HomePage_Banner
HomePage_Banner
HomePage_Banner
HomePage_Banner

ಸುದ್ದಿ ಸಹಾಯವಾಣಿ ಕಾಳಜಿ – ಲಾಕ್ ಆದ ಜಾಯಿಂಟ್ ವೀಲ್ಹ್ ಕುಟುಂಬಕ್ಕೆ ಉದ್ಯಮಿ ಜಯರಾಮ ರೈ ಅವರಿಂದ ಅಗತ್ಯ ವಸ್ತುಗಳ ಪೂರೈಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸುದ್ದಿಯ ಕಾಳಜಿಯಿಂದ ಪುನರ್‌ಜೀವನ – ಕೆ ಜೀವಂಧರ್ ಜೈನ್
  • ದೇವಳದಿಂದ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿದೆ – ಮುಳಿಯ ಕೇಶವಪ್ರಸಾದ್
  • ಕಳೆದ ಲಾಕ್‌ಡೌನ್‌ನಲ್ಲಿ 80 ಕ್ವಿಂಟಾಲ್ ಅಕ್ಕಿ ವಿತರಣೆ – ಜಯಕುಮಾರ್ ರೈ
  • ಮೂಲಭೂತ ಸೌಕರ್ಯ ಒದಗಿಸಲು ಮಾದ್ಯಮ ಮಿತ್ರರು ಕಾರಣ – ಶೇಖರ್ ನಾರಾವಿ

ಪುತ್ತೂರು: ಪುತ್ತೂರು ಜಾತ್ರೆಯಲ್ಲಿ ಮನರಂಜನೆ ತೋರಿಸಲು ಬಂದು ಕೋವಿಡ್ -19 ಜನತಾ ಕರ್ಫ್ಯೂವಿನಿಂದ ಇಲ್ಲೇ ಲಾಕ್ ಆಗಿರುವ ಜಾಯಿಂಟ್ ವೀಲ್ ಕುಟುಂಬಕ್ಕೆ ಅಬುದಾಬಿಯಲ್ಲಿ ಬಿನ್ ಫರ್ದಾನ್ ಗ್ರೂಪ್‌ನಲ್ಲಿ ಗ್ರೂಪ್ ಸಿಎಫ್‌ಓ ಆಗಿರುವ ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ಜಯರಾಮ ರೈ ಅವರು ತನ್ನ ಸಹೋದರ ಉದ್ಯಮಿ ಜಯಕುಮಾರ್ ರೈ ಅವರ ಮೂಲಕ ಮೇ .4ರಂದು ಅಗತ್ಯ ದಿನಸಿ ವಸ್ತುಗಳ ಪೂರೈಕೆ ಮಾಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯ ಶೇಖರ್ ನಾರಾವಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಸ್ಥಳೀಯ ಸದಸ್ಯ ಶಕ್ತಿಸಿನ್ಹ ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಸಿಇಒ ಸೃಜನ್ ಉರುಬೈಲು ಅವರು ಜಾಯಿಂಟ್ ವೀಲ್ಹ್ ಕುಟುಂಬಕ್ಕೆ ಅಗತ್ಯ ವಸ್ತುಗಳನ್ನು ಹಸ್ತಾಂತರಿಸಿದರು.

ಸುದ್ದಿಯ ಕಾಳಜಿಯಿಂದ ಪುನರ್‌ಜೀವನ:
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಅವರು ಮಾತನಾಡಿ ಜಾತ್ರೆಗೆ ಮನೋರಂಜನೆ ನೀಡಲು ಬಂದ ಕುಟುಂಬಕ ಅನಿರೀಕ್ಷಿತ ಲಾಕ್‌ಡೌನ್‌ನಿಂದಾಗಿ ತೊಂದರೆಗೊಳಗಾದ ಅವರ ಕಷ್ಟಕ್ಕೆ ಸ್ಪಂಧಿಸಿದ ಸುದ್ದಿಯ ಕಾಳಜಿ ಅವರಿಗೆ ಪುನರ್ ಜೀವನ ನೀಡಿದೆ. ಪುತ್ತೂರಿನ ಜನತೆ ಶ್ರೀ ಮಹಾಲಿಂಗೇಶ್ವರ ಸ್ಥಳ ಸಾನಿಧ್ಯದಲ್ಲಿರುವವರಿಗೆ ತೊಂದರೆ ಆಗದಂತೆ ನೋಡಲಿದ್ದಾರೆ ಎಂದರು.

