HomePage_Banner
HomePage_Banner
HomePage_Banner
HomePage_Banner

ನಿಡ್ಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್-19 ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಕೋವಿಡ್-19 ಕಾರ್ಯಪಡೆ ಸಭೆಯು ಮೆ.3 ರಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅಧ್ಯಕ್ಷೆ ಗೀತಾ .ಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಿಡಿಒ ಸಂದ್ಯಾಲಕ್ಷ್ಮಿ ಮಾತನಾಡಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಲ್ಲಿ ಹರಡದಂತೆ ತಡೆಗಟ್ಟಲು ಸರಕಾರದ ಕಾರ್ಯಸೂಚಿಯಂತೆ ನಡೆಯ ಬೇಕಾಗಿದೆ. ಅದಕ್ಕಾಗಿ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ಕಾರ್ಯಪಡೆ ಸನ್ನದ್ದರಾಗಿರ ಬೇಕು ಎಂದು ಹೇಳಿದರು.ವಿದೇಶ, ಅಥವಾ ಹೊರ ಜಿಲ್ಲೆಯಿಂದ ಆಗಮಿಸುವವರ ಬಗ್ಗೆ ಮಾಹಿತಿ ಪಡೆದುಕೊಂಡು ಅವರನ್ನು 14 ದಿನ ಹೊರಗೆ ತಿರುಗಾಡದಂತೆ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲು ಆರೋಗ್ಯ ಕಾರ್ಯಕರ್ತರು ಕ್ರಮ ತೆಗೆದು ಕೊಳ್ಳುವ ಬಗ್ಗೆ ತಿಳಿಸಿದರು. ಲಸಿಕೆ ಪ್ರತಿಯೊಬ್ಬರೂ ಕಡ್ಡಾಯವಾಗಿ ತೆಗೆದು ಕೊಳ್ಳಲು ತಿಳುವಳಿಕೆ ನೀಡುವುದು ಮುಂತಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.ಈ ಲಾಕ್ ಡೌನ್ ಸಂದರ್ಭದಲ್ಲಿ ಯಾರಿಗಾದರೂ  ಆರೋಗ್ಯದಲ್ಲಿ ಗಂಭೀರ ಸಮಸ್ಯೆಯುಂಟಾದಲ್ಲಿ ಅಸಹಾಯಕರಿಗೆ  ತುರ್ತು ಸಹಾಯ ಬೇಕಾದಲ್ಲಿ ಆಸ್ಪತ್ರೆಗೆ ಸಾಗಿಸಲು ವಾಹನದ ವ್ಯವಸ್ಥೆ ಕಲ್ಪಿಸಲು ಸಹಾಯವಾಣಿ ಆರಂಬಿಸುವುದೆಂದು ನಿರ್ಣಯಿಸಲಾಯಿತು.ಕಾರ್ಯಪಡೆಯ ವಾಟ್ಸಾಪ್ ಗ್ರೂಪ್ ಮಾಡಿದರೆ ಮಾಹಿತಿ ತಿಳಿಸಲು ಅನುಕೂಲವಾಗ ಬಹುದು ಎಂದು ಅಭಿಪ್ರಾಯ ಪಡಲಾಯಿತು. ಪ್ರತಿ ವಾರ್ಡ್ ನಲ್ಲಿ ವಾರ್ಡ್ ಸದಸ್ಯರ ಮುಂದಾಳತ್ವದಲ್ಲಿ ಸಮಿತಿ ರಚಿಸಲಾಯಿತು.ಒಟ್ಟಿನಲ್ಲಿ ಕೊರೋನಾ ರೋಗ ತಡೆಗಟ್ಟಲು ಪ್ರತಿಯೊಬ್ಬರೂ ಸಹಕಾರ ನೀಡಿದರೆ ಯಶಸ್ವಿಯಾಗಲು ಸಾಧ್ಯವಿದೆ ಎಂದು ಅಭಿಪ್ರಾಯ ಪಡಲಾಯಿತು.
ಪಂಚಾಯತ್ ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್. ಬಿ ಸದಸ್ಯರಾದ ಮುರಳೀಕೃಷ್ಣ ಮುಂಡೂರು, ನಂದಿನಿ ಆರ್ ರೈ,ಕಿರಿಯ ಆರೋಗ್ಯ ಸಹಾಯಕಿ  ಎ.ವಿ. ಕುಸುಮಾವತಿ,ಸಂಪ್ಯ ಠಾಣೆಯ ಎ.ಎಸೈ. ಸಿ.ಎಚ್ ನಾರಾಯಣ ಗೌಡ,ನಿಡ್ಪಳ್ಳಿ ಬೀಟ್ ಪೊಲೀಸ್ ಸುಂದರ.ಕೆ, ಆಶಾ ಕಾರ್ಯಕರ್ತೆಯರಾದ ಗೀತಾ.ಎಂ, ದಿವ್ಯಾ.ಸಿ.ಎಚ್, ಸುಮತಿ.ಎ, ಪವಿತ್ರ ಕುಮಾರಿ. ಕೆ,ಮುಂಡೂರು ಶಾಲಾ ಮುಖ್ಯ ಶಿಕ್ಷಕಿ ಆಶಾ.ಎಸ್, ನಿಡ್ಪಳ್ಳಿ ಅಂಗನವಾಡಿ ಕಾರ್ಯಕರ್ತೆ ಜಯಂತಿ.ಎಂ, ಮುಂಡೂರು ಅಂಗನವಾಡಿ ಕಾರ್ಯಕರ್ತೆ ದೇವಕಿ.ಕೆ, ಸೇರ್ತಾಜೆ ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ. ಜಿ.ಎಸ್, ನಿಡ್ಪಳ್ಳಿ ಜೆ.ಸಿ ಅಂಗನವಾಡಿ ಕಾರ್ಯಕರ್ತೆ ಸುಧಾ.ಎಸ್ ರೈ ಮತ್ತೀತರರು ಪಾಲ್ಗೊಂಡರು. ಪಂಚಾಯತ್ ಕಾರ್ಯದರ್ಶಿ ಶಿವರಾಮ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.