HomePage_Banner
HomePage_Banner
HomePage_Banner
HomePage_Banner

ಕೊರೋನಾ ಕಾರ್ಯಪಡೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು: ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೋವಿಡ್ -19 ಎರಡನೇ ಅಲೆಯಲ್ಲಿ ಸೋಂಕಿತರ ಸಂಪರ್ಕ ಪಡೆದವರ ಪತ್ತೆ ಕಾರ್ಯ ಪುತ್ತೂರು ತಾಲೂಕಿನಲ್ಲಿ ಮಂದಗತಿಯಲ್ಲಿ ನಡೆಯುತ್ತಿದ್ದು, ಇದು ಕೊರೋನಾ ನಿಯಂತ್ರಣದಲ್ಲಿ ಹಿನ್ನಡೆಯನ್ನು ತರುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಮುಂಜಾಗ್ರತಾ ಕಾರ್ಯಪಡೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಸೂಚಿಸಿದ್ದಾರೆ.


ಅವರು ಸೋಮವಾರ ಉಪ್ಪಿನಂಗಡಿ, ಬಜತ್ತೂರು, ಹಿರೆಬಂಡಾಡಿ, 34 ನೇ ನೆಕ್ಕಿಲಾಡಿಗಳಲ್ಲಿ ಕರೆಯಲಾದ ಕೊರೋನಾ ಮುಂಜಾಗ್ರತಾ ಕಾರ್ಯ ಪಡೆಯ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು.

ಕೊರೋನಾ ಪೀಡಿತರ, ಮತ್ತವರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾವಿರಿಸುವುದು, ಅವರ ಸಂಚಾರವನ್ನು ನಿರ್ಬಂಧಿಸುವುದು, ಪ್ರಸಕ್ತ ನಡೆಯಬೇಕಾದ ಅತೀ ಅಗತ್ಯದ ಕೆಲಸವಾಗಿದೆ. ಈ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದರೆ, ಎಲ್ಲ ಪ್ರಯತ್ನಗಳು ವಿಫಲವಾಗಲಿವೆ. ಮಾತ್ರವಲ್ಲದೆ ಮತ್ತಷ್ಟು ದಿನ ಲಾಕ್ ಡೌನ್, ಕರ್ಪ್ಯೂ ನಂತಹ ಕ್ರಮಗಳಿಗೆ ನಾವು ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು.

ಕೊರೋನಾ ಪೀಡಿತರಿಗೆ ಔಷಧಿ, ಅವಶ್ಯಕ ಆಹಾರ ಸಾಮಾಗ್ರಿಗಳನ್ನು ಒದಗಿಸುವುದೂ ಸೇರಿದಂತೆ ದಿನ ನಿತ್ಯದ ಖರ್ಚುವೆಚ್ಚಗಳನ್ನು ಪಂಚಾಯತ್ ಆಡಳಿತವೇ ಭರಿಸಬೇಕೆಂದ ಶಾಸಕರು ಸದ್ಯದ ಪರಿಸ್ಥಿತಿಯಲ್ಲಿ ಪುತ್ತೂರಿನಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ಒದಗಿಸುವ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶದಲ್ಲೂ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದರೆ ಉಪ್ಪಿನಂಗಡಿಯಲ್ಲೂ ಕೊರೋನಾ ಆಸ್ಪತ್ರೆಯನ್ನು ತೆರೆಯಲಾಗುವುದೆಂದು ತಿಳಿಸಿದರು.

ಉಪ್ಪಿನಂಗಡಿಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ನೋಡೆಲ್ ಅಧಿಕಾರಿ ಗರ್ಜಿ ಲಿಂಗಪ್ಪ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಬಿಇಒ ಲೋಕೇಶ್ , ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಉಪಾಧ್ಯಕ್ಷ ವಿನಾಯಕ ಪೈ, ಪಿಡಿಒ ವಿಲ್ಪ್ರೇಡ್ ಲಾರೆನ್ಸ್ ರೋಡ್ರಿಗಸ್, ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮುಝಾಕೀರ್ ಹುಸೇನ್, ವೈಧ್ಯಾಧಿಕಾರಿ ಡಾ. ಝರಿನಾ ಫಾತಿಮಾ, ಪ್ರೊಬೆಷನರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ , ಗಣ್ಯರಾದ ಜಯಂತ ಪುರೋಳಿ, ಚಂದ್ರಶೇಖರ್ ಮಡಿವಾಳ, ಸಚಿನ್ ಸುಂದರ ಗೌಡ , ಇಸ್ಮಾಯಿಲ್ ತಂಙಳ್, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ , ಸುರೇಶ್ ಅತ್ರಮಜಲು , ಯು ಟಿ ತೌಷಿಫ್, ಅಬ್ದುಲ್ ರಹಿಮಾನ್, ಲೋಕೇಶ್ ಬೆತ್ತೋಡಿ, ಧನಂಜಯ , ಶೋಭಾ, ವಿದ್ಯಾಲಕ್ಷ್ಮಿ ಪ್ರಭು, ಸಣ್ಣಣ್ಣ , ರಶೀದ್, ಇಬ್ರಾಹಿಂ ಮೈಸೀದಿ, ಜಯಂತಿ ಮೊದಲಾದವರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.