ದೇವಳದಿಂದ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿದೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಅವರು ಮಾತನಾಡಿ ತೊಂದರೆಗೆ ಒಳಗಾಗಿರುವ ಕುಟುಂಬಕ್ಕೆ ಅಗತ್ಯ ವಸ್ತು ಪೂರೈಸಿದ ಜಯರಾಮ್ ರೈ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ಜಾತ್ರೆಯ ಸಂದರ್ಭ ಬಂದ ಈ ಕುಟುಂಬ ದೇವಳದ ಗದ್ದೆಗೆ ಒಳಪಟ್ಟ ಜಾಗದಲ್ಲಿ ಇಲ್ಲವಾದರೂ ಮನವೀಯತೆ ದೃಷ್ಟಿಯಿಂದ ದೇವಳದ ಕಡೆಯಿಂದ ಆ ಕುಟುಂಬಕ್ಕೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಒದಗಿಸಿದೆ. ತಮ್ಮ ಮೂಲ ಊರಿಗೆ ಹೋಗುವ ಬದಲು ಒಂದು ಊರಿನ ಜಾತ್ರೆ ಬಿಟ್ಟು ಇನ್ನೊಂದು ಊರಿನ ಜಾತ್ರೆಗೆ ಹೋಗುತ್ತಿರುವ ಈ ಕುಟುಂಬಕ್ಕೆ ಲಾಕ್‌ಡೌನ್ ಸಮಸ್ಯೆಯಿಂದ ಮುಂದೆ ಎಲ್ಲಿಗೆ ಹೋಗುವುದು ಎಂಬ ಗುರಿ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಸದ್ಯ ಇಲ್ಲಿಯೇ ವಾಸ್ತವ್ಯ ಹೊಂದಿದ್ದಾರೆ. ದೇವಳದ ಬಳಿಯ ಶೆಡ್‌ನಲ್ಲಿ ಉಳಿಯಲು ತಿಳಿಸಿದೆ. ಆದರೆ ಅವರು ಅದಕ್ಕೆ ಮುಂದಾಗಿಲ್ಲ. ಆದರೆ ಅವರು ಯಾವಾಗ ಬೇಕಾದರೂ ಬಂದು ಉಳಿಯಬಹುದು. ಅದಲ್ಲದೆ ಅವರ ಕಷ್ಟಕ್ಕೆ ಸ್ಪಂಧಿಸಿದ ಸುದ್ದಿ ಮಾದ್ಯಮಕ್ಕೆ ಕೃತಜ್ಞತೆ ಸಲ್ಲಿಸಬೇಕು. ಮುಂದೆ ಲಾಕ್‌ಡೌನ್ ಮುಂದುವರಿದರೆ ದೇವಳದಿಂದ ಆಹಾರದ ಕಿಟ್ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಕಳೆದ ಲಾಕ್‌ಡೌನ್‌ನಲ್ಲಿ ೮೦ ಕ್ವಿಂಟಾಲ್ ಅಕ್ಕಿ ವಿತರಣೆ:
ಅಬುಧಾಬಿಯಲ್ಲಿ ಬಿನ್‌ಪರ್ದಾನ್ ಗ್ರೂಪ್‌ನಲ್ಲಿ ಗ್ರೂಪ್ ಸಿಎಫ್‌ಒ ಆಗಿರುವ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ಜಯರಾಮ ರೈ ಅವರ ಸಹೋದರ ಜಯಕುಮಾರ್ ರೈ ಅವರು ಮಾತನಾಡಿ ಸುದ್ದಿ ಮಾದ್ಯಮದ ಪ್ರಕಟಣೆಯಲ್ಲಿ ಕಷ್ಟದಲ್ಲಿರುವ ಕುಟುಂಬದ ವಿಚಾರಕ್ಕೆ ನನ್ನ ಸಹೋದರ ತಕ್ಷಣ ಸ್ಪಂಧಿಸಿ ಅಗತ್ಯ ದಿನಸಿ ವಸ್ತುಗಳನ್ನು ಪೂರೈಸಿದ್ದಾರೆ. ಅದೇ ರೀತಿ ಕಳೆದ ಬಾರಿಯ ಕೋವಿಡ್ ಲಾಕ್‌ಡೌನ್ ಸಂದರ್ಭ 80 ಕ್ವಿಂಟಾಲ್ ಅಕ್ಕಿಯನ್ನು ಸಂಕಷ್ಟದಲ್ಲಿರುವವರಿಗೆ ವಿತರಿಸಿದ್ದರು. ಇವೆಲ್ಲ ನಮಗೂ ನಮ್ಮ ಕುಟುಂಬಕ್ಕೂ ಸಂತೋಷದ ವಿಚಾರ. ಮುಂದೆಯೂ ನನ್ನ ಸಹೋರನಿಂದ ಅಗತ್ಯ ಸೇವೆ ನೀಡುವ ಕೆಲಸ ನಿರಂತರ ನಡೆಯಲು ಶಕ್ತಿ ಸಿಗಲಿ ಎಂದರು.

