HomePage_Banner
HomePage_Banner
HomePage_Banner
HomePage_Banner

ಹೋಮ್ ಕ್ವಾರಂಟೈನ್, ಐಸೋಲೇಶನ್‌ನಲ್ಲಿರುವವರ ಮೇಲೆ ನಿಗಾ ವಹಿಸಿ | ಆರೋಗ್ಯ ಇಲಾಖೆ, ನಗರ ಸಭಾ ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು ಸೂಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೂರದ ಊರು, ಹೊರ ಜಿಲ್ಲೆಗಳಿಂದ ಆಗಮಿಸಿದವರು, ಹೋಮ್ ಕ್ವಾರಂಟೈನ್ ಹಾಗೂ ಐಶೋಲೇಶನ್‌ನಲ್ಲಿರುವ ಮೇಲೆ ನಿಗಾ ವಹಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆ ಹಾಗೂ ನಗರ ಸಭಾ ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯು ಮೇ.೧ರಂದು ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಕೆಲವು ಮಂದಿ ಕೊರೋನಾ ಲಕ್ಷಣವಿದ್ದು, ಗಮನಕ್ಕೆ ಬಾರದೇ ಇರುವವರು ಇದ್ದಾರೆ. ಅವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಈಗ ಹಲವು ಮಂದಿ ಹೊರ ಬಾಗದಿಂದ ಬಂದವರಿದ್ದಾರೆ. ಕ್ವಾರಂಟೈನ್, ಐಸೋಲೇಶನ್‌ಗಳಲ್ಲಿರಬೇಕಾದವರು ತಿರುಗಾಡುತ್ತಿದ್ದಾರೆ. ಅವರಿಗೆ ಎಚ್ಚರಿಕೆ ಕೊಡುವವರು ಯಾರೂ ಇಲ್ಲ. ಈ ಬಗ್ಗೆ ಸ್ಥಳಿಯರಲ್ಲಿ ಅರಿವು ಮೂಡಿಸಿ ಮಾಹಿತಿ ಪಡೆದುಕೊಳ್ಳಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಅಧ್ಯಾಪಕರು ಎಲ್ಲಾ ಮನೆಗಳಿಗೆ ತೆರಳಿ ಮಾಹಿತಿ ಪಡೆದುಕೊಳ್ಳಬೇಕು. ಅಧ್ಯಾಪಕರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಮಾಹಿತಿಯು ಲಭ್ಯವಾಗಿದೆ ಎಂದು ಸೂಚಿಸಿದ ಶಾಸಕರು ನಗರ ಸಭಾ ವ್ಯಾಪ್ತಿಯಲ್ಲಿ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ೩೧ ವಾರ್ಡ್‌ಗಳಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಪೌರಾಯುಕ್ತ, ವೈದ್ಯಾಧಿಕಾರಿಗಳು, ಅಧ್ಯಾಪಕರು ಹಾಗೂ ಆಶಾ ಕಾರ್ಯಕರ್ತೆಯರ ಸಭೆ ನಡೆಸಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.

 

 

ರ್‍ಯಾಂಡಮ್ ಟೆಸ್ಟ್ ಇಲ್ಲ:
ಈ ಹಿಂದೆ ಕೋವಿಡ್ ರೋಗಗಳಿಗೆ ಸಂಬಂಧಿಸಿ ರ್‍ಯಾಂಡಮ್ ಆಗಿ ಪರೀಕ್ಷೆ ಮಾಡಲಾಗುತಿತ್ತು. ಈಗ ಐಎಲ್‌ಐ, ಸಾರಿ ಪ್ರತ್ಯೇಕ ಪರೀಕ್ಷೆ ಮಾಡಲಾಗುತ್ತಿದೆ. ಕೋವಿಡ್ ಲಕ್ಷಣ ಇರುವವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಇರುವವರನ್ನು ಪರೀಕ್ಷೆ ಮಾಡಲಾಗುತ್ತಿದೆ ಎಂದು ಡಾ.ಅಶೋಕ್ ಕುಮಾರ್ ರೈ ತಿಳಿಸಿದರು.

