HomePage_Banner
HomePage_Banner
HomePage_Banner
HomePage_Banner

ಸೆಕೆಂಡರಿ ಕಾಂಟೆಕ್ಟ್‌ನಲ್ಲಿರುವವರಿಂದ ರಾಂಗ್ ಮೊಬೈಲ್ ನಂಬರ್!! ನಗರಸಭೆ, ಆಶಾ ಕಾರ್ಯಕರ್ತರಿಂದ ಕಾಂಟೆಕ್ಟ್ ಟ್ರೇಸ್‌ಗೆ ಪರದಾಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೋವಿಡ್ -19 ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಳಕಿಗೆ ಬಂದ ಘಟನೆ

ಪುತ್ತೂರು: ಕೋವಿಡ್ ಸೋಂಕಿತರ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕಿತರು ನೀಡಿದ ರಾಂಗ್ ಮೊಬೈಲ್ ನಂಬರ್‌ನಿಂದಾಗಿ ಕೋವಿಡ್ ಸಂಪರ್ಕಿತರ ಕಾಂಟೆಕ್ಟ್ ಟ್ರೇಸ್ ಮಾಡುವಲ್ಲಿ ನಗರಸಭೆ ಮತ್ತು ಆಶಾ ಕಾರ್ಯಕರ್ತರು ಹರಸಾಹಸ ಪಡುವ ಘಟನೆಯೊಂದು ಬೆಳಕಿಗೆ ಬಂದಿದೆ. ಎಷ್ಟೋ ಕೋವಿಡ್ ಸೋಂಕಿತರ ಸೆಕೆಂಡರಿ ಸಂಪರ್ಕಿತರು ತಪ್ಪು ಮೊಬೈಲ್ ನಂಬರ್ ನೀಡುತ್ತಿದ್ದಾರೋ ಅಥವಾ ಇಲ್ಲಿ ನೋಂದಾವಣೆಯಲ್ಲಿ ಎಡವಟ್ಟಾಗಿದೆಯೋ ಎಂಬುದು ಪರಿಶೀಲಿಸಬೇಕಾಗಿದೆ.

 


ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಮೇ .3ರಂದು ನಗರಸಭೆ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರದ ಕುರಿತು ಸುದೀರ್ಘ ಚರ್ಚೆ ನಡೆಯಿತು. ಕ್ವಾರಂಟೈನ್ ವಾಚ್ ಆಪ್‌ನಲ್ಲಿ ಬಂದ ಮಾಹಿತಿಯಂತೆ ಸಾಲ್ಮರದ ನಿವಾಸಿ ಎಂದಿದೆ. ಆದರೆ ಅವರ ಸಂಪರ್ಕ ಮಾಡಲು 9 ನಂಬರ್‌ನ್ನು 10 ಬಾರಿ ನಮೂದಿಸಿದ್ದಾರೆ. ಇಂತಹ ಮೊಬೈಲ್ ನಂಬರೇ ಇಲ್ಲ. ಹೀಗಾಗಿ ನಮಗೆ ಸೆಕೆಂಡರಿ ಸಂಪರ್ಕಿತರನ್ನು ಟ್ರೇಸ್ ಮಾಡಲು ಕಷ್ಟ ಎಂದು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಪ್ರಸ್ತಾಪಿಸಿದರು. ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ ಅವರು ಹಾಗೆ ಆಗಲು ಸಾಧ್ಯವಿಲ್ಲ. ಟ್ರೂ ಕಾಲ್‌ನಲ್ಲಿ ಹೆಸರು ಸಿಗುತ್ತದೆಯಲ್ಲ ಎಂದರು. ಟ್ರೂ ಕಾಲ್‌ನಲ್ಲಿ ಹೆಸರು ಪತ್ತೆ ಮಾಡಲು ಅಂತಹ ನಂಬರೇ ಇಲ್ಲದಿದ್ದರೆ ಹೇಗೆ ಸಿಗುವುದು ಎಂದು ಆರೋಗ್ಯ ನಿರೀಕ್ಷಕರು ಸ್ಪಷ್ಟಪಡಿಸಿದರು.

ತಾಲೂಕು ಆರೋಗ್ಯಾಧಿಕಾರಿಯವರು ಮಾತನಾಡಿ ಫೋನ್ ನಂಬರ್ ತಪ್ಪಲು ಸಾಧ್ಯವಿಲ್ಲ. ಲ್ಯಾಬ್ ಪರೀಕ್ಷೆಗೆ ಒಟಿಪಿ ನಂಬರ್ ಬೇಕಲ್ಲ ಎಂದರು. ಇದು ಸೋಂಕಿತರ ಪಟ್ಟಿಯಲ್ಲ. ಸೋಂಕಿತರ ಸಂಪರ್ಕ ಹೊಂದಿದವರ ಪಟ್ಟಿ ಎಂದು ಇನ್ನೊಮ್ಮೆ ಸ್ಪಷ್ಟಪಡಿಸಿದರು. ಹಾಗಾದರೆ ಆಪ್‌ನಲ್ಲಿ ಫೀಡ್ ಮಾಡುವವರಿಂದ ತಪ್ಪಾಗಿದೆ ಎಂದು ಹೇಳಿದ ಡಾ. ಅಶೋಕ್ ರೈ ಅವರು ಇಲ್ಲಿ ಆರೋಗ್ಯ ಇಲಾಖೆ ತಪ್ಪಿಲ್ಲ. ಒಂದು ವೇಳೆ ಲ್ಯಾಬ್‌ಟೆಕ್ನೀಷಿಯನ್ ತಪ್ಪು ಮಾಡಿದರೆ ಅದು ದೊಡ್ಡ ತಪ್ಪು ಆಗುತ್ತದೆ.

