HomePage_Banner
HomePage_Banner
HomePage_Banner
HomePage_Banner

ಬಾವಿ ನೀರು ಬತ್ತಿ ಹೋದರೆ ನಾವೇನು ಮಾಡಲಿ ಸಾರ್…!? ಕುಂಬ್ರ: ಬೋರ್‌ವೆಲ್ ಕೊರೆಯಲು ಸ್ಥಳೀಯರ ಆಕ್ಷೇಪ, ಮಾತಿನ ಚಕಮಕಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇಂದ್ರ ಸರಕಾರದ ಜಲಜೀವನ್ ಮಿಷನ್ ಯೋಜನೆಯಡಿ ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಖಮಲೆ ಎಂಬಲ್ಲಿ ಕೊಳವೆಬಾವಿ ಕೊರೆಯಲು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮೇ.೦೧ ರಂದು ನಡೆದಿದೆ. ಶೇಖಮಲೆ ಎಂಬಲ್ಲಿ ರಸ್ತೆಯ ಒಂದು ಬದಿಯಲ್ಲಿ ಕೊಳವೆಬಾವಿಗೆ ಪಾಯಿಂಟ್ ಹಾಕಲಾಗಿದ್ದು ಅದರಂತೆ ಕೊಳವೆಬಾವಿ ಕೊರೆಯುವ ವಾಹನ ಸ್ಥಳಕ್ಕೆ ಬಂದಾಗ ಸ್ಥಳೀಯರು ಇದಕ್ಕೆ ಅಡ್ಡಿ ಪಡಿಸಿ ಈ ಸ್ಥಳದಲ್ಲಿ ಕೊಳವೆಬಾವಿ ಕೊರೆಯಲು ನಾವು ಬಿಡುವುದಿಲ್ಲ ಏಕೆಂದರೆ ಈ ಭಾಗದಲ್ಲಿ ೬ ಕ್ಕೂ ಅಧಿಕ ಮನೆಗಳಿದ್ದು ಅವರೆಲ್ಲರೂ ಬಾವಿಯ ನೀರನ್ನೇ ಉಪಯೋಗಿಸುತ್ತಿದ್ದಾರೆ. ಕೊಳವೆಬಾವಿ ಕೊರೆದರೆ ಬಾವಿಯ ನೀರು ಬತ್ತಿ ಹೋಗುವ ಸಾಧ್ಯತೆ ಇದೆ. ನಮಗೆ ಸಾವಿರಗಟ್ಟಲೆ ಹಣ ಕಟ್ಟಿ ಪಂಚಾಯತ್‌ನಿಂದ ನೀರು ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಈ ಜಾಗದಲ್ಲಿ ಕೊಳವೆಬಾವಿ ಕೊರೆಯುವುದು ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲವರಿಗೆ ಮಾತಿನ ಚಕಮಕಿಯು ನಡೆಯಿತು.

ಬಾವಿ ನೀರು ಬತ್ತಿ ಹೋಗುವ ಭಯ
ಪ್ರಸ್ತುತ ಕೊಳವೆಬಾವಿ ಕೊರೆಯಲು ಉದ್ದೇಶಿಸಲಾಗಿದ್ದ ಜಾಗದ ಸುತ್ತಮುತ್ತ ಸುಮಾರು ೬ ಕ್ಕೂ ಅಧಿಕ ಮನೆಗಳಿದ್ದು ಈ ಮನೆಯವರು ಪಂಚಾಯತ್‌ನ ನಳ್ಳಿನೀರು ಸಂಪರ್ಕವನ್ನು ಪಡೆದುಕೊಂಡಿಲ್ಲ. ಬದಲಾಗಿ ಎಲ್ಲರ ಮನೆಯಲ್ಲೂ ಬಾವಿ ಇದ್ದು ಬೇಕಾದಷ್ಟು ನೀರು ಇದೆ. ಕೊಳವೆಬಾವಿ ಕೊರೆದರೆ ಬಾವಿಯ ನೀರು ಬತ್ತಿ ಹೋಗುತ್ತದೆ. ಮುಂದಿನ ದಿನಗಳಲ್ಲಿ ನೀರಿಗೆ ಸಮಸ್ಯೆಯಾಗಬಹುದು ಎಂಬ ಭಯದಿಂದ ಕೊಳವೆಬಾವಿ ಕೊರೆಯಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯರು. ಇದಲ್ಲದೆ ಪಾಯಿಂಟ್ ಕೂಡ ರಸ್ತೆಯ ಬದಿಯಲ್ಲಿ ಇದ್ದು ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಸಮಸ್ಯೆಯಾಗಬಹುದು ಎಂದು ತಿಳಿಸಿದರು.