ವಿಳಾಸಗಲೇ ಸರಿಯಿಲ್ಲ:
ಕೋವಿಡ್ ರೋಗಿಗಳು ವಿಳಾಸ ಹಾಗೂ ದೂರವಾಣಿ ನಂಬರ್‌ಗಳನ್ನು ತಪ್ಪಾಗಿ ನೀಡುತ್ತಿದ್ದಾರೆ. ನಮಗೆ ರೋಗಿಗಳ ವಿಳಾಸ ಹಾಗೂ ನಂಬರನ್ನು ಸಂಪರ್ಕಿಸಿದಾಗ ಅವರು ಹೊರ ತಾಲೂಕು, ಜಿಲ್ಲೆಗಳಲ್ಲಿ ಇರುವ ಕುರಿತು ಮಾಹಿತಿ ನೀಡುತ್ತಿದ್ದಾರೆ. ಆದರೆ ದಾಖಲೆಯಲ್ಲಿ ಪುತ್ತೂರಿನಲ್ಲಿರವುದಾಗಿ ದಾಖಲಾಗಿರುತ್ತದೆ ಎಂದು ನಗರ ಸಭಾ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್ ಹಾಗೂ ರಾಮಚಂದ್ರರವರು ಶಾಸಕರ ಗಮನಕ್ಕೆ ತಂದರು.

ಶೇ.೬೦.೮೭ ಲಸಿಕೆ ವಿತರಣೆ:
ತಾಲೂಕಿನಲ್ಲಿ ೫೬,೮೬೪ ಮಂದಿ ೪೫ ರಿಂದ ೫೯ ವರ್ಷ ಮೇಲ್ಪಟ್ಟಿದ್ದವರಿದ್ದು ಈ ಪೈಕಿ ೧೫, ೦೧೦ ಮಂದಿಗೆ ಲಸಿಕೆ ವಿತರಣೆಯಾಗಿದೆ. ೬೦ ವರ್ಷ ಮೇಲ್ಪಟ್ಟರುವ ೨೭,೪೬೭ ಮಂದಿಯಿದ್ದು ೧೪,೭೧೯ ಮಂದಿಗೆ ಲಸಿಕೆ ವಿತರಿಸಲಾಗಿದೆ. ತಾಲೂಕಿನಲ್ಲಿ ಶೇ,೬೦.೮೭ ಲಸಿಕೆ ವಿತರಣೆಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಮಾಹಿತಿ ನೀಡಿದರು. ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು ೬೦೦೦ ಮಂದಿಗೆ ಲಸಿಕೆ ವಿತರಣೆಯಾಗಿದೆ ಎಂದು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ತಿಳಿಸಿದರು.

ದಂಡ ಹಾಕಿದರೂ ಅಂಗಡಿಗಳು ಓಪನ್:
ಅಗತ್ಯ ಸಾಮಾಗ್ರಿಗಳ ಹೊರತಾಗಿ ಇತರ ಅಂಗಡಿಗಳು ತೆರೆಯುವಂತಿಲ್ಲ ಎಂಬ ಆದೇಶದ ಹಿನ್ನೆಲೆಯಲ್ಲಿ ವ್ಯವಹರಿಸಿದ ಅಂಗಡಿಗಳಿಗೆ ದಾಳಿ ನಡೆಸಿ ದಂಡ ವಿಧಿಸಲಾಗಿದೆ. ಹಾಗಿದ್ದರೂ ಅಂತಹ ಅಂಗಡಿಗಳು ಮತ್ತೆ ಮತ್ತೆ ಬಾಗಿಲು ತೆರದು ವ್ಯವಹರಿಸುತ್ತಿದೆ ಎಂದು ಪೌರಾಯುಕ್ತರು ಶಾಸಕರ ಗಮನಕ್ಕೆ ತಂದರು. ಪ್ರತಿಯೊಬ್ಬರೂ ಮಾಸ್ಕ್ ಹಾಕುವಂತೆ ಜನರಿಗೆ ಅರಿವು ಮೂಡಿಸಿ. ನಿಯಮ ಮೀರಿ ಮಾಸ್ಕ್ ಧರಿಸಿದಿದ್ದರೆ ಪೊಲೀಸ್ ಸಹಕಾರದೊಂದಿಗೆ ದಂಢ ವಿಧಿಸುವಂತೆ ಶಾಸಕರು ಪೌರಾಯುಕ್ತರಿಗೆ ಸೂಚನೆ ನೀಡಿದರು.

ಲಸಿಕೆ ಕೊರತೆ:
ದಿನಕ್ಕೆ ೩೦೦ ಮಂದಿಗೆ ಕೋವಿಡ್ ಲಸಿಕೆ ವಿತರಿಸಲು ಸಾಧ್ಯವಿದೆ. ಆದರೆ ಲಸಿಕೆಯ ಕೊರತೆಯಿದೆ ಹಾಗಾಗಿ ದಿನಕ್ಕೆ ೮ ಮಂದಿಗೆ ಲಸಿಕೆ ವಿತರಿಸಲಾಗುತ್ತಿದೆ. ಸರಕಾರಿ ಆಸ್ಪತ್ರೆಯಲ್ಲಿ ಮೆ.೧ತನಕ ಮಾತ್ರ ಲಸಿಕೆ ಸಂಗ್ರಹವಿದ್ದು, ಮೆ.೨ರಿಂದ ಲಸಿಕೆಯ ಸಂಗ್ರಹಿವಿಲ್ಲ ಎಂದು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ತಿಳಿಸಿದರು.

