HomePage_Banner
HomePage_Banner

ಕಡಬ: ಉದ್ಯಮಿ ಗೋಪಾಲ್ ನಾಕ್‌ರವರಿಗೆ ತಲ್ವಾರ್‌ನಿಂದ ಹಲ್ಲೆ ಆರೋಪ-ದೂರು

ಕಡಬ:ಕೋಡಿಂಬಾಳದ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ತಲ್ವಾರ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಉದ್ಯಮಿ, ಶ್ರೀರಾಮ ಸೇನೆ ಮುಖಂಡ ಗೋಪಾಲ ನಾಕ್ ಮೇಲಿನಮನೆಯವರು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೇ 2ರಂದು ರಾತ್ರಿ ಕಡಬದಿಂದ ಕೋಡಿಂಬಾಳದಲ್ಲಿರುವ ತನ್ನ ಸಂಬಂಧಿಕರಿಗೆ ಔಷಧಿ ತೆಗೆದುಕೊಂಡು ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಅನಿಲ್, ಅಜಯ್ ಹಾಗೂ ಇತರರು ಅಜ್ಜಿಕಟ್ಟೆ ಎಂಬಲ್ಲಿ ತಡೆದು ನಿಲ್ಲಿಸಿ ನನ್ನ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಗೋಪಾಲ ನಾಕ್‌ರವರು ಆರೋಪಿಸಿದ್ದಾರೆ.ಘಟನೆ ಕುರಿತಂತೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಗೋಪಾಲ ನಾಕ್‌ರವರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.