HomePage_Banner
HomePage_Banner
HomePage_Banner
HomePage_Banner

ಗುಜರಾತಿನಲ್ಲಿ ಪ್ರೇಯಸಿ ಕೈ ಕೊಟ್ಟಳೆಂದು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ಮೈಸೂರಿನ ಯುವಕನಿಗೆ ಶಾಸಕರ ವಾರ್‌ರೂಮ್‌ನಿಂದ ಮರು ಜೀವನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಗುಜರಾತಿನಲ್ಲಿ ಪ್ರೇಯಸಿ ಕೈ ಕೊಟ್ಟಳೆಂದು ಮನನೊಂದು ಊರೂರು ಅಲೆದು ಕೊನೆಗೆ ಪುತ್ತೂರಿಗೆ ಆಗಮಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವನಿಗೆ ಪುತ್ತೂರು ಶಾಸಕರ ವಾರ್‌ರೂಮ್ ಮೂಲಕ ಕೌನ್ಸಿಲಿಂಗ್ ನಡೆಸಿ, ಊಟೋಪಚಾರ ಮಾಡಿಸಿ ಮರು ಜೀವನದ ಮಾರ್ಗ ತೋರಿಸಿದ ಘಟನೆ ಮೇ 3ರಂದು ನಡೆದಿದೆ.

ಮೈಸೂರು ಮೂಲದವರಾಗಿದ್ದು ಕಳೆದ ಹಲವಾರು ವರ್ಷಗಳಿಂದ ಗುಜರಾತ್‌ನ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ನಂದೀಶ್ ಎಂಬವರೇ ಆತ್ಮಹತ್ಯೆಗೆ ಪ್ರಯತ್ನಿಸಿದವರು. ಅವರು ಕಬಕ ಸಮೀಪದ ಪೋಳ್ಯ ತಿರುವಿನಲ್ಲಿ ರಸ್ತೆ ಬದಿ ಬಿದ್ದಿರುವುದನ್ನು ನಾಗರಾಜ್ ಮಿತ್ತೂರು ಎಂಬವರು ಗಮನಿಸಿ ಪುತ್ತೂರು ಬಿಜೆಪಿ ಕಚೇರಿಯ ಬಳಿ ಕರೆ ತಂದಿದ್ದರು. ಅಲ್ಲಿ ಶಾಸಕರ ವಾರ್‌ರೂಮ್ ಮೂಲಕ ನಂದೀಶ್ ಅವರಿಗೆ ಮೊದಲು ತಿಂಡಿ ನೀರು ಕೊಟ್ಟು ಬಳಿಕ ವಿಚಾರಿಸಿದಾಗ ಸರಿಯಾಗಿ ಉತ್ತರಿಸದೇ ಇರುವುದನ್ನು ಗಮನಿಸಿ ವಿಶ್ವಹಿಂದೂ ಪರಿಷತ್ ಕಾರ್ಯಾಲಯಲ್ಲಿ ಆಶ್ರಯ ನೀಡಲಾಯಿತು.ಈ ವೇಳೆ ನಂದೀಶ್ ಅವರು ಮಾತನಾಡಿ, “ನಾನು ಮೈಸೂರು ಮೂಲದವನು.ನನ್ನ ತಂದೆ ತಾಯಿ, ಅಕ್ಕಂದಿರು ಮೈಸೂರಿನಲ್ಲಿದ್ದಾರೆ. ನಾನು ಗುಜರಾತಿನಲ್ಲಿ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದೆ.ಅಲ್ಲಿ ಓರ್ವ ಯುವತಿಯೊಂದಿಗೆ ಲವ್ ಆಗಿತ್ತು.ಆಕೆ ಕೊನೆಗೆ ನನ್ನ ಕೈ ಬಿಟ್ಟಿದ್ದಾಳೆ.ಇದರಿಂದ ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿ ಅಲ್ಲಿಂದ ಕರ್ನಾಟಕಕ್ಕೆ ಬಂದಿದ್ದೇನೆ “ ಎಂದು ಹೇಳಿದರು.

ಈ ವೇಳೆ ಶಾಸಕರ ವಾರ್ ರೂಮ್‌ನ ಸದಸ್ಯರು ಮತ್ತು ವಿಶ್ವಹಿಂದೂ ಪರಿಷದ್, ಬಜರಂಗದಳ ನಾಯಕರು ನಂದೀಶ್ ಅವರಿಗೆ ಕೌನ್ಸಿಲಿಂಗ್ ಮಾಡಿದರು.ನಂತರ ಅವರಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಿ ಊಟೋಪಚಾರದ ವ್ಯವಸ್ಥೆ ಮಾಡಿದರು. ಈ ವೇಳೆ ನಂದೀಶ್ ನಾನು ಪುನಃ ಗುಜರಾತಿಗೆ ಹೋಗಬೇಕು ಎಂದು ಅವಲತ್ತುಕೊಂಡರು.ಶಾಸಕರ ವಾರ್ ರೂಮ್ ಮೂಲಕ ಆತನನ್ನು ಗುಜರಾತಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವ ಕುರಿತು ತೀರ್ಮಾನಿಸಲಾಯಿತು.ಶಾಸಕರ ವಾರ್‌ರೂಮ್‌ನ ಪಿ.ಜಿ.ಜಗನ್ನಿವಾಸ ರಾವ್, ರಾಜೇಶ್ ಬನ್ನೂರು, ಚಂದ್ರಶೇಖರ್ ರಾವ್ ಬಪ್ಪಳಿಗೆ, ಹರಿಪ್ರಸಾದ್ ಯಾದವ್, ವಿಶ್ವನಾಥ ಕುಲಾಲ್, ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಯುವರಾಜ್ ಪೆರಿಯತ್ತೋಡಿ, ಅಶೋಕ್ ಹಾರಾಡಿ, ರಾಘವೇಂದ್ರ ಪ್ರಭು, ಶಿವಕುಮಾರ್, ಡಾ.ಕೃಷ್ಣಪ್ರಸನ್ನ, ರಫೀಕ್ ದರ್ಬೆ, ರುಕ್ಮಯ ಇದ್ಪಾಡಿ, ಜಯಂತ್ ಮತ್ತು ಯುವಕನನ್ನು ಕಾಪಾಡಿದ್ದ ನಾಗರಾಜ್ ಮಿತ್ತೂರು ಮತ್ತಿತರರು ನಂದೀಶ್‌ರವರಿಗೆ ಉತ್ತಮ ಆರೈಕೆ ನೀಡಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.