ಕೊರೋನಾ ಸುಪ್ರಭಾತ:
ನಗರ ಸಭೆಯಲ್ಲಿರುವ ೧೨ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಕೋವಿಡ್-೧೯ ನಿಯಂತ್ರಿಸಲು ಅರಿವು ಮೂಡಿಸುವ ಮಾಹಿತಿ ನೀಡಬೇಕು. ಪ್ರತಿದಿನ ಬೆಳಿಗ್ಗೆ ಎಲ್ಲಾ ವಾಹನಗಳಲ್ಲಿ ೩೧ ವಾರ್ಡ್‌ಗಳಲ್ಲಿ ವಾಹದಲ್ಲಿ ಧ್ವನಿವರ್ಧಕದಲ್ಲಿ ಪ್ರತಿದಿನ ಸುಪ್ರಭಾತ ರೀತಿಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕರು ತಿಳಿಸಿದರು.

ಗಿರಿಜಾ ಕ್ಲಿನಕ್ ಕೋವಿಡ್ ಸೆಂಟರ್:
ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆ, ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆಯಲಾಗಿದೆ. ಬೆಡ್‌ನ ಕೊರತೆಯಾದರೆ ಹಿಂದಿನ ಗಿರಿಜಾ ಕ್ಲಿನಿಕ್ ಆಸ್ಪತ್ರೆಯನ್ನು ಅದರ ಮ್ಹಾಲಕರು ಕೋವಿಡ್ ಕೇಂದ್ರಕ್ಕೆ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಆಸ್ಪತ್ರೆ ಕಟ್ಟಡವನ್ನು ನಗರ ಸಭೆಯ ಪೌರ ಕಾರ್ಮಿಕರ ಮೂಲಕ ಶುಚಿಗೊಳಿಸುವಂತೆ ಶಾಸಕರು ಪೌರಾಯುಕ್ತರಿಗೆ ಸೂಚಿಸಿದರು.

ಸಿಬಂದಿ ಕೊರತೆ:
ಬಲ್ನಾಡ್ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕೋವಿಡ್ ಕೇಂದ್ರ ತೆರೆಯಲಾಗಿದೆ. ಅಲ್ಲಿ ಮೂರು ಮಂದಿ ಸಿಬಂದಿಗಳ ಕೊರತೆಯಿದೆ. ಅಲ್ಲದೆ ಸರಕಾರಿ ಆಸ್ಪತ್ರೆಯಲ್ಲಿಯೂ ಸಿಬಂದಿಗಳ ಕೊರತೆಯಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಹಾಗೂ ಆಡಳಿತ ವೈದ್ಯಾಧಿಕಾರಿಗಳು ಶಾಸಕರ ಗಮನಕ್ಕೆ ತಂದರು.

ಆಸ್ಪತ್ರೆಯಲ್ಲಿ ೧೫ ರೋಗಿಗಳು:
ಸರಕಾರಿ ಆಸ್ಪತ್ರೆಯಲ್ಲಿ ೨೬ ಕೋವಿಡ್ ಬೆಡ್ ಮೀಸಲಿಡಲಾಗಿದೆ. ಇದರಲ್ಲಿ ೧೫ ಪುರುಷರು, ೬ ಮಹಿಳೆಯಿರಿಗೆ, ೪ ವೆಂಟಿಲೇಟರ್ ೨ ಐಶೋಲೇಶನ್ ಬೆಡ್‌ಗಳನ್ನು ಮೀಸಲಿಡಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು ೧೫ ಕೋವಿಡ್ ರೋಗಿಗಳಿದ್ದು ೧೩ ಪಾಸಿಟಿವ್, ೨ ಸಸ್ಪೆಟಿವ್ ಹಾಗೂ ಒರ್ವ ಆಕ್ಸಿಜನ್‌ನಲ್ಲಿದ್ದಾರೆ ಎಂದು ಆಶಾ ಪುತ್ತೂರಾಯ ತಿಳಿಸಿದರು.

ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಹಾಗೂ ತಹಶೀಲ್ದಾರ್ ರಮೇಶ್‌ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ ಹಾಗೂ ಆರೋಗ್ಯ ಇಲಾಖೆ ಸಿಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಸ್ವಾಗತಿಸಿದರು. ಕೋವಿಡ್ ಕ್ವಾರಂಟೈನ್ ನೋಡೆಲ್ ಅಧಿಕಾರಿ ಡಾ.ಜಯದೀಪ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.