ಡಯಾಲಿಸಿಸ್ ಯಂತ್ರ ಕಾರ್ಯನಿರ್ವಹಣೆ: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಯಂತೆ ಇಎನ್‌ಟಿ ಆಪರೇಷನ್, ಸರ್ಜರಿ, ಹೆರಿಗೆ ಆಪರೇಷನ್, ಅನಸ್ತೇಶಿಯಾ ಸಹಿತ ತಜ್ಞ ವೈದ್ಯರ ಉಪಸ್ಥಿತಿಯಲ್ಲಿ ನಡೆಯುತ್ತಿದೆ.ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನಿತ್ಯ ಸರಾಸರಿ ೮೦ ಕಾರ್ಡುಗಳ ವಿತರಣೆ ನಡೆಯುತ್ತಿದೆ.೫ ಡಯಾಲಿಸಿಸ್ ಯಂತ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.

ಕೋವಿಡ್ -೧೯ನ ೨ನೇ ಅಲೆಯಿಂದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ರಾಜ್ಯ ಸರಕಾರ ಹಲವು ಯೋಜನೆ ತಂದಿದೆ.ವಿಶೇಷವಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ ೫ ಜನ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು.ಆದರೆ ಇದೀಗ ೧೧ ಮಂದಿ ಪೂರ್ಣಾವಧಿ ಮತ್ತು ೫ ಮಂದಿ ವರ್ಷದ ಗುತ್ತಿಗೆ ಆಧಾರದಲ್ಲಿ ಸೇರಿದಂತೆ ಒಟ್ಟು ೧೬ ಮಂದಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ನಾಲ್ಕು ಜನರ ಹುದ್ದೆಯನ್ನು ಅತಿ ಶೀಘ್ರದಲ್ಲಿ ಭರ್ತಿ ಮಾಡಲಾಗುವುದು.ಕಳೆದ ಬಾರಿ ಉತ್ತಮ ಕೋವಿಡ್ ನಿರ್ವಹಣೆಗೆ ಸಂಬಂಧಿಸಿ ರಾಜ್ಯ ಸರಕಾರದಿಂದ ಪುತ್ತೂರು ಅಸ್ಪತ್ರೆ ಪ್ರಶಂಸೆಗೆ ಪಾತ್ರವಾಗಿದೆ ಸಂಜೀವ ಮಠಂದೂರು, ಶಾಸಕರು ಪುತ್ತೂರು

ಮುಖ್ಯವಾಗಿ ಈ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕಕ್ಕೆ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುತ್ತಿದ್ದು, ದಿನವೊಂದಕ್ಕೆ ೫೦ಕ್ಕೂ ಮಿಕ್ಕಿದ ರೋಗಿಗಳಿಗೆ ಡಯಾಲಿಸಿಸ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.ಕಳೆದ ಕೋವಿಡ್ ಸಂದರ್ಭದಲ್ಲಿ ಡಯಾಲಿಸಿಸ್ ಘಟಕವನ್ನು ತೆರೆಯುವ ಮೂಲಕ ಯಾವುದೇ ರೋಗಿಗೂ ಕೊರೋನಾ ವೈರಾಣು ತಗುಲದಂತೆ ನೋಡಿಕೊಳ್ಳಲಾಗಿದೆ.ಈ ಕಾರಣಕ್ಕಾಗಿಯೇ ಕೊರೋನಾ ಸಂದರ್ಭದಲ್ಲಿ ಡಯಾಲಿಸಿಸ್ ಘಟಕವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರಣಕ್ಕಾಗಿ ಈ ಆಸ್ಪತ್ರೆಗೆ ರಾಜ್ಯದಲ್ಲಿ ಮೂರನೇ ಉತ್ತಮ ಸರಕಾರಿ ಆಸ್ಪತ್ರೆ ಎನ್ನುವ ಮನ್ನಣೆಯೂ ದೊರೆತಿದೆ.ಅಲ್ಲದೆ ಜಿಲ್ಲೆಯ ಉತ್ತಮ ನಿರ್ವಹಣೆ ತೋರಿದ ಆಸ್ಪತ್ರೆಗಳ ಪೈಕಿ ಮೊದಲ ಸ್ಥಾನಕ್ಕೂ ಈ ಆಸ್ಪತ್ರೆ ಭಾಜನವಾಗಿದೆ.ಅಲ್ಲದೇ ಈ ಆಸ್ಪತ್ರೆಯ ಆರೋಗ್ಯ ಸಮಿತಿಯೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ಹೆಚ್ಚಿನ ಸಹಕಾರವನ್ನು ನೀಡುತ್ತಿದೆ ಎಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ಸಮಿತಿ ಸದಸ್ಯ ರಫೀಕ್ ಮತ್ತು ಡಾ. ಕೃಷ್ಣಪ್ರಸನ್ನ ತಿಳಿಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.