HomePage_Banner
HomePage_Banner
HomePage_Banner
HomePage_Banner

ನೆಲ್ಯಾಡಿ: ಬೈಕ್, ಕಾರು ಡಿಕ್ಕಿ ವಿಚಾರ – ಇತ್ತಂಡಗಳಿಂದ ಪೊಲೀಸರಿಗೆ ದೂರು, ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ ಸಮೀಪ ಕೌಕ್ರಾಡಿ ಗ್ರಾಮದ ಪುತ್ಯೆ ಎಂಬಲ್ಲಿ ಬೈಕ್ ಹಾಗೂ ಕಾರಿನ ನಡುವೆ ಮೇ.4ರಂದು ಬೆಳಿಗ್ಗೆ ನಡೆದ ಡಿಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡದವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿ ಕೌಕ್ರಾಡಿ ಗ್ರಾಮದ ಬಾಗೇಜಾಲು ನಿವಾಸಿ ಕುಶಾಲಪ್ಪ ಗೌಡರವರ ಪುತ್ರ, ಕಾರು ಚಾಲಕ ನಾಗೇಶ್(31ವ.)ಎಂಬವರು ದೂರು ನೀಡಿದ್ದು, ಮೇ 4ರಂದು ಬೆಳಿಗ್ಗೆ 10.30ಕ್ಕೆ ತನ್ನ ಎರ್ಟಿಗಾ ಕಾರಿನಲ್ಲಿ (ಡಿಎಲ್ 8 ಸಿ 7802) ಪತ್ನಿ ವಿಶಾಲಾಕ್ಷಿಯವರನ್ನು ಕುಳ್ಳಿರಿಸಿಕೊಂಡು ಕಾರನ್ನು ಚಲಾಯಿಸಿಕೊಂಡು ಕೌಕ್ರಾಡಿ ಗ್ರಾಮದ ಪುತ್ಯೆ ಎಂಬಲ್ಲಿಗೆ ತಲುಪಿದಾಗ ಮಹಮ್ಮದ್ ಶರೀಫ್ ಹಾಗೂ ಇತರ ನಾಲ್ವರು ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮಾತನಾಡಿಕೊಂಡಿರುವುದನ್ನು ನೋಡಿ ದಾರಿಗಾಗಿ ಧ್ವನಿ ಮಾಡಿದಾಗ ಅವರು ಕದಲದೆ ಇದ್ದುದರಿಂದ ಅಲ್ಲಿಯೇ ಸೈಡಿನಿಂದ ಕಾರನ್ನು ಚಲಾಯಿಸಿಕೊಂಡು ಹೋದ ವೇಳೆ ಕಾರಿನ ಹಿಂದಿನಿಂದ ಶಬ್ದ ಕೇಳಿದಾಗ ಕಾರು ನಿಲ್ಲಿಸಿ ಹಿಂದಕ್ಕೆ ಹೋಗಿ ಅಲ್ಲಿದ್ದ ಮುಹಮ್ಮದ್ ಶರೀಫ್ ಮತ್ತು ಇತರರಲ್ಲಿ ವಿಚಾರಿಸಿದಾಗ ಮುಹಮ್ಮದ್ ಶರೀಫ್‌ರವರು ಅವಾಚ್ಯವಾಗಿ ನಿಂದಿಸಿ ಅಂಗಿಯ ಕಾಲರ್ ಹಿಡಿದೆಳೆದಿದ್ದು ಬಿಡಿಸಲು ಬಂದ ನನ್ನ ಪತ್ನಿ ವಿಶಾಲಾಕ್ಷಿಯವರನ್ನು ಮುಹಮ್ಮದ್ ಶರೀಫ್ ಮತ್ತು ಇತರರು ದೂಡಿ ಹಾಕಿ ಎಲ್ಲರೂ ಸೇರಿಕೊಂಡು ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಕೌಕ್ರಾಡಿ ಗ್ರಾಮದ ಪಟ್ಲಡ್ಕ ನಿವಾಸಿ ಆದಂ ಎಂಬವರ ಪುತ್ರ, ಬೈಕ್ ಸವಾರ ಮೊಹಮ್ಮದ್ ಶರೀಫ್(23ವ.)ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಮೇ.4ರಂದು ಬೆಳಿಗ್ಗೆ 11.15ಕ್ಕೆ ನನ್ನ ದ್ವಿಚಕ್ರ ವಾಹನದಲ್ಲಿ (ಕೆಎ19 ಹೆಚ್‌ಡಿ 0474)ನೆಲ್ಯಾಡಿ ಕಡೆಗೆ ಬರುತ್ತಿದ್ದ ವೇಳೆ ಕೌಕ್ರಾಡಿ ಗ್ರಾಮದ ಪುತ್ಯೆ ಎಂಬಲ್ಲಿಗೆ ತಲುಪಿದಾಗ ಕಟ್ಟೆಮಜಲು ಕಡೆಯಿಂದ ನಾಗೇಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬಿಳಿ ಬಣ್ಣದ ಎರ್ಟಿಗಾ ಕಾರು ಬರುತ್ತಿದ್ದುದನ್ನು ನೋಡಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದಾಗ ಎರ್