HomePage_Banner
HomePage_Banner
HomePage_Banner
HomePage_Banner

ಬಿಳಿನೆಲೆ: ಗುಡುಗು ಸಹಿತ ಬಿರುಗಾಳಿ ಮಳೆ ಮನೆ, ಕೃಷಿ, ವಿದ್ಯುತ್ ಕಂಬಗಳಿಗೆ ಹಾನಿ-ಅಪಾರ ನಷ್ಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಡಬ: ಮೇ 3ರಂದು ರಾತ್ರಿ ಬಿಳಿನೆಲೆ, ಮರ್ದಾಳ ಭಾಗದಲ್ಲಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಮರ ಬಿದ್ದು ಮನೆ, ಕೃಷಿ, ವಿದ್ಯುತ್ ಕಂಬಗಳು ಹಾನಿಗೊಂಡ ಘಟನೆ ಸಂಭವಿಸಿದೆ.


ಬಿಳಿನೆಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೂಡ್ಲು, ಒಗ್ಗು, ಸಣ್ಣಾರ ಭಾಗದಲ್ಲಿ ಹಾನಿ ಸಂಭವಿಸಿದೆ. ಕುಶಾಲಪ್ಪ ಗೌಡ ಸಣ್ಣಾರ ಅವರ ಮನೆಗೆ ಹಾನಿ, ವಾಸುದೇವ ಗೌಡ ಒಗ್ಗು ಅವರ ಹಟ್ಟಿಗೆ ಹಾನಿ, ಸುಂದರ ಗೌಡ ಒಗ್ಗು ಅವರ ಮನೆ ಹಾಗೂ ಕಂಪೌಂಡ್ ಹಾನಿ, ಚಂದ್ರಪ್ಪ ಸಣ್ಣಾರ ಮನೆಗೆ ಮರ ಬಿದ್ದು ಹಾನಿ, ಪುರುಷೋತ್ತಮ ಗೌಡ ಸಣ್ಣಾರ ಅವರ ಕೊಟ್ಟಿಗೆಗೆ ಹಾನಿ, ಎ.ಕೆ. ಕುಮಾರ್ ಅವರ ಮನೆಯ ಸೀಟಿಗೆ ಹಾನಿ, ಹಾಜೀರ ಎಂಬವರ ಶೆಡ್‌ಗೆ ಮರಬಿದ್ದು ಸಂಪೂರ್ಣ ಹಾನಿ ಉಂಟಾಗಿದೆ. ಅಲ್ಲದೆ ಈ ಭಾಗದಲ್ಲಿ ಕೃಷಿ ತೋಟದ ಅಡಿಕೆ, ತೆಂಗು, ಬಾಳೆ, ರಬ್ಬರ್ ಮರಗಳು ಗಾಳಿಗೆ ನೆಲಕಚ್ಚಿ, ಅಪಾರ ನಷ್ಟ ಉಂಟಾಗಿದೆ. ಮರ್ದಾಳದಲ್ಲಿಯೂ ಗಾಳಿ ಮಳೆಗೆ ಹಾನಿ ಸಂಭವಿಸಿದ್ದು ಕೆಲ ಅಂಗಡಿ, ಹೋಟೆಲ್‌ಗಳ ಹಂಚುಗಳು ಹಾರಿಹೋಗಿವೆ ಎಂದು ವರದಿಯಾಗಿದೆ.

ಹೆದ್ದಾರಿಗೆ ಮರ:

 


ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ಬಿಳಿನೆಲೆ ಸಮೀಪದ ಸಿಪಿಸಿಆರ್‌ಐ ಬಳಿ ಬೃಹತ್ ಮರ ಹೆದ್ದಾರಿಗೆ ಬಿದ್ದು ರಸ್ತೆ ಬಂದ್ ಆಗಿತ್ತು. ಘಟನೆಯಲ್ಲಿ ಹಲವು ವಿದ್ಯುತ್ ಕಂಬಗಳು ಮುರಿದಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ಸ್ಥಳೀಯ ಸಂಪರ್ಕದ ಹಲವು ರಸ್ತೆಗಳಿಗೆ ಮರ ಬಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

 

ಹಲವೆಡೆ ವಿದ್ಯುತ್ ಕಂಬ, ತಂತಿಗಳ ಮೇಲೆ ಮರ, ಮರದ ಗೆಲ್ಲು ಬಿದ್ದು ಹಾನಿ ಉಂಟಾಗಿದೆ. ಬಿಳಿನೆಲೆ, ಐತ್ತೂರು, ಪುತ್ತಿಗೆ ಭಾಗದಲ್ಲಿ ಸುಮಾರು 30ಕ್ಕೂ ಅಧಿಕ ವಿದ್ಯುತ್ ಕಂಬಗಳು ತುಂಡಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಗಳಿಗೆ ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷ ಶಿವಶಂಕರ್, ಪಿಡಿಒ ಶೀನ, ಪಂಚಾಯತ್ ಸದಸ್ಯರು ಭೇಟಿ ನೀಡಿದ್ದಾರೆ. ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ಮರ ತೆರವುಗೊಳಿಸಿ ವಿದ್ಯುತ್ ಕಂಬ ಅಳವಡಿಕೆ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು. ಮರ ತೆರವಿಗೆ ಸ್ಥಳೀಯರು ಸಹಕರಿಸಿದ್ದರು. ವಿದ್ಯುತ್ ಲೈನ್ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ. ಹೆದ್ದಾರಿಗೆ ಬಿದ್ದ ಮರಗಳ ತೆರವು ಕಾರ್ಯವನ್ನು ನಡೆಸಲಾಗಿದೆ.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.