HomePage_Banner
HomePage_Banner
HomePage_Banner
HomePage_Banner

ಹಿಂದೂ ಜಾಗರಣಾ ವೇದಿಕೆ ಕಡಬ ತಾಲೂಕು ವತಿಯಿಂದ ರಕ್ತದಾನ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಹಿಂದೂ ಜಾಗರಣಾ ವೇದಿಕೆ ಕಡಬ ತಾಲೂಕು ವತಿಯಿಂದ ರಕ್ತದಾನ ಶಿಬಿರವು ಆಲಂಕಾರು ಭಾರತೀ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಆಲಂಕಾರು ಗ್ರಾ.ಪಂ ಅಧ್ಯಕ್ಷ ಸದಾನಂದ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಹಿಂ.ಜಾ.ವೇ ಕಡಬ ತಾಲೂಕು ಅಧ್ಯಕ್ಷ ಮಲ್ಲೇಶ .ಎನ್, ಜಿಲ್ಲಾ ಉಪಾದ್ಯಕ್ಷರಾದ ವೆಂಕಟ್ರರಮಣ ಕುತ್ಯಾಡಿ, ಆಲಂಕಾರು ವಲಯಾಧ್ಯಕ್ಷ ಧನಂಜಯ ಕಜೆ, ಆಲಂಕಾರು ಘಟಕದ ಅಧ್ಯಕ್ಷ ದಯಾನಂದ ಗೌಡ ಆಲಡ್ಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿಯ ಜಿಲ್ಲಾಸಂಯೋಜಕ ಪ್ರವೀಣ್ ಕುಮಾರ್, ಡಾ.ಮನೋಹರ ರೈ ಯವರು ಸಂದರ್ಭೋಚಿತವಾಗಿ ಮಾತನಾಡಿ ರಕ್ತದಾನದ ಮಹತ್ವ ತಿಳಿಸಿ, ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ರಕ್ತದಾನ ಶಿಬಿರ ಮಾಡುತ್ತಿರುವುದು ಸಂಘಟನೆಯ ಅತ್ಯುತ್ತಮ ಕೆಲಸವಾಗಿದ್ದು ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸುವ ಕೆಲಸವಾಗುತ್ತದೆ ಎಂದು ಹೇಳಿ ಸಹಕರಿಸಿದವರಿಗೆ ಅಭಿನಂದನೆಗಳನ್ನು ತಿಳಿಸಿದರು. ಶಿಬಿರದಲ್ಲಿ ಒಟ್ಟು 76 ಮಂದಿ ಹಿಂ.ಜಾ.ವೇ ಕಾರ್ಯಕರ್ತರು ರಕ್ತದಾನ ಮಾಡಿದರು. ಹಿಂ.ಜಾ.ವೇ ತಾಲೂಕು ಪ್ರಧಾನ ಕಾರ್ಯದರ್ಶಿ ಗಳಾದ ರವೀಂದ್ರದಾಸ್, ಹರೀಶ್, ಜಿನೀತ್ ಮರ್ದಾಳ ಸೇರಿದಂತೆ ಆಯಾಯ ಘಟಕದ ಪದಾಧಿಕಾರಿಗಳು ಒಟ್ಟು ಕಾರ್ಯಕ್ರಮದಲ್ಲಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.