HomePage_Banner
HomePage_Banner
HomePage_Banner
HomePage_Banner

‘ಈ ದಿನ ವ್ಯಾಕ್ಸಿನ್ ಲಭ್ಯವಿರುವುದಿಲ್ಲ’ ಸರಕಾರಿ ಆಸ್ಪತ್ರೆಯಲ್ಲಿ ರಾರಾಜಿಸುತ್ತಿದೆ ಬೋರ್ಡ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕೋವಿಡ್ ವಿರುದ್ಧದ ಹೋರಾಟದ ಭಾಗವಾಗಿ, ವ್ಯಾಕ್ಸಿನ್‌ಗಳನ್ನು ಹಾಕಿಸಿಕೊಳ್ಳಬೇಕು ಎಂಬ ಅಭಿಯಾನ ದೊಡ್ಡ ಮಟ್ಟದಲ್ಲೇ ನಡೆದಿತ್ತು.ಮತ್ತೊಂದೆಡೆ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇರುವುದರಿಂದ ಆತಂಕಗೊಂಡಿರುವ ಜನರಿಂದ ಇದೀಗ ಲಸಿಕೆಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು ತಾಮುಂದು-ನಾಮುಂದು ಎಂದು ಲಸಿಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ.ಆದರೆ ಇದೀಗ ಜನರು ವ್ಯಾಕ್ಸಿನ್ ಪಡೆದುಕೊಳ್ಳಲು ಪುತ್ತೂರು ಸರಕಾರಿ ಆಸ್ಪತ್ರೆ ಮೆಟ್ಟಿಲು ಹತ್ತಿದರೆ `ಈ ದಿನ ವ್ಯಾಕ್ಸಿನ್ ಲಭ್ಯವಿರುವುದಿಲ್ಲ’ ಎಂಬ ಬೋರ್ಡ್ ಸ್ವಾಗತಿಸುತ್ತಿದೆ.

ಪ್ರಸ್ತುತ ಕೊರೋನಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬೆಳಿಗ್ಗೆ 6ರಿಂದ 10 ಗಂಟೆ ಮೊದಲು ಪುತ್ತೂರು ಪೇಟೆಗೆ ಬಂದು ಹಿಂದಿರುಗುವ ಅನಿವಾರ್ಯತೆ ಇರುವುದರಿಂದ ಈ ಅವಧಿಯೊಳಗಡೆ ವ್ಯಾಕ್ಸಿನ್ ಪಡೆದುಕೊಳ್ಳಲು ಗ್ರಾಮಾಂತರ ಭಾಗದಿಂದ ಜನರು ಬಂದು, ಬೋರ್ಡ್ ನೋಡಿ ಬರಿಗೈಲಿ ಹಿಂದಿರುಗುವ ಪರಿಸ್ಥಿತಿ ಎದುರಾಗಿದೆ.ಆದ್ದರಿಂದ ಸಂಬಂಧಪಟ್ಟವರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಜನರಿಗೆ ಸೂಕ್ತ ಮಾಹಿತಿಯನ್ನು ಮೊದಲೇ ತಿಳಿಸುವ ಅಗತ್ಯ ಇದೆ.

ಇಂದು ಲಸಿಕೆ ಬರುವ ಸಾಧ್ಯತೆ
ಕೋವಿಡ್ ಲಸಿಕೆಗೆ ಬೇಡಿಕೆ ಹೆಚ್ಚಿದ್ದು, ಲಸಿಕೆ ಬಂದಾಕ್ಷಣ ಕೊಡಲಾಗುತ್ತಿದೆ.ಆದರೆ ಬೇಡಿಕೆಯಷ್ಟು ಲಸಿಕೆ ಪೂರೈಸಲು ಅಸಾಧ್ಯವಾಗಿದೆ.ಬಂದ ಲಸಿಕೆಯನ್ನು ಸರಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿಂಗಡಿಸಲಾಗುತ್ತದೆ.ಮೇ ೫ಕ್ಕೆ ಲಸಿಕೆ ಬರುವ ಸಾಧ್ಯತೆ ಇದೆ –
ಡಾ. ಅಶೋಕ್ ಕುಮಾರ್ ರೈ, ತಾ| ಆರೋಗ್ಯಾಧಿಕಾರಿ ಪುತ್ತೂರು

ಕಳೆದೆರಡು ದಿನಗಳಿಂದ ಲಸಿಕೆ ಕೊರತೆ
ಕಳೆದೆರಡು ದಿನಗಳಿಂದ ಸರಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ಕೊರತೆ ಕಾಣುತ್ತಿದೆ.ಲಸಿಕೆ ಇದೆ ಎಂಬ ಮಾಹಿತಿಯಿಂದ ಜನರು ಲಸಿಕೆ ಪಡೆಯಲು ಆಸ್ಪತ್ರೆಗೆ ಬಂದಾಗ ಮೊದಲನೆ ಲಸಿಕೆ ಕೊಡಲಾಗುವುದಿಲ್ಲ.೨ನೇ ಹಂತದಲ್ಲಿರುವವರಿಗೆ ಆದ್ಯತೆ ನೀಡಿದ ಬಳಿಕ ಮೊದಲ ಹಂತದವರಿಗೆ ನೀಡಲಾಗುವುದು ಎಂಬ ಉತ್ತರದಿಂದ ಹಿಂದಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದೀಗ ೨ನೇ ಹಂತದಲ್ಲಿ ಬರುವವರಿಗೂ ಲಸಿಕೆ ಕೊರತೆ ಆಗಿದೆ.ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಬರುವ ಜನರಿಗೆ ಮಾಹಿತಿಗಾಗಿ ಆಸ್ಪತ್ರೆಯ ಬಾಗಿಲಲ್ಲೇ ಇಂದು ವ್ಯಾಕ್ಸಿನ್ ಲಭ್ಯವಿರುವುದಿಲ್ಲ ಎಂಬ ನಾಮಫಲಕ ಹಾಕಿದ್ದಾರೆ ಇದರ ಜೊತೆಗೆ ವ್ಯಾಕ್ಸಿನ್‌ಗಾಗಿ ಸಂಪರ್ಕ ನಂಬರ್ ಕೂಡಾ ಹಾಕಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.