HomePage_Banner
HomePage_Banner
HomePage_Banner
HomePage_Banner

ಮರಳು ಗಣಿಗಾರಿಕೆಗೆ ಎಸಿ ನೇತೃತ್ವದಲ್ಲಿ ದಾಳಿ – ಅಕ್ರಮ ಮರಳು ದಾಸ್ತಾನು ವಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಎರಡು ಸಾವಿರ ಲೋಡ್‌ನಷ್ಟು ಮರಳು ಸ್ಟಾಕ್

ಉಪ್ಪಿನಂಗಡಿ: ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ೩೪ ನೆಕ್ಕಿಲಾಡಿಯ ಕುಮಾರಧಾರ ನದಿ ಬದಿ ಪುತ್ತೂರು ಸಹಾಯಕ ಕಮಿಷನರ್ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳ ತಂಡ ಸೋಮವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿತು. ಈ ಸಂದರ್ಭ ಒಂದು ಕಡೆ ಅನಧಿಕೃತವಾಗಿ ಶೇಖರಿಸಲಾಗಿದ್ದ ಸುಮಾರು ೪೫ ಲೋಡ್‌ನಷ್ಟು ಮರಳನ್ನು ವಶಕ್ಕೆ ಪಡೆಯಲಾಯಿತು.

ಇಲ್ಲಿನ ಸರ್ವೆ ನಂಬರ್ ೧೦೮ನಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಕುಮಾರಧಾರ ನದಿ ದಡದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಬಳಿಕ ೩೪ ನೆಕ್ಕಿಲಾಡಿಯ ಖತೀಜಮ್ಮ ಎಂಬವರ ಜಾಗದಲ್ಲಿ ಸುಮಾರು ೪೫ ಲೋಡ್‌ನಷ್ಟು ಮರಳು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡು ಬಂದಿದ್ದು, ಇದನ್ನು ಅಧಿಕಾರಿಗಳ ತಂಡ ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದೆ. ಕುಮಾರಧಾರ ನದಿಯಿಂದ ಮರಳನ್ನು ತಂದು ಇಲ್ಲಿ ಅನಧಿಕೃತವಾಗಿ ಶೇಖರಿಸಲಾಗಿತ್ತು.

ಎರಡು ಸಾವಿರ ಲೋಡ್‌ನಷ್ಟು ಮರಳು ಸ್ಟಾಕ್: ಇಲ್ಲಿ ನಡೆಯುತ್ತಿದ್ದ ಮರಳು ಗಣಿಗಾರಿಕೆಯ ಸ್ಥಳದಿಂದ ಅನತಿ ದೂರದಲ್ಲಿರುವ ಖಾಸಗಿ ಜಾಗವೊಂದರಲ್ಲಿ ದಾಸ್ತಾನು ಯಾರ್ಡ್ ಇದ್ದು, ಅಲ್ಲಿಂದ ತೆಗೆದ ಮರಳನ್ನು ಇಲ್ಲಿಯೂ ದಾಸ್ತಾನು ಮಾಡಲಾಗುತ್ತಿತ್ತು. ಇಲ್ಲಿ ಸುಮಾರು ಎರಡು ಸಾವಿರ ಲೋಡ್‌ನಷ್ಟು ಮರಳು ದಾಸ್ತಾನಿದೆ. ಇದನ್ನು ಕೂಡಾ ಅಧಿಕಾರಿಗಳು ಪರಿಶೀಲನೆ ನಡೆಸಿದರು. ದಾಸ್ತಾನಿಗೆ ಸೂಕ್ತ ದಾಖಲೆ ಕೊಡದಿದ್ದಲ್ಲಿ, ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯ ಸಂದರ್ಭ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ. ಗಾನಾ ಕುಮಾರಿ, ಲೋಕೋಪಯೋಗಿ ಇಲಾಖೆಯ ಎಇಇ ಪ್ರಮೋದ್ ಮತ್ತು ಕಾನಿಷ್ಕ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಕುಮಾರ್ ಕಾಂಬ್ಳೆ, ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ವಿಜಯವಿಕ್ರಮ್, ೩೪ ನೆಕ್ಕಿಲಾಡಿ ಗ್ರಾಮಕರಣಿಕ ರಮಾನಂದ ಚಕ್ಕಡಿ, ಉಪ್ಪಿನಂಗಡಿ ಗ್ರಾಮಕರಣಿಕ ಸುನೀಲ್, ೩೪ ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಕುಮಾರಯ್ಯ, ಪೊಲೀಸ್ ಸಿಬ್ಬಂದಿ, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

ಅನಧಿಕೃತವಾಗಿದ್ದರೆ ಕ್ರಮ: ಎಸಿ
ಕುಮಾರಧಾರ ನದಿಯ ಸರ್ವೇ ನಂಬರ್ ೧೦೮ನಲ್ಲಿ ಎಸ್. ಆನಂದ ಎಂಬವರು ಮರಳು ಗಣಿಗಾರಿಕೆ ನಡೆಸುತ್ತಿದ್ದು, ಅವರ ಮೇಲೆ ಕೆಲವು ದೂರುಗಳು ಬಂದಿತ್ತು. ಮರಳು ತೆಗೆಯಲು ಆನಂದ ಎಂಬವರಿಗೆ ಪರವಾನಿಗೆ ಇದೆ. ಅವರ ಸ್ಟಾಕ್ ಯಾರ್ಡ್ ಬಗ್ಗೆಯೂ ದಾಖಲೆಗಳನ್ನು ಕೇಳಿದ್ದು, ಅವರು ಸರಿಯಾದ ದಾಖಲೆಗಳನ್ನು ಕೊಡದೇ ಹೋದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಕ್ರಮ ತೆಗೆದುಕೊಳ್ಳಲಾಗುವುದು. ಖದೀಜಮ್ಮ ಅವರ ಜಾಗದಲ್ಲಿ ಸುಮಾರು ೪೫ ಲೋಡ್‌ನಷ್ಟು ಮರಳನ್ನು ಶೇಖರಿಸಲಾಗಿದ್ದು, ಇದಕ್ಕೆ ದಾಖಲೆಗಳು ಇಲ್ಲ. ಆದ್ದರಿಂದ ಈ ಮರಳನ್ನು ಮಹಜರು ನಡೆಸಿ, ವಶಕ್ಕೆ ಪಡೆದುಕೊಳ್ಳುತ್ತೇವೆ ಡಾ. ಯತೀಶ್ ಉಳ್ಳಾಲ್ ಸಹಾಯಕ ಆಯುಕ್ತರು, ಪುತ್ತೂರು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.