ಈ ನಡುವೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಮಾತನಾಡಿ ಅಂಗನವಾಡಿ, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ, ಅಧಿಕಾರಿ ವರ್ಗದವರು ಶಿಕ್ಷಕರೊಂದಿಗೆ ಹೊಂದಾಣಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ತೂರು ತಾಲೂಕಿನ ಪ್ರಗತಿ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ಪ್ರಸ್ತಾಪ ಆಗಿದೆ. ಆದರೆ ಇವತ್ತು ನಾವು ಜಿಲ್ಲೆಯಲ್ಲಿ ನಾವು ಕೋವಿಡ್ ನಿಯಂತ್ರಣದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ಆದರೆ ಎಲ್ಲೋ ಒಂದು ಕಡೆ ಡಾಟಾ ಎಂಟ್ರಿ ತೊಂದರೆ ಕಂಡಿರುವುದು ಬೆಳಕಿಗೆ ಬಂದಿದೆ. ಆದರೆ ನಮ್ಮ ಶಿಕ್ಷಕರಿಂದ ಲೋಪದೋಷ ಆಗಿದೆ ಎಂದು ಖಚಿತ ಪಡಿಸಿಕೊಂಡು ಆರೋಪ ಮಾಡುವುದು ಉತ್ತಮ. ಒಂದು ವೇಳೆ ತಪ್ಪಾಗಿದ್ದರೆ ಶಿಕ್ಷಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕಾಗಿದೆ. ಹಾಗಾಗಿ ಎಲ್ಲರ ಹೊಂದಾಣಿಕೆಯಲ್ಲಿ ಕೆಲಸ ಮಾಡೋಣ ಎಂದರು. ತಹಶೀಲ್ದಾರ್ ಮಧ್ಯೆ ಪ್ರವೇಶಿಸಿ ಕೋವಿಡ್‌ಗೆ ಸಂಬಂಧಿಸಿ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳೋಣ ಎಂದರು.

ಪೌರಾಯುಕ್ತೆ ರೂಪಾ ಶೆಟ್ಟಿ ವಿವಿಧ ಮಾಹಿತಿ ನೀಡಿದರು. ಸಭೆಯಲ್ಲಿ ನಗರಸಭೆ ಪರಿಸರ ವಿಭಾಗದ ಸಹಾಯಕ ಕಾರ್ಯಪಾಕ ಅಭಿಯಂತರ ಶಬರೀನಾಥ್ ರೈ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಉಪಸ್ಥಿತರಿದ್ದರು.

ನಗರಸಭೆಯಿಂದ 5 ಮಂದಿಯ ಸಮಿತಿ ರಚನೆ ಮನೆ ಮನೆ ಭೇಟಿ
ನಗರಸಭಾ ಅಧ್ಯಕ್ಷ ಜೀವಂದರ್‌ ಜೈನ್‌ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಶಾಸಕರು ಪ್ರತಿ ಪಂಚಾಯತ್ ಸಭೆಗಳನ್ನು ಮಾಡುತ್ತಿದ್ದಾರೆ. ನಗರಸಭೆಯೊಳಗೆ ಇದನ್ನು ನಿಯಂತ್ರಣ ಮಾಡುವ ಕುರಿತು ಯಾವ ರೀತಿ ಕಾರ್ಯಕ್ರಮ ಹಾಕಿಕೊಳ್ಳಬಹುದು ಎಂಬಂತೆ ಆಶಾ ಕಾರ್ಯಕರ್ತರು, ಶಿಕ್ಷಕರು ಮತ್ತು ನಮ್ಮ ನಗರಸಭೆ ಸಿಬ್ಬಂದಿಗಳು, ನಗರಸಭಾ ಸದಸ್ಯರು ಸೇರಿ ಕೊಂಡು ಎಲ್ಲೆಲ್ಲಿ ಅಂತಹ ಸೋಂಕಿತ ಸಂಶಯವಿದೆಯೋ, ಪರವೂರಿನಲ್ಲಿ ಬಂದವರ ಮಾಹಿತಿ ಕಳೆ ಹಾಕುವ ಮೂಲಕ ಅಲ್ಲಿಗೆ ಸಮಿತಿ ಮಾಡಿಕೊಂಡು ತೆರಳುವ ಕಾರ್ಯಕ್ರಮ ನಡೆಯಬೇಕು. ಸೋಂಕಿತರ ಅಥವಾ ಪರವೂರಿನಿಂದ ಬಂದವರಿಗೆ 7 ದಿನದ ಮಟ್ಟಿಗೆ ಮನೆಯಲ್ಲೇ ಕ್ವಾರಂಟೈನ್ ಮಾಡುವಂತೆ ಸೂಚಿಸಬೇಕು. ಪ್ರತಿ ವಾರ್ಡ್‌ನಲ್ಲೂ ನಗರಸಭೆ ಸದಸ್ಯರ ನೇತೃತ್ವದಲ್ಲಿ ಆರೋಗ್ಯ, ಆಶಾ ಕಾರ್ಯಕರ್ತರು, ಶಿಕ್ಷಕರ 5 ಮಂದಿಯ ಸಮಿತಿ ಸಭೆ ನಡೆಯಬೇಕು. ಪ್ರತಿ ಮನೆಗೆ ಭೇಟಿ ಕೊಡುವ ಕಾರ್ಯಕ್ರವೂ ನಡೆಯಬೇಕು. ಒಟ್ಟು ಸಾರ್ವಜನಿಕ ಹಿತ ದೃಷ್ಟಿಯಿಂದ ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.