HomePage_Banner
HomePage_Banner
HomePage_Banner
HomePage_Banner

ಪುತ್ತೂರು ಪುರಭವನದಲ್ಲಿ ಸಚಿವರ ನೇತೃತ್ವದಲ್ಲಿ ಕೋವಿಡ್ ಸಂಬಂಧ ಸಭೆ ಆರಂಭ | ಸಭೆಯ ಆರಂಭದಲ್ಲಿಯೇ ಟಿ.ಎಚ್.ಓ.ಗೆ. ಡಿ.ಸಿ.‌ಕ್ಲಾಸ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮೇ‌ 1 ರಂದು ಪುತ್ತೂರು ಪುರಭವನದಲ್ಲಿ ಸಭೆ ಆರಂಭಗೊಂಡಿದೆ.‌ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಲ್ಲಾಳ್, ಡಿವೈಎಸ್ಪಿ ಡಾ.ಗಾನ ಕುಮಾರ್, ತಹಶೀಲ್ದಾರ್ ರಮೇಶ್ ಬಾಬು, ನಗರಸಭಾ ಕಮೀಷನರ್ ರೂಪ ಟಿ.ಶೆಟ್ಟಿ, ಪುತ್ತೂರು ಮತ್ತು ಕಡಬ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿಗಳು ಸಹಿತ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಾ.ಪಂ.ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಅಧ್ಯಕ್ಷ ಜೀವಂಧರ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಸಹಿತ ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಡಿ.ಸಿ.‌ಕ್ಲಾಸ್
ಸಭೆಯ ಆರಂಭದಲ್ಲಿಯೇ ದ.ಕ.ಜಿಲ್ಲಾಧಿಕಾರಿ ಡಾ.‌ಕೆ.ವಿ.ರಾಜೇಂದ್ರರವರು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ರೈಯವರನ್ನು ತರಾಟೆಗೆತ್ತಿಕೊಂಡರು.‌ ನಿನ್ನೆ ನಡೆದ ಸಭೆಯಲ್ಲಿ ಸಮರ್ಪಕ ಮಾಹಿತಿಯೊಂದಿಗೆ ಬರಬೇಕು, ಖಾಸಗಿ ಆಸ್ಪತ್ರೆಯವರನ್ನೂ ಈ ಸಭೆಗೆ ಕರೆಯಬೇಕು ಎಂದು ಸೂಚಿಸಿದ್ದರೂ ತಾವು ಸ್ಪಂದಿಸಿಲ್ಲ ಎಂದು ಡಿ.ಸಿ.ಯವರು ಟಿ.ಎಚ್.ಓ.ರವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಆರೋಗ್ಯಾಧಿಕಾರಿಯಾಗಿ ತಾವು ಕೊರೋನಾ ಎದುರಿಸಲು ಸಿದ್ಧರಾಗಿರಬೇಕು ಎಂದು ಡಿ.ಸಿ.ಯವರು ಡಾ.ಅಶೋಕ್ ರೈಗೆ ಸೂಚಿಸಿದರು.‌ ಕೊರೊನಾ ವೈರಸ್ ತಡೆಗಟ್ಟಲು ಬೇಕಾದ ಸಿದ್ಧತೆ, ರೋಗಿಗಳ ಆರೈಕೆ, ಆಸ್ಪತ್ರೆಗಳ ವ್ಯವಸ್ಥೆ ಮುಂತಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ‌.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.