HomePage_Banner
HomePage_Banner
HomePage_Banner
HomePage_Banner

ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ವತಿಯಿಂದ ಮದ್ರಸ ಮುಅಲ್ಲಿಮರಿಗೆ ರಂಝಾನ್ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಇದರ ವತಿಯಿಂದ ರೇಂಜ್ ಮದ್ರಸ ಮೆನೇಜ್‌ಮೆಂಟ್ ನ ಅಧ್ಯಕ್ಷ ಹಾಗೂ ಜಿಲ್ಲಾ ಮದ್ರಸ ಮೆನೇಜ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ರಫಿಕ್ ಹಾಜಿ ನೇರಳೆಕಟ್ಟೆ ರವರ ನೇತೃತ್ವದಲ್ಲಿ ಮದ್ರಸದ ಮುಅಲ್ಲಿಮರಿಗೆ ರಂಝಾನ್ ಕಿಟ್ ವಿತರಿಸಲಾಯಿತು. ಪುತ್ತೂರು ರೇಂಜ್ ಗೆ ಒಳಪಟ್ಟ 70 ಮದ್ರಸ ಮುಅಲ್ಲಿಮರಿಗೆ ದಿನಸಿ ಸಾಮಗ್ರಿಗಳನ್ನೊಳಗೊಂಡ ರಂಝಾನ್ ಕಿಟ್‌ನ್ನು ವಿತರಿಸಲಾಯಿತು.


ಪುತ್ತೂರು ಬದ್ರಿಯಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಅಸ್ಸಾರುದ್ದೀನ್ ಜಮಾತ್ ಕಮಿಟಿಯ ಅಧ್ಯಕ್ಷ ಎಲ್ ಟಿ ಅಬ್ದುಲ್ ರಝಾಕ್ ಹಾಜಿ ರವರು ವಹಿಸಿ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಪುತ್ತೂರು ಬದ್ರಿಯ ಮಸೀದಿಯ ಖತೀಬ್ ಮೊದು ಫೈಝಿ ದುಃವಾಶೀರ್ವಚನ ನೀಡಿದರು. ಸಭೆಯನ್ನು ಉದ್ದೇಶಿಸಿ ಮುಫತ್ತೀಶ್ ಉಮರುಲ್ ಫಾರೂಖ್ ದಾರಿಮಿ, ಪುತ್ತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಆಸೀಪ್ ಅಝ್ಹರಿ, ಪಡೀಲ್ ಮಸೀದಿಯ ಖತೀಬ್ ಹಾಗೂ ಪ್ರಧಾನ ಕಾರ್ಯದರ್ಶಿ ಹನೀಫ್ ದಾರಿಮಿರವರು ಮಾತನಾಡಿ ಶುಭ ಹಾರೈಸಿದರು. ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್‌ನ ಅಧ್ಯಕ್ಷ ಹಾಗೂ ಜಿಲ್ಲಾ ಮದ್ರಸ ಮೆನೇಜ್ಮೆಂಟ್ ನ ಪ್ರಧಾನ ಕಾರ್ಯದರ್ಶಿ ರಫಿಕ್ ಹಾಜಿ ನೇರಳಕಟ್ಟೆರವರು ಮಾತನಾಡಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮದ್ರಸ ಅಧ್ಯಾಪಕರುಗಳಿಗೆ ಕಿಟ್‌ನ್ನು ವಿತರಿಸಿದ್ದು, ಅವಶ್ಯಕತೆಯಾಗಿದ್ದು ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಮದ್ರಸ ಮೆನೇಜ್ಮೆಂಟ್‌ನ ಪದಾಧಿಕಾರಿಗಳಾದ ಸಾಲ್ಮರ ಮೊಹಮ್ಮದ್ ಶರೀಫ್, ಸಿಟಿ ಬಜಾರ್‌ನ ಮಾಲಕ ಹಸನ್ ಹಾಜಿ, ಅಬ್ದುಲ್ ಅಝೀಝ್ ಸ್ಕೇಲ್, ದಾವೂದ್ ಬಪ್ಪಳಿಗೆರವರು ಉಪಸ್ಥಿತರಿದ್ದರು. ಮದ್ರಸ ಮೆನೇಜ್ಮೆಂಟ್‌ನ ಪದಾಧಿಕಾರಿಗಳಾದ ಅಬ್ದುಲ್ ರಝಾಕ್ ಆರ್. ಪಿ, ಶೇಖ್ ಜೈನುದ್ದೀನ್ ಮತ್ತಿತರರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.