HomePage_Banner
HomePage_Banner
HomePage_Banner
HomePage_Banner

ಪುತ್ತೂರು ಅರಣ್ಯ ಸಂಚಾರಿ ಪೊಲೀಸರ ಕಾರ್ಯಾಚರಣೆ .. | ಅಳಿವಿನಂಚಿನಲ್ಲಿರುವ ಇರ್‍ತಲೆ ಹಾವಿನ ಮಾರಾಟ ಜಾಲ ಪತ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಅರಣ್ಯ ಸಂಚಾರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಳಿವಿನಂಚಿನಲ್ಲಿರುವ ಇರ್‍ತಲೆ ಹಾವಿನ ಮಾರಾಟ ಜಾಲವೊಂದು ಪತ್ತೆ ಮಾಡಿ ಐವರು ಆರೋಪಿಗಳನ್ನು ಬಂಧಿಸಿ ಅವರಿಂದ ಇರ್‍ತಲೆ ಹಾವನ್ನು ರಕ್ಷಣೆ ಮಾಡಿದ ಘಟನೆ ಸುಳ್ಯ ತಾಲೂಕಿನ ಮಂಡೆಕೋಲಿನ ಮೂರುರಿನಲ್ಲಿ ಮೇ.3ರಂದು ತಡ ರಾತ್ರಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಸಂಚಾರಿ ಪೊಲೀಸ್ ಉಪನಿರೀಕ್ಷಕಿ ಜಾನಕಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಕಾಸರಗೋಡು ಕಡೆಯಿಂದ ಸುಳ್ಯ ಕಡೆ ಹೋಗುತ್ತಿದ್ದ ಎರಡು ಮಾರುತಿ ಸ್ವಿಫ್ಟ್ ಕಾರನ್ನು ಸುತ್ತುವರಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾರಿನ ಸೀಟಿನಲ್ಲಿದ್ದ ಬ್ಯಾಗ್‌ವೊಂದರಲ್ಲಿ ಇರ್‍ತಲೆ ಹಾವು ಇರುವುದು ಕಂಡು ಬಂದಿದ್ದು, ತಕ್ಷಣ ಎರಡು ಕಾರಿನಲ್ಲಿದ್ದ ಆರೋಪಿಗಳಾದ ಕಾಸರಗೋಡು ಮೂಲದವರಾದ ಆಶ್ರಫ್, ರಾಜೇಶ್, ರಮೇಶ್, ಜಬ್ಬಾರ್, ನಿತಿನ್ ಅವರನ್ನು ಬಂಧಿಸಿದ್ದು, ಆರೋಪಿಗಳಿಂದ ನಗದು ಕೌಂಟಿಂಗ್ ಮೆಷಿನ್‌ವೊಂದನ್ನು ವಶಕ್ಕೆ ತೆಗೆದುಕೊಂಡು ಇರ್‍ತಲೆ ಹಾವನ್ನು ರಕ್ಷಣೆ ಮಾಡಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ಜಾನಕಿ, ಸಿಬ್ಬಂದಿಗಳಾದ ವಿಜಯ ಕುಮಾರ್, ಸುಂದರ ಶೆಟ್ಟಿ, ಉದಯ ಕುಮಾರ್, ಸಂತೋಷ್, ಸರಸ್ವತಿ ಅವರು ಪಾಲ್ಗೊಂಡಿದ್ದರು.

ಕೋಟ್ಯಾಂತರ ರೂಪಾಯಿಗೆ ಮಾರಾಟ !
ಅಳಿವಿನಂಚಿನಲ್ಲಿರುವ ಇರ್‍ತಲೆ ಹಾವಿನ ಪ್ರಭೇದದ ಮಾರಾಟವನ್ನು ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಂತೆ ನಿಷೇಧಿಸಲಾಗಿದೆ. ಮರಳು ಹಾವು (ಸ್ಯಾಂಡ್ ಬೋವ) ಎಂಬ ಹೆಸರಿನ ಈ ಇರ್ತಲೆ ಹಾವು ವಿಷರಹಿತವಾಗಿದೆ. ಈ ಹಾವನ್ನು ಮನೆಯಲ್ಲಿ ಇರಿಸಿಕೊಂಡರೆ ಸಂಪತ್ತು ವೃದ್ಧಿಸುತ್ತದೆ ಎಂಬ ಮೂಢನಂಬಿಕೆಯಿಂದ ಈ ಹಾವನ್ನು ಹಿಡಿದು ವ್ಯವಹಾರ ಮಾಡಲಾಗುತ್ತಿದೆ. ಮೂಢನಂಬಿಕೆಯ ಆಧಾರದಲ್ಲಿ ಈ ಹಾವನ್ನು ಹಿಡಿದು ಜನರನ್ನು ಮೋಸ ಮಾಡುವ ಜಾಲಗಳು ಸಕ್ರೀಯವಾಗಿದ್ದು, ರೂ. 8 ಕೋಟಿಗೆ ರಕ್ಷಣೆಗೊಂಡ ಇರ್‍ತಲೆ ಹಾವಿನ ಮಾರಾಟ ವ್ಯವಹಾರ ನಡೆಸಲಾಗಿತ್ತೆಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ರೂ. 8 ಕೋಟಿ ಹಣದ ಲೆಕ್ಕಾಚಾರಕ್ಕಾಗಿಯೇ ಹಣದ ಕೌಂಟರ್ ಮೆಷಿನ್ ಕೂಡಾ ಆರೋಪಿಗಳು ಜೊತೆಯಲ್ಲಿಟ್ಟುಕೊಂಡಿದ್ದರೆನ್ನಲಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.