ನೀರು ಕೊಡುವ ವ್ಯವಸ್ಥೆ ಮಾಡುತ್ತೇವೆ
ಸರಕಾರಿ ಯೋಜನೆಯಲ್ಲಿ ಮಂಜೂರು ಆದ ಕೊಳವೆಬಾವಿ ಇದಾಗಿದೆ. ಗ್ರಾಮದ ನೀರಿನ ಸಮಸ್ಯೆಯನ್ನು ಇತ್ಯರ್ಥಪಡಿಸುವ ಸಲುವಾಗಿಯೇ ಕೊಳವೆಬಾವಿ ಕೊರೆಯುತ್ತಿದ್ದೇವೆ. ಈ ಭಾಗದ ಜನರಿಗೆ ನೀರಿನ ಸಮಸ್ಯೆಯಾದರೆ ಅದಕ್ಕೆ ಪಂಚಾಯತ್ ಹೊಣೆ, ಎಲ್ಲರಿಗೂ ಪೈಪುಲೈನ್ ಹಾಕಿ ನೀರು ಕೊಡುವ ವ್ಯವಸ್ಥೆಯನ್ನು ಪಂಚಾಯತ್‌ನಿಂದ ಮಾಡುತ್ತೇವೆ. ನೀರು ಇಲ್ಲದೇ ಆಗಬಹುದು ಎಂಬ ಭಯ ಬೇಡ ಎಂದು ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ನೀರು ಬೇಕು
ಕೆಲವಷ್ಟು ಮಂದಿ ಕೊಳವೆಬಾವಿ ಕೊರೆಯುವುದು ಬೇಡ ಎಂದು ಆಕ್ಷೇಪಣೆ ಸಲ್ಲಿಸಿದರೂ ಒಂದಷ್ಟು ಮಂದಿ ನೀರು ಬೇಕು ಎಂದು ಹೇಳುವುದು ಕೂಡ ಕೇಳಿಬರುತ್ತಿತ್ತು. ನೀರಿಗೆ ಸಮಸ್ಯೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕೊಳವೆಬಾವಿಯಿಂದ ಎಲ್ಲರಿಗೂ ನೀರು ಕೊಡುವುದಾದರೆ ಒಳ್ಳೆಯದು ಎಂಬ ಮಾತುಗಳು ಕೇಳಿಬಂದವು.

ಪ್ರತಿಭಟನೆ ಮಾಡುತ್ತೇವೆ
ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಕೊಳವೆಬಾವಿ ತೆರೆಯಲು ನಾವು ಬಿಡುವುದಿಲ್ಲ.ಕೊಳವೆಬಾವಿ ಕೊರೆಯುವುದರಿಂದ ಒಬ್ಬರಿಗೆ ಅನ್ಯಾಯವಾಗುವುದಾದರೆ ಅದನ್ನು ಸಹಿಸಿಕೊಳ್ಳಲು ನಾವು ತಯಾರಿಲ್ಲ. ಬೇರೆ ಕಡೆಯಲ್ಲಿ ಪಾಯಿಂಟ್ ಮಾಡಿ ಕೊಳವೆಬಾವಿ ಕೊರೆಯಿರಿ. ಒಂದು ವೇಳೆ ಇಲ್ಲೇ ಕೊರೆಯಲು ಮುಂದಾದರೆ ಇದೇ ಜಾಗದಲ್ಲಿ ಪ್ರತಿಭಟನೆ ಮಾಡಲು ಕೂಡ ನಾವು ಸಿದ್ಧ ಎಂದು ಸ್ಥಳೀಯರಾದ ಅಶೋಕ್ ಕುಮಾರ್ ಬೊಳ್ಳಾಡಿ ಹೇಳಿದರು.

