HomePage_Banner
HomePage_Banner
HomePage_Banner
HomePage_Banner

ಒಳಮೊಗ್ರು: ಕೋರೋನಾ ನಿಗ್ರಹ ಕಾರ್ಯಪಡೆ ಸಭೆ, ಮಾಸ್ಕ್ ಹಾಕದಿದ್ದರೆ ದಂಡ, ಅನಗತ್ಯ ಓಡಾಟ ನಿಷೇಧ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮಹಾಮಾರಿ ಕೊರೊನ ತಡೆಗಟ್ಟುವ ಕುರಿತು ಮೇ 3 ರಂದು ಒಳಮೊಗ್ರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಾರ್ಯಪಡೆ ಸಭೆ ನಡೆಯಿತು. ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ರಾಜ್ಯಸರಕಾರದ ಮಾರ್ಗಸೂಚಿ ಪ್ರಕಾರ ಮಹತ್ವದ ಕಠಿಣ ನಿರ್ಧಾರ ಕೈಗೊಳ್ಳಲಾಯಿತು.

 ಮಹಾಮಾರಿ ಕುರಿತು ಮಾರ್ಗಸೂಚಿಯಾಗಿ ಪಂಚಾಯತ್ ವಠಾರದಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ನಿಗದಿಪಡಿಸಿದ ಸಮಯಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸುವುದು, ಅನಗತ್ಯವಾಗಿ ಸಾರ್ವಜನಿಕರು ಓಡಾಡುವುದು ನಿಷಿದ್ಧ, ಕೋವಿಡ್ ಪಾಸಿಟಿವ್ ಬಂದಿರುವ ವ್ಯಕ್ತಿಗಳು ಮನೆಯಲ್ಲಿ ಹೋಮ್  ಕ್ವಾರಂಟೈನ್ ಆಗಿ ಅರೋಗ್ಯ ಇಲಾಖೆಯ ಸಲಹೆ ಪಾಲಿಸುವುದು.

ಅಂಗಡಿ ಗಳ ಎದುರು ಸಾರ್ವಜನಿಕ ಅಂತರ ಕಾಯಿದುಕೊಳ್ಳಲು ಕಡ್ಡಾಯವಾಗಿ ಗುರುತು ಹಾಕಿಸುವುದು. ಮಾಸ್ಕ್ ಧರಿಸದಿದ್ದರೆ 100 ರೂ ದಂಡ ವಿಧಿಸುವುದು, ಅನುಮತಿ ಪಡೆದ ಮದುವೆ ಸಮಾರಂಭಗಳಿಗೆ ಕಾರ್ಯಪಡೆ ಸದಸ್ಯರು ಭೇಟಿ ನೀಡಿ ಅನುಮತಿಗಿಂತ ಹೆಚ್ಚು ಜನ ಭಾಗವಹಿಸಿದ್ದಲ್ಲಿ ದಂಡ ವಿಧಿಸುವುದು. ತುರ್ತು ಸಂದರ್ಭದಲ್ಲಿ ಆಹಾರ ಮತ್ತು ರೋಗಿಗಳನ್ನು ಸಾಗಿಸಲು ವಾಹನದ ವ್ಯವಸ್ಥೆ ಮತ್ತು
ಆರೋಗ್ಯ ವಿಷಯವಾಗಿ ನಿರ್ವಹಿಸಲು ಸಿದ್ಧರಾಗಲು ಕಾರ್ಯತಂತ್ರ ರೂಪಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಸುಂದರಿ, ಪಂಚಾಯತ್ ಪಿಡಿಓ ಗೀತಾ, ಕಾರ್ಯಪಡೆಯ ಸದಸ್ಯರು, ಗ್ರಾಮಲೆಕ್ಕಧಿಕಾರಿ, ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.