HomePage_Banner
HomePage_Banner
HomePage_Banner
HomePage_Banner

ಹಿರೇಬಂಡಾಡಿ: ಶಾಸಕರ ನೇತೃತ್ವದಲ್ಲಿ ಕೋವಿಡ್ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಹಿರೇಬಂಡಾಡಿ: ಕೊರೋನಾ 2ನೇ ಅಲೆ ಅಬ್ಬರ ತಡೆಯುವ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರುರವರ ಅಧ್ಯಕ್ಷತೆಯಲ್ಲಿ ಹಿರೇಬಂಡಾಡಿ ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆ ಸಭೆ ಹಿರೇಬಂಡಾಡಿ ಗ್ರಾ.ಪಂ.ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.

ಸಭೆ ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡಿತು. ಈ ವೇಳೆ ಸಭೆಯಲ್ಲಿ ಕಾರ್ಯಪಡೆ ಸದಸ್ಯರ ಗೈರು ಹಾಜರಿ ಎದ್ದು ಕಾಣುತಿತ್ತು. ಇದರಿಂದ ಗರಂ ಆದ ಶಾಸಕರು, ಸಭೆಗೆ ಗೈರು ಹಾಜರಿಯಾಗಿರುವ ಸದಸ್ಯರುಗಳ ಬಗ್ಗೆ ಮೇಲಾಧಿಕಾರಿಗಳಿಗೆ ವಿವರ ನೀಡಿ. ಗೈರು ಹಾಜರಿಯಾದವರಿಗೆ ನೋಟಿಸ್ ನೀಡುವಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸೂಚಿಸಿದರು. ಕೋವಿಡ್ ಕಾರ್ಯಪಡೆಯ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುವಂತೆ ಸೂಚಿಸಿದ ಶಾಸಕರು, ಹಿರೇಬಂಡಾಡಿ ಗ್ರಾಮವು ಕೋವಿಡ್ ಮುಕ್ತ ಗ್ರಾ.ಪಂ.ಆಗುವಲ್ಲಿ ಎಲ್ಲರೂ ಸಹಕರಿಸುವಂತೆ ಹೇಳಿದರು.

ಕೋವಿಡ್ 19 ಪ್ರಕರಣ ಕಂಡುಬಂದ ಮನೆಯವರಿಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಆಗಬಾರದು. ಈ ಬಗ್ಗೆ ಗ್ರಾ.ಪಂ.ಸೂಕ್ತ ಕ್ರಮ ಕೈಗೊಳ್ಳಬೇಕು. ಪಾಸಿಟಿವ್ ಬಂದ ಮನೆಯವರನ್ನು ಹೋಮ್ ಐಸೋಲೇಶನ್ ಮಾಡಬೇಕು. ಒಂದು ವೇಳೆ ಮನೆಯಲ್ಲಿ ಸಮಸ್ಯೆಯಾದರೆ ಕೋವಿಡ್ ಸೆಂಟರ್‌ಗೆ ಸೇರಿಸಬೇಕೆಂದು ಹೇಳಿದ ಶಾಸಕರು, ಕೋವಿಡ್ ಪಾಸಿಟಿವ್ ಬಂದ ಮನೆಯವರು ಉದ್ದಟತನದಿಂದ ವರ್ತಿಸಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹಿರೇಬಂಡಾಡಿ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ನೆಹರುತೋಟ, ನೋಡೆಲ್ ಅಧಿಕಾರಿ ರಾಜ್‌ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಉಪಾಧ್ಯಕ್ಷೆ ಭವಾನಿಉಮೇಶ್ ನಾಯ್ಕ್, ಗ್ರಾ.ಪಂ.ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯಸ್ಥರು, ಗ್ರಾಮಕರಣಿಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ, ನ್ಯಾಯಬೆಲೆ ಅಂಗಡಿ ಮುಖ್ಯಸ್ಥರು, ಬ್ಯಾಂಕ್ ವ್ಯವಸ್ಥಾಪಕರು, ಆರೋಗ್ಯ ಕಾರ್ಯಕರ್ತರು, ಬೀಟ್ ಪೊಲೀಸ್ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ದಿನೇಶ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪರಮೇಶ್ವರ್ ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.