ನೆಕ್ಕಿಲಾಡಿಯಲ್ಲಿ ನದಿ ದಡದ ತ್ಯಾಜ್ಯ ತೆರವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ೩೪ ನೆಕ್ಕಿಲಾಡಿಯಲ್ಲಿ ಕುಮಾರಧಾರ ನದಿಗೆ ತ್ಯಾಜ್ಯ ಸುರಿದಿದ್ದನ್ನು ಕಂಡ ಪುತ್ತೂರು ತಹಶೀಲ್ದಾರ್ ಅದರ ತೆರವಿಗೆ ಸೂಚಿಸಿದ ಮರುದಿನವೇ ೩೪ ನೆಕ್ಕಿಲಾಡಿ ಗ್ರಾ.ಪಂ. ವತಿಯಿಂದ ಕುಮಾರಧಾರ ನದಿಯ ಹಳೆ ಸೇತುವೆಯ ಬದಿಯಲ್ಲಿದ್ದ ತ್ಯಾಜ್ಯ ತೆರವು ಕಾರ್ಯ ನಡೆಯಿತು.

ಗುರುವಾರ ಉಪ್ಪಿನಂಗಡಿ ಭೇಟಿ ನೀಡಿದ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಅವರು ೩೪ ನೆಕ್ಕಿಲಾಡಿಯಲ್ಲಿ ನದಿಗಳ ದಡಗಳನ್ನು ಪರಿಶೀಲನೆ ಮಾಡಿದ್ದು, ಈ ಸಂದರ್ಭ ಕುಮಾರಧಾರ ಹಳೆ ಸೇತುವೆಯ ಬದಿಯಲ್ಲಿ ತ್ಯಾಜ್ಯದ ರಾಶಿ ಕಂಡು ಬಂದಿತ್ತು. ಇದನ್ನು ನೋಡಿದ ತಹಶೀಲ್ದಾರ್ ಅವರು ನದಿಗೆ ತ್ಯಾಜ್ಯ ನೀರು ಹರಿಯ ಬಿಟ್ಟು ಹಾಗೂ ತ್ಯಾಜ್ಯವನ್ನು ನದಿಗೆ ಹಾಕಿ ನದಿ ನೀರಿನ ಮಲೀನತೆಗೆ ಕಾರಣವಾಗುವುದನ್ನು ತಕ್ಷಣ ತಡೆಗಟ್ಟಬೇಕು. ನದಿ ಮಲೀನತೆಗೆ ಕಾರಣವಾಗುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ, ಈಗಾಗಲೇ ನದಿ ದಡದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯಗಳನ್ನೆಲ್ಲಾ ಅಲ್ಲಿಂದ ವಿಲೇವಾರಿ ಮಾಡಬೇಕು ಎಂದು ಗ್ರಾ.ಪಂ.ಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಕುಮಾರಧಾರ ಹಳೆ ಸೇತುವೆಯ ಬದಿಯಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಜೆಸಿಬಿ ಮೂಲಕ ತೆಗೆದು ಸೂಕ್ತ ವಿಲೇವಾರಿ ನಡೆಸಲಾಯಿತು.

ಈ ಸಂದರ್ಭ ಸ್ಥಳದಲ್ಲಿ ಉಪಸ್ಥಿತರಿದ್ದ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಪತ್ರಿಕೆಯೊಂದಿಗೆ ಮಾತನಾಡಿ, ಈಗಾಗಲೇ ಇಲ್ಲಿನ ತ್ಯಾಜ್ಯವನ್ನು ತೆಗೆದು ವಿಲೇವಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಗ್ರಾ.ಪಂ. ಕೈಗೊಳ್ಳಲಿದೆ. ಅಂತವರನ್ನು ಪತ್ತೆ ಹಚ್ಚಲು ಗ್ರಾಮದ ಐದು ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮದ ಮನೆಗಳಿಂದ ಕಸ ಸಂಗ್ರಹಿಸುವ ಕಾರ್ಯ ಗ್ರಾ.ಪಂ.ನಿಂದ ನಡೆಯಲಿದ್ದು, ಅದಕ್ಕೆ ವಾಹನ ವ್ಯವಸ್ಥೆನೂ ಆಗಿದೆ. ಆದರೆ ಕೊರೋನಾ ಕರ್ಫ್ಯೂ ಹಿನ್ನೆಲೆಯಲ್ಲಿ ಅದರ ಬಾಡಿ ಕೆಲಸ ಸಕಾಲದಲ್ಲಿ ನಡೆಯದೇ ಅದು ಕಾರ್ಯಾರಂಭ ಮಾಡಲು ಸ್ವಲ್ಪ ವಿಳಂಬವಾಗಿದೆ. ಗ್ರಾಮದ ಸ್ವಚ್ಛತೆಯ ದೃಷ್ಟಿಯಿಂದ ಗ್ರಾ.ಪಂ.ನೊಂದಿಗೆ ಸಾರ್ವಜನಿಕರೂ ಸಹಕಾರ ನೀಡಬೇಕು. ಇಲ್ಲಿ ರಾತ್ರಿ ೧೨ ಗಂಟೆಗೂ ತಂದು ತ್ಯಾಜ್ಯ ಸುರಿದು ನದಿ ಮಲೀನಕ್ಕೆ ಕಾರಣರಾಗುವವರು ಇದ್ದಾರೆ. ಪ್ರತಿಯೋರ್ವರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರ ನದಿ ಮಲೀನವಾಗುವುದನ್ನು ಸಂಪೂರ್ಣ ತಡೆಯಲು ಸಾಧ್ಯ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.