HomePage_Banner
HomePage_Banner
HomePage_Banner
HomePage_Banner

ವಿಟ್ಲ ಸಿಂಡಿಕೇಟ್ ಬ್ಯಾಂಕ್ ನ ಸಿಬಂದಿಗಳಿಗೆ ಕೊರೋನ ಪಾಸಿಟೀವ್ – ಬ್ಯಾಂಕ್, ಎಟಿಎಂ ಬಂದ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯಲ್ಲಿರುವ  ಸಿಂಡಿಕೇಟ್ ಬ್ಯಾಂಕ್ ನ  ಮ್ಯಾನೇಜರ್  ಸಹಿತ ನಾಲ್ವರು ಸಿಬಂದಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಬ್ಯಾಂಕ್ ಅನ್ನು ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆರಂಭದಲ್ಲಿ ವಿಟ್ಲದ ಸಿಂಡಿಕೇಟ್ ಬ್ಯಾಂಕ್ ನ ಒಬ್ಬರು ಸಿಬ್ಬಂದಿಗೆ ಸೋಂಕು ತಗುಲಿತ್ತು. ಬಳಿಕ ಅವರ ಮನೆಯವರಲ್ಲಿ ಎಲ್ಲರಲ್ಲೂ ಸೋಂಕು ಪತ್ತೆಯಾಗಿತ್ತು. ಇನ್ನುಳಿದ ಸಿಬ್ಬಂದಿಗಳು ಪರೀಕ್ಷೆ ನಡೆಸಿದ್ದು, ಅವರಲ್ಲಿಯೂ ಸೋಂಕು ದೃಢಪಟ್ಟಿದೆ. ಬ್ಯಾಂಕ್ ಮನೇಜರ್ ಒಬ್ಬರೇ ಬ್ಯಾಂಕ್ ನಲ್ಲಿ ಕೆಲ ದಿನ ಕರ್ತವ್ಯದಲ್ಲಿದ್ದರು. ಇದೀಗ ಅವರು ಪರೀಕ್ಷೆ ಮಾಡಿಸಿದ್ದು, ಅವರ‌ ವರದಿಯೂ ಪಾಸಿಟೀವ್ ಬಂದಿದೆ. ಇದೀಗ ಬ್ಯಾಂಕ್ ಗೆ ಬೀಗ ಹಾಕಲಾಗಿದೆ‌ ಎಂದು ತಿಳಿದುಬಂದಿದೆ.  ಬ್ಯಾಂಕ್ ನ ಪಕ್ಕದಲ್ಲಿರುವ ಎಟಿಎಂ ಕೇಂದ್ರವನ್ನು ಬಂದ್ ಮಾಡಲಾಗಿದೆ.

ಇದುವರೆಗೂ ಬ್ಯಾಂಕ್ ಗೆ ಹಲವು ಮಂದಿ ಗ್ರಾಹಕರು ವ್ಯವಹಾರ ನಡೆಸಲು  ಆಗಮಿಸಿದ್ದು, ಅವರೆಲ್ಲ   ಕೋವಿಡ್ ಪರೀಕ್ಷೆ ನಡೆಸಿ, ಮನೆಯಲ್ಲಿಯೇ ಇರುವುದು ಒಳಿತು ಎನ್ನುವ ಮಾತು ನಾಗರಿಕರಿಂದ ಕೇಳಿಬಂದಿದೆ. ವಿಟ್ಲ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಕಳೆದ ಲಾಕ್ ಡೌನ್ ನಿಂದ ಇದುವರೆಗೂ ಭಾರೀ ಮುಂಜಾಗ್ರತೆಯನ್ನು ವಹಿಸಲಾಗುತ್ತಿತ್ತು. ಒಮ್ಮೆಲೇ ಎಲ್ಲಾ ಗ್ರಾಹಕರಿಗೆ ಬ್ಯಾಂಕ್ ನ ಪ್ರವೇಶ ನೀಡುತ್ತಿರಲಿಲ್ಲ.   ಬಾಗಿಲು ಬಳಿ ಸಿಬ್ಬಂದಿಗಳನ್ನು ನಿಯೋಜಿಸಿ, ಅಲ್ಲಿಯೇ ವ್ಯವಹಾರ ನಡೆಸುತ್ತಿದ್ದರು. ಈ ಬಗ್ಗೆ ಜನರು ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.  ಬಹಳಷ್ಟು ಮುಂಜಾಗರೂಕತೆಯೊಂದಿಗೆ ವ್ಯವಹಾರ ನಡೆಸಿದರೂ ಇದೀಗ ಎಲ್ಲರಿಗೂ ಕೊರೋನ ಸೋಂಕು ತಗುಲಿರುವುದು ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.