HomePage_Banner
HomePage_Banner
HomePage_Banner
HomePage_Banner

ಅಕ್ಷಯ್ ರೈ ದಂಬೆಕ್ಕಾನ ನಿರ್ಮಾಣದ `ವೋಕಲ್ ಫಾರ್ ಲೋಕಲ್’ ಕಿರುಚಿತ್ರ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹಳ್ಳಿಯಿಂದ ದಿಲ್ಲಿ ತನಕ ಆತ್ಮ ನಿರ್ಭರ ಭಾರತ ನಮ್ಮ ಉದ್ದೇಶವಾಗಬೇಕು: ಸಂಜೀವ ಮಠಂದೂರು

ಪುತ್ತೂರು: ಬಿಜೆಪಿ ಯುವ ಮೋರ್ಛಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಅಕ್ಷಯ್ ರೈ ದಂಬೆಕ್ಕಾನ ನಿರ್ಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಸ್ವ ಉದ್ಯೋಗ ಮತ್ತು ಸ್ವದೇಶಿ ವಸ್ತುಗಳ ಬಳಕೆಯ ಸಂದೇಶವನ್ನು ಒಳಗೊಂಡ `ವೋಕಲ್ ಫಾರ್ ಲೋಕಲ್’ ಎನ್ನುವ ಕಿರುಚಿತ್ರದ ಬಿಡುಗಡೆ ಮೇ.01ರಂದು ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಶಾಸಕರ ಹುಟ್ಟುಹಬ್ಬ ಮತ್ತು ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಕಿರುಚಿತ್ರವನ್ನು ಲೋಕಾರ್ಪಣೆ ಮಾಡಲಾಯಿತು.

ಸ್ಥಳೀಯ ಉತ್ಪನ್ನಗಳಿಗೆ ಮತ್ತು ಆ ಉತ್ಪನ್ನಗಳನ್ನು ಮಾರಾಟ ಮಾಡುವ ಜನರನ್ನು, ರೈತರನ್ನು ಪ್ರೋತ್ಸಾಹಿಸಬೇಕು ಎಂಬ ಸಂದೇಶ ಇದರಲ್ಲಿದೆ. ರೈತರನ್ನು, ಸ್ಥಳೀಯ ವ್ಯಾಪಾರಿಗಳನ್ನು ಪ್ರೋತ್ಸಾಹ ಮಾಡಬೇಕಾದರೆ ಅವರು ಬೆಳೆಯುವ ಮತ್ತು ಮಾರಾಟ ಮಾಡುವ ಉತ್ಪನ್ನಗಳನ್ನು ಸರಿಯಾದ ಬೆಲೆ ಕೊಟ್ಟು ಖರೀದಿ ಮಾಡಬೇಕು, ದೊಡ್ಡ ಮಾಲ್‌ಗಳಲ್ಲಿ ಎಂಆರ್‌ಪಿ ದರ ಕೊಟ್ಟು ಖರೀದಿ ಮಾಡುತ್ತೇವೆ ಆದರೆ ಹಳ್ಳಿಯ ಅಂಗಡಿಯೊಂದರಲ್ಲಿ ಸ್ಥಳೀಯ ವಸ್ತುಗಳಿಗೆ ಚೌಕಾಸಿ ಮಾಡುತ್ತೇವೆ ಇದು ಸರಿಯಲ್ಲ, ನಮ್ಮೂರಿನ ಉತ್ಪನ್ನಗಳಿಗೆ ಸರಿಯಾದ ಬೆಲೆ ಕೊಟ್ಟರೆ ಮಾತ್ರ ರೈತರ, ವ್ಯಾಪಾರಿಗಳ ಬದುಕು ಚೆನ್ನಾಗಿರಲಿ ಸಾಧ್ಯ ಮತ್ತು ಆತ್ಮ ನಿರ್ಭರ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಅಕ್ಷಯ್ ರೈ ದಂಬೆಕ್ಕಾನರವರ ಕಥೆ,ಚಿತ್ರಕಥೆ ಹೊಂದಿರುವ ಈ ಕಿರುಚಿತ್ರದಲ್ಲಿ ರಘು ಶೆಟ್ಟಿ, ರತನ್ ರಮೇಶ್ ಪೂಜಾರಿ, ಪ್ರಣೀತ್ ಶೆಟ್ಟಿ ತಿಂಗಳಾಡಿ, ಸ್ವರೂಪ್ ಎಸ್.ರೈ ಕಲಾವಿದರಾಗಿ ಅಭಿನಯಿಸಿದ್ದಾರೆ. ರತನ್ ರಮೇಶ್ ಪೂಜಾರಿ ನಿರ್ದೇಶನ, ರಘು ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ. ಈ ಕಿರುಚಿತ್ರದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಸಂದೇಶ ನೀಡಿದ್ದು, ನಾವು ಬೀದಿ ಬದಿಯಲ್ಲಿ ವ್ಯಾಪಾರಗಳಲ್ಲಿ ಚೌಕಾಸಿ ಮಾಡುತ್ತೇವೆ. ಅದೇ ಮಾಲ್‌ಗಳಲ್ಲಿ ಎಂಆರ್‌ಪಿ ದರವನ್ನು ಕೊಟ್ಟ ಖರೀದಿ ಮಾಡುತ್ತೇವೆ. ನಾವು ಗ್ರಾಮೀಣ ಭಾಗದ ರೈತರ ಉತ್ಪನ್ನಗಳಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಮಾಡಬೇಕು, ಪಂಚಾಯತ್‌ನಿಂದ ಪಾರ್ಲಿಮೆಂಟ್ ತನಕ, ಹಳ್ಳಿಯಿಂದ ದಿಲ್ಲಿ ತನಕ ಇವತ್ತು ಆತ್ಮನಿರ್ಭರ ಭಾರತ್ ಆಗಬೇಕು ಎನ್ನುವುದು ನಮ್ಮೆಲ್ಲರ ಉದ್ದೇಶ ಎಂದು ಸಂದೇಶ ನೀಡಿದ್ದಾರೆ. ಅದೇ ರೀತಿ ಎಂಎಲ್‌ಸಿ ಭಾರತಿ ಶೆಟ್ಟಿಯವರು ಕೂಡ ಧ್ವನಿ ನೀಡಿದ್ದು ವೋಕಲ್ ಫಾರ್ ಲೋಕಲ್‌ಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.