ನಮ್ಮೆಲ್ಲರ ಮನೆಯಲ್ಲಿಯೂ ಬಾವಿ ಇದೆ. ಕೊಳವೆಬಾವಿ ಕೊರೆಯುವುದರಿಂದ ಬಾವಿ ನೀರು ಬತ್ತಿ ಹೋಗುವ ಸಾಧ್ಯತೆ ಇದೆ. ಹೀಗಾದರೆ ನಮಗೆ ಕುಡಿಯಲು ನೀರಿಲ್ಲ. ಪಂಚಾಯತ್ ನೀರು ಕೊಟ್ಟರೆ ನಾವು ಬಿಲ್ ಕಟ್ಟಬೇಕಂತೆ, ನಮ್ಮ ಬಾವಿಯ ನೀರನ್ನು ಬತ್ತಿಸುವ ಮೂಲಕ ಪಂಚಾಯತ್ ನೀರಿಗೆ ಹಣ ಕೊಟ್ಟು ನಾವು ಪಡೆಯುವ ಕೆಲಸ ಇದಾಗಿದೆ. ಇದಕ್ಕೆ ನಮ್ಮ ಸಮ್ಮತಿ ಇಲ್ಲ – ಅಬ್ದುಲ್ ಸಲಾಮ್, ಸ್ಥಳೀಯರು

ಇಲ್ಲಿನ ಸ್ಥಳೀಯ ಮನೆಯವರಿಗೆ ಯಾರಿಗೂ ನಳ್ಳಿ ನೀರಿನ ಸೌಲಭ್ಯ ಇಲ್ಲ. ಬಾವಿಯ ನೀರು ಬತ್ತಿ ಹೋದರೆ ಸಮಸ್ಯೆಯಾಗುವ ಸಾಧ್ಯತೆ. ರಸ್ತೆಯ ಬದಿಯಲ್ಲೇ ಪಾಯಿಂಟ್ ಹಾಕಿರುವುದರಿಂದ ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ, ಕಾಂಕ್ರಿಟೀಕರಣ ಆಗುವ ವೇಳೆ ಸಮಸ್ಯೆಯಾಗಬಹುದು, ಇದೊಂದು ರಾಜಕೀಯವಾಗಿದೆ – ಅಶೋಕ್ ಕುಮಾರ್ ಬೊಳ್ಳಾಡಿ, ಸ್ಥಳೀಯರು

ನಮ್ಮ ಎಲ್ಲರ ಮನೆಯಲ್ಲೂ ಬಾವಿ ಇದೆ. ಇಲ್ಲಿ ಬೋರ್ ತೆಗೆದರೆ ನಮ್ಮ ಬಾವಿಯ ನೀರು ಬತ್ತಿ ಹೋಗುವ ಸಾಧ್ಯತೆ ಇದೆ. ಇಲ್ಲಿ ಕೊಳವೆಬಾವಿ ತೆಗೆಯುವುದಾದರೆ ನಮಗೆ ಉಚಿತವಾಗಿ ನೀರು ಕೊಡುವ ವ್ಯವಸ್ಥೆ ಪಂಚಾಯತ್‌ನವರು ಮಾಡಬೇಕು – ಉಮಾವತಿ, ಸ್ಥಳೀಯರು

ಪ್ರತಿ ಮನೆಗೆ ನೀರು ಕೊಡುವ ಕೇಂದ್ರ ಸರಕಾರದ ಉದ್ದೇಶವಾಗಿರುವ ಜಲಜೀವನ್ ಮಿಷನ್ ಯೋಜನೆಯಡಿ ಈ ಕೊಳವೆಬಾವಿ ಕೊರೆಯಲಾಗುತ್ತಿದೆ. ಇಲ್ಲಿನ ಸ್ಥಳೀಯರಿಗೆ ನೀರಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಯಾದರೆ ಪಂಚಾಯತ್‌ನಿಂದ ನೀರು ಕೊಡುವ ವ್ಯವಸ್ಥೆಯನ್ನು ಮಾಡುತ್ತೇವೆ. ರಸ್ತೆ ಬದಿಯಲ್ಲಿ ಪಾಯಿಂಟ್ ಇರುವುದು ಯಾವುದೇ ಸಮಸ್ಯೆ ಇಲ್ಲ ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ

ಎಲ್ಲಾ ಕಡೆಯಲ್ಲೂ ನೀರಿನ ಸಮಸ್ಯೆ ಶುರುವಾಗಿದೆ. ಇದನ್ನು ನೀಗಿಸುವ ಸಲುವಾಗಿ ಕೊಳವೆಬಾವಿ ಕೊರೆಯಲಾಗುತ್ತಿದೆ. ಈಗಾಗಲೇ ಒಂದು ಕೊಳವೆಬಾವಿ ಕೊರೆದಿದ್ದ ಅದರಲ್ಲಿ ನೀರು ಸಿಕ್ಕಿಲ್ಲ. ಯಾರಿಗೂ ತೊಂದರೆಯಾಗದಂತೆ ಕೊಳವೆಬಾವಿ ಕೊರೆಯಲಾಗುತ್ತದೆ ಮತ್ತು ಎಲ್ಲರಿಗೂ ನೀರು ಕೊಡುವ ವ್ಯವಸ್ಥೆಯನ್ನು ಮಾಡುವ ಭರವಸೆಯನ್ನು ಈಗಾಗಲೇ ಪಂಚಾಯತ್ ಅಧ್ಯಕ್ಷರು ನೀಡಿದ್ದಾರೆ – ಲತೀಫ್ ಎಸ್, ವಾರ್ಡ್ ಸದಸ್ಯರು

ಇದು ಜಲಜೀವನ್ ಮಿಷನ್ ಯೋಜನೆಯಡಿ ಕುಂಬ್ರ ಜನವಸತಿ ಪ್ರದೇಶಕ್ಕೆ ಮಂಜೂರಾದ ಕೊಳವೆಬಾವಿಯಾಗಿದೆ. ಸ್ಥಳೀಯರು ಆಕ್ಷೇಪಣೆ ಬಂದಿದೆ. ಆದರೆ ಸಾರ್ವಜನಿಕ ಉದ್ದೇಶಕ್ಕಾಗಿ ಇರುವ ಕೊಳವೆಬಾವಿ ಆಗಿರುವ ಕಾರಣ ಸಾರ್ವಜನಿಕ ಆಕ್ಷೇಪಣೆಯನ್ನು ಪರಿಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ಬಾವಿಯ ನೀರು ಬತ್ತಿ ಹೋದರೆ ಪರ್‍ಯಾಯ ವ್ಯವಸ್ಥೆ ಮಾಡಿಕೊಡುತ್ತೇವೆ. ಪಾಯಿಂಟ್ ರಸ್ತೆ ಬದಿಯಲ್ಲಿರುವುದರಿಂದ ಯಾವುದೇ ಸಮಸ್ಯೆ ಇಲ್ಲ – ಗೀತಾ ಬಿ.ಎಸ್. ಅಭಿವೃದ್ಧಿ ಅಧಿಕಾರಿ ಒಳಮೊಗ್ರು ಗ್ರಾಪಂ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.