HomePage_Banner
HomePage_Banner
HomePage_Banner
HomePage_Banner

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಸನದ ವ್ಯವಸ್ಥೆ | ಸರ್ವೆ ಯುವಕಮಂಡಲದ ಕಾರ್ಯಕ್ಕೆ ಗ್ರಾಮಸ್ಥರ ಶ್ಲಾಘನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ಚಿಕಿತ್ಸೆ ಸೇರಿದಂತೆ ಇತರೆ ಚಿಕಿತ್ಸೆಗಳಿಗೆ ಬರುವ ಗ್ರಾಮಸ್ಥರಿಗೆ ಕುಳಿತುಕೊಳ್ಳಲು ಮತ್ತು ಆಯಾಸ ಪರಿಹರಿಸಿಕೊಳ್ಳಲು ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ ಶೀಟ್ ಅಳವಡಿಸುವ ಮೂಲಕ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ.

ಮುಂಡೂರು ಗ್ರಾಮ ಪಂ ವ್ಯಾಪ್ತಿಯಲ್ಲಿ ಇರುವ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರವು ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು ಲಾಕ್ ಡೌನ್ ಸಂಧರ್ಭದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸಾಮಾನ್ಯ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಹಾಗೂ ಲಸಿಕೆ ಪಡೆಯಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಸಾರ್ವಜನಿಕರಿಗೆ ನೆರವಾಗುವ ರೀತಿಯಲ್ಲಿ ಶೆಡ್ ನಿರ್ಮಾಣ ಮಾಡುವಂತೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ ನಮಿತಾ ನಾಯ್ಕ್ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಯುವಕ ಮಂಡಲದ ಅಧ್ಯಕ್ಷರಾದ ಗೌತಮ್ ರಾಜ್ ಕರಂಬಾರು, ಯುವಕ ಮಂಡಲದ ಮಾಜಿ ಅಧ್ಯಕ್ಷರು ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಕಮಲೇಶ್ ಸರ್ವೆದೋಳಗುತ್ತು ಹಾಗೂ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಅಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳನ್ನು ನಿಯಂತ್ರಿಸಲು ಸ್ವಯಂ ಸೇವಕರಾಗಿ ಅಧ್ಯಕ್ಷರಾದ ಗೌತಮ್ ರಾಜ್ ಕರಂಬಾರು, ಪ್ರ ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಪದಾಧಿಕಾರಿಗಳಾದ ಗುರುರಾಜ್ ಪಟ್ಟೆಮಜಲು, ಚಿರಾಗ್ ರೈ ಮೇಗಿನಗುತ್ತು, ನಂದನ್ ಸರ್ವೆದೋಳಗುತ್ತು, ಗ್ರಾಮ ಪಂ ಸದಸ್ಯರಾದ ಕಮಲೇಶ್ ಸರ್ವೆದೋಳಗುತ್ತು ಸಹಕರಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ ನಮಿತಾ ನಾಯ್ಕ್ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಕೊರೊನ ನಿಯಂತ್ರಣ ಕಾರ್ಯಪಡೆಯ ನೋಡೆಲ್ ಅಧಿಕಾರಿಯಾಗಿರುವ ತಾಲೂಕು ಪಂಚಾಯತ್ ಸಿ ಡಿ ಪಿ ಓ ಶ್ರೀ ಲತಾ, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿರುವ ಮೆಸ್ಕಾಂ ಂಇಇ ಶಿಲ್ಪಾ ಅವರು ಶ್ರೀ ಷಣ್ಮುಖ ಯುವಕ ಮಂಡಲದ ಸಾಮಾಜಿಕ ಕಳಕಳಿಯ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.