HomePage_Banner
HomePage_Banner
HomePage_Banner
HomePage_Banner

ಪಂಚಾಯತ್ ವತಿಯಿಂದ  ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ; ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ನೇತೃತ್ವದಲ್ಲಿ ಮೆ.3 ರಂದು ಭೇಟಿ  ನೀಡಿ ಅಲ್ಲಿಯ ವ್ಯವಸ್ಥೆಯ ಬಗ್ಗೆ ಮತ್ತು ಇರುವ ಮೂಲ ಸೌಕರ್ಯಗಳ ಕುರಿತು    ವೈದ್ಯರೊಂದಿಗೆ ಚರ್ಚಿಸಿದರು.

ಕೋವಿಡ್ ಲಸಿಕೆಯನ್ನು ತೆಗೆದು ಕೊಳ್ಳಲು ಇನ್ನೂ ಹಲವಾರು ಜನ ಬಾಕಿ ಉಳಿದಿದ್ದಾರೆ. ಎರಡನೇ ಡೋಸ್ ಲಸಿಕೆ ಪಡೆಯಲೂ ಬಹಳಷ್ಟು ಜನ ಕಾಯುತ್ತಿರುವುದರಿಂದ ಆದಷ್ಟು ಶೀಘ್ರವಾಗಿ ಲಸಿಕೆಯನ್ನು ತರಿಸುವಂತೆ ವೈದ್ಯರಿಗೆ ಮನವಿ ಮಾಡಲಾಯಿತು. ಮಾತನಾಡಿದ ವೈದ್ಯಾಧಿಕಾರಿ ಡಾ. ಜ್ಯೋತಿಷ್ ಗೋಪಿನಾಥ್ ಅವರು ಲಸಿಕೆಯು ಅತೀ ಶೀಘ್ರದಲ್ಲೇ ಬರಲಿದ್ದು ಬಂದ ತಕ್ಷಣ ಮಾಹಿತಿ ನೀಡಿ ಲಸಿಕೆ ಹಾಕುವ ವ್ಯವಸ್ಥೆಯನ್ನು ಮಾಡುವುದಾಗಿ ತಿಳಿಸಿದರು.
ಅಲ್ಲದೆ  ಇತ್ತೀಚೆಗೆ ಪುನಃ ಡೆಂಗ್ಯೂ ಜ್ವರ ಹೆಚ್ಚುತ್ತಿದ್ದು ಆದಷ್ಟು ಸಾರ್ವಜನಿಕರು ಎಚ್ಚರ ವಹಿಸುವಂತೆ ತಿಳಿಸಿದರು.  ಪಂಚಾಯತ್ ಅಧ್ಯಕ್ಷರೊಂದಿಗೆ ಸದಸ್ಯರಾದ ಸುಭಾಷ್ ರೈ, ಸುಲೋಚನ, ಜಯಶ್ರೀ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.