HomePage_Banner
HomePage_Banner
HomePage_Banner
HomePage_Banner

ಪಾಣಾಜೆ; ಅರ್ಧಮೂಲೆ ಚೆಕ್ ಪೋಸ್ಟ್  ಸಿಬ್ಬಂದಿಗಳಿಗೆ ಪಂಚಾಯತ್ ವತಿಯಿಂದ  ಉಳಕೊಳ್ಳಲು ವ್ಯವಸ್ಥೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಲ್ಲಿರುವ ಈ ಸಮಯದಲ್ಲಿ ಪಾಣಾಜೆ ಗ್ರಾಮದ ಅರ್ಧಮೂಲೆ ಎಂಬಲ್ಲಿರುವ ಚೆಕ್ ಪೋಸ್ಟ್ ನಲ್ಲಿರುವ ಪೋಲೀಸ್ ಸಿಬ್ಬಂದಿಗಳಿಗೆ  ಪಂಚಾಯತ್ ವತಿಯಿಂದ   ರಾತ್ರಿ ಹೊತ್ತು ಉಳಕೊಳ್ಳಲು ಅಲ್ಲೇ ಇರುವ ಬಸ್ ನಿಲ್ದಾಣದ ಸುತ್ತ ಶೇಡ್ ನೆಟ್ ಅಳವಡಿಸುವ ಮೂಲಕ ಉತ್ತಮ ವ್ಯವಸ್ಥೆ ಮಾಡಿ ಕೊಡಲಾಯಿತು.ಅಲ್ಲದೆ ಫ್ಯಾನ್ ವ್ಯವಸ್ಥೆಯನ್ನು ಕಲ್ಪಿಸಿ ಸುತ್ತ ಮುತ್ತ ಸ್ವಚ್ಚತೆಯನ್ನು ಮಾಡಿ ಕೊಡಲಾಯಿತು.
ಹೊಸ ಪಂಪು ಅಳವಡಿಕೆಳ  ಕೊಂದಲ್ಕಾನ ಪರಿಸರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿಯ ಪಂಪು ಕೆಟ್ಟು ಹೋಗಿ ಕುಡಿಯಲು ನೀರಿಲ್ಲದಿದ್ದುದರಿಂದ ಕೋವಿಡ್ ಸಂಕಷ್ಟದ ಸಮಯದಲ್ಲೂ ಪಂಚಾಯತ್ ತಕ್ಷಣ ಸ್ಪಂದಿಸಿ ಕೊಳವೆ ಬಾವಿಗೆ ಹೊಸ ಪಂಪು ಅಳವಡಿಸಿ ನೀರು ಸರಬರಾಜು ವ್ಯವಸ್ಥೆ ಮಾಡಿ ಕೊಡಲಾಯಿತು. 
ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ.ವಿ ಭಟ್, ಸದಸ್ಯರಾದ ಸುಭಾಷ್ ರೈ, ಜಯಶ್ರೀ, ನಾರಾಯಣ ನಾಯಕ್, ಕೃಷ್ಣಪ್ಪ ಪೂಜಾರಿ, ವಿಮಲಾ, ಮೋಹನ ನಾಯ್ಕ ಮತ್ತು ಪಂಚಾಯತ್ ಸಿಬ್ಬಂದಿಗಳಾದ ವಿಶ್ವನಾಥ, ಅರುಣ ಕುಮಾರ್ ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.