HomePage_Banner
HomePage_Banner
HomePage_Banner
HomePage_Banner

ಕಾವು ಹೇಮನಾಥ್ ಶೆಟ್ಟಿ ಉಸ್ತುವಾರಿ ವಹಿಸಿದ ಚುನಾವಣೆಯಲ್ಲಿ ಕಾಂಗ್ರೆಸ್-ಯುಡಿಎಫ್ ಮೈತ್ರಿ ಕೂಟ ಜಯಭೇರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಸಂಯೋಜಕರಾಗಿರುವ ಕಾವು ಹೇಮನಾಥ್ ಶೆಟ್ಟಿ ಯವರನ್ನು ಮೂವಾಟ್ಟುಪುಳ ವಿಧಾನಸಭಾ ಕ್ಷೇತ್ರಕ್ಕೆ ಎಐಸಿಸಿ ಉಸ್ತುವಾರಿಯಾಗಿ ನೇಮಿಸಿತ್ತು.

ಇವರು ಕ್ಷೇತ್ರದಾದ್ಯಂತ ಪ್ರವಾಸ ನಡೆಸಿ ಪಕ್ಷದ ಆಂತರಿಕ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆ ಹರಿಸಿ ಗೆಲುವಿನ ತಂತ್ರಗಾರಿಕೆ ರೂಪಿಸಿದ್ದರು. ಪರಿಣಾಮ ಕಳೆದ ಬಾರಿಯ ಚುನಾವಣೆಯಲ್ಲಿ 9000 ಮತಗಳ ಅಂತರದಿಂದ ಎಲ್ ಡಿ ಎಫ್ ಗೆದ್ದಿರುವ ಕ್ಷೇತ್ರದಲ್ಲಿ
6714 ಮತಗಳ ಅಂತರದಲ್ಲಿ ಕಾಂಗ್ರೆಸ್ ವಿಜಯದ ಪತಾಕೆ ಹಾರಿಸುವಂತಾಗಿದೆ.

ಅದರ ಮಧ್ಯೆ ಮಂಜೇಶ್ವರ,ಕಾಸರಗೋಡು,ಉದುಮ ವಿಧಾನಸಭಾ ಕ್ಷೇತ್ರದಲ್ಲಿಯೂ ಇಲ್ಲಿ ಉಸ್ತುವಾರಿವಹಿಸಿಕೊಂಡಿರುವ  ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಸದಸ್ಯೆ  ಅನಿತಾ ಹೇಮನಾಥ್ ಶೆಟ್ಟಿ ಯವರ ಜೊತೆ ಎಐಸಿಸಿ ಕಾಸರಗೋಡು ಜಿಲ್ಲಾ ಉಸ್ತುವಾರಿಯಾಗಿರುವ ರಮಾನಾಥ ರೈಯವರ ನಾಯಕತ್ವದಲ್ಲಿ ಪ್ರಚಾರದಲ್ಲಿ ತೊಢಗಿಸಿಕೊಂಡಿದ್ದರು. ಇದರಲ್ಲಿ ಕಾಸರಗೋಡು ಯುಡಿಎಫ್ ಅಭ್ಯರ್ಥಿ ಎನ್ ಎ ನೆಲ್ಲಿಕುನ್ನು 13014 ಮತ್ತು ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಕೆಎಮ್ ಅಶ್ರಫ್ 1143 ಮತಗಳ ಅಂತರದಿಂದ ಸಮೀಪದ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ವಿಜಯದ ಪತಾಕೆ ಹಾರಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.