HomePage_Banner
HomePage_Banner
HomePage_Banner
HomePage_Banner

ತಿಂಗಳಾಡಿಯ ಮನೆಯಿಂದ ಕಳವು ಪ್ರಕರಣ: ಆರೋಪಿ ಬಂಧನದ ಬಳಿಕ ಮೊಬೈಲ್ ಫೋನ್, ನಗದು ವಾರೀಸುದಾರರಿಗೆ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿಯ ಮನೆಯೊಂದರಲ್ಲಿ ನಡೆದಿದ್ದ ಕಳವು ಪ್ರಕರಣದ ಆರೋಪಿಯ ಬಂಧನವಾದ ಹಿನ್ನೆಲೆಯಲ್ಲಿ ಕಳವಾಗಿದ್ದ ಮೊಬೈಲ್ ಫೋನ್ ಮತ್ತು ನಗದು ಹಣವನ್ನು ಪೊಲೀಸರು ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ.

ಎಸ್.ಐ. ಉದಯ ರವಿಯವರು ವಾರಿಸುದಾರರಿಗೆ ಮೊಬೈಲ್ ಫೋನ್ ಹಸ್ತಾಂತರಿಸುತ್ತಿರುವುದು

ಕೆದಂಬಾಡಿ ಗ್ರಾಮದ ತಿಂಗಳಾಡಿಯ ನಾರಾಯಣ ಪೂಜಾರಿ ಎಂಬವರ ಮನೆಯಲ್ಲಿ ಮಾರ್ಚ್ 24ರಂದು ಕಳವು ಪ್ರಕರಣ ನಡೆದಿತ್ತು. ನಾರಾಯಣ ಪೂಜಾರಿಯವರು ಹೊಸ ಮನೆ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಯೇ ಪಕ್ಕದಲ್ಲಿರುವ ಮೋಹನ್ ರೈಯವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ನಾರಾಯಣ ಪೂಜಾರಿಯವರ ಪುತ್ರ ರವಿಕಿರಣ್ ತಿಂಗಳಾಡಿರವರ ವಿವೋ ಮೊಬೈಲ್ ಫೋನ್ ಮತ್ತು ಅಲ್ಲಿಯೇ ಇರಿಸಲಾಗಿದ್ದ ಮೂರು ಸಾವಿರ ರೂ ನಗದು ಕಳವಾಗಿರುವುದು ಮಾರ್ಚ್ 24ರಂದು ಬೆಳಕಿಗೆ ಬಂದಿತ್ತು. ಕಳವು ಕೃತ್ಯದ ಬಗ್ಗೆ ನಾರಾಯಣ ಪೂಜಾರಿ ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು.‌ ಎಸ್.ಐ. ಉದಯ ರವಿ ನೇತೃತ್ವದಲ್ಲಿ ತನಿಖೆ ಮುಂದುವರಿಸಿದ ಪೊಲೀಸರ ತಂಡ‌ ಕಳವಾದ ಮೊಬೈಲ್ ಫೋನ್ ಮಂಗಳೂರಿನ ಬೆಂಗ್ರೆ ಪರಿಸರದ ಮೊಬೈಲ್ ಶಾಪೊಂದರಲ್ಲಿ ಕಾರ್ಯ‌ ನಿರ್ವಹಿಸುತ್ತಿರುವುದನ್ನು‌ ಲೊಕೇಶನ್ ಆಧಾರದಲ್ಲಿ ಪತ್ತೆ ಹಚ್ಚಿದ್ದರು.‌ ಮೊಬೈಲ್‌ ಶಾಪ್‌ ಮಾಲಕ ನೀಡಿದ ಮಾಹಿತಿಯ ಆಧಾರದಲ್ಲಿ‌ ತಿಂಗಳಾಡಿ ಪರಿಸರಕ್ಕೆ ಗಾರೆ ಕೆಲಸಕ್ಕೆ‌ ಬಂದಿದ್ದ ಫರಂಗಿಪೇಟೆಯ ಸಾದತ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ‌ ಕಲೆ ಹಾಕಿದ್ದರು. ಬೇರೊಂದು‌ ಕಳವು ಕೇಸಿನ ವಿಚಾರಣೆಗೆ ಸಂಬಂಧಿಸಿ‌ ನ್ಯಾಯಾಲಯಕ್ಕೆ‌ ಹಾಜರಾಗಿದ್ದ ಸಾದತ್ ನನ್ನು ವಶಕ್ಕೆ ಪಡೆದು‌ ವಿಚಾರಣೆ ನಡೆಸಿದಾಗ ಆತ ಕಳವು‌ ಕೃತ್ಯವನ್ನು ಒಪ್ಪಿಕೊಂಡಿದ್ದ.‌ ಬಳಿಕ ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆತನಿಗೆ ನ್ಯಾಯಾಂಗ‌ ಬಂಧನ ವಿಧಿಸಲಾಗಿತ್ತು. ನಂತರ ಆರೋಪಿ ಜಾಮೀನು‌ ಕೋರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಎರಡು ಬಾರಿ ತಿರಸ್ಕರಿಸಿದ್ದು ಸಾದತ್ ಇನ್ನೂ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾನೆ.‌ ಈ ಮಧ್ಯೆ, ಕಳವುಗೈಯ್ಯಲಾಗಿದ್ದ ಮೊಬೈಲ್ ಫೋನನ್ನು ಬೆಂಗ್ರೆಯ ಮೊಬೈಲ್ ಶಾಪ್ ನಿಂದ ವಶಕ್ಕೆ ಪಡೆದಿದ್ದ ಪೊಲೀಸರು ನಗದು ಹಣವನ್ನು ಆತನಿಂದ ವಶಪಡಿಸಿಕೊಂಡಿದ್ದರು.

 

ಇದೀಗ ನ್ಯಾಯಾಲಯದ ನಿರ್ದೇಶನದಂತೆ ಸಂಪ್ಯ ಠಾಣಾ ಎಸ್.ಐ. ಉದಯ ರವಿಯವರು ಪೊಲೀಸ್ ಠಾಣೆಯಲ್ಲಿ ಮೊಬೈಲ್ ಫೋನ್ ಮತ್ತು ನಗದು ಹಣವನ್ನು ನಾರಾಯಣ ಪೂಜಾರಿಯವರಿಗೆ ಹಿಂತಿರುಗಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.