ಮೂಲಭೂತ ಸೌಕರ್ಯ ಒದಗಿಸಲು ಮಾದ್ಯಮ ಮಿತ್ರರು ಕಾರಣ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ಅವರು ಮಾತನಾಡಿ ಜಾತ್ರೆಗೆ ಬಂದು ದೇವಳದ ಗದ್ದೆಯ ಬಳಿಯ ಖಾಸಗಿ ಸ್ಥಳದಲ್ಲಿ ಮನೋರಂಜನೆ ನೀಡಲು ಬಂದಿದ್ದ ಕುಟುಂಬದ ಸಂಕಷ್ಟಕ್ಕೆ ಸ್ಪಂಧಿಸಬೇಕೆಂದು ದೇವಸ್ಥಾನದಿಂದ ಮೊದಲೆ ನಿರ್ಣಯ ಆಗಿತ್ತು. ಆದರೆ ಅವರು ಖಾಸಗಿ ಸ್ಥಳದಲ್ಲಿ ಇದ್ದರಿಂದ ತಕ್ಷಣ ಸ್ಪಂಧಿಸಲು ಆಗಿಲ್ಲ. ಈಗಾಗಲೇ ದೇವಳದ ವಠಾರದಲ್ಲಿ ಯಾರೆಲ್ಲಾ ಸಂಕಷ್ಟಲ್ಲಿದ್ದಾರೋ ಅವರಿಗೆ ಸೇವಾ ಭಾರತಿ ಕಡೆಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಮಾನವೀಯ ನೆಲೆಯಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ಶೌಚಾಲಯ ಒದಗಿಸುವ ಕೆಲಸ ಮಾಡಿದ್ದೇವೆ. ಇಂತಹ ಮಾನವೀಯ ನೆಲೆ ಬೇಕು ಎಂದು ತೋರಿಸಿಕೊಟ್ಟ ಪ್ರಮುಖ ಕಾರಣರಾದ ಮಾದ್ಯಮ ಮಿತ್ರರಿಗೆ ಕೃತಜ್ಞತೆಗಳು ಎಂದರು. ನಗರಸಭೆ ಸ್ಥಳೀಯ ಸದಸ್ಯ ಶಕ್ತಿಸಿನ್ಹ, ಸುದ್ದಿ ಸಮೂಹ ಸಂಸ್ಥೆಳ ಸಿಇಒ ಸೃಜನ್ ಊರುಬೈಲು, ಸುದ್ದಿ ಮೀಡಿಯ ಸೆಂಟರ್‌ನ ಜಾಹಿರಾತು ವಿಭಾಗದ ಸುರೇಶ್ ಶೆಟ್ಟಿ, ಕ್ಯಾಮರಮ್ಯಾನ್ ಕಾರ್ತಿಕ್ ಉಪಸ್ಥಿತರಿದ್ದರು. ಸುದ್ದಿ ಮೀಡಿಯಾ ಸೆಂಟರ್‌ನ ನಿರೂಪಕ ಗೌತಮ್ ಶೆಟ್ಟ ಕಾರ್ಯಕ್ರಮ ನಿರ್ವಹಿಸಿದರು.

ಮಹಾಲಿಂಗೇಶ್ವರ ದೇವಳದಿಂದಲೂ ನೀರಿನ, ವಿದ್ಯುತ್ ವ್ಯವಸ್ಥೆ
ದೇವಳದ ಬಳಿಯ ಖಾಸಗಿ ಗದ್ದೆಯಲ್ಲಿ ತಾತ್ಕಾಲಿಕವಾಗಿ ಟೆಂಟ್ ಹಾಕಿ ವಾಸ್ತವ್ಯ ಹೊಂದಿರುವ ಜಾಯಿಂಟ್ ವೀಲ್ಹ್ ಕುಟುಂಬಕ್ಕೆ ಮಳೆಯ ಸಂದರ್ಭ ದೇವಳದ ಪಂಚಾಕ್ಷರಿ ಮಂಟಪದಲ್ಲಿ ಊರಿಗೆ ಹೋಗಲು ಅವಕಾಶ ಸಿಗುವ ತನಕ ಉಳಿದು ಕೊಳ್ಳಲು ತಿಳಿಸಲಾಗಿತ್ತು. ಆದರೆ ಅವರು ಟೆಂಟ್‌ನಲ್ಲೇ ಇರುವುದಾಗಿ ತಿಳಿಸಿದ್ದರು. ಆದರೂ ಅವರು ಇರುವ ಸ್ಥಳಕ್ಕೆ ವಿದ್ಯುತ್ ದೀಪದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ದೇವಳದ ವತಿಯಿಂದ ನೀಡಲಾಗಿದೆ. ಮುಂದೆ ಲಾಕ್ ಡೌನ್ ಮುಂದುವರಿದರೆ ಅವರಿಗೆ ಊಟಕ್ಕೆ ಬೇಕಾಗುವ ಅಕ್ಕಿ, ದವಸಧಾನ್ಯ ನೀಡುವ ಕಾರ್ಯ ಮಾಡಲಾಗುವುದು – ಮುಳಿಯ ಕೇಶವಪ್ರಸಾದ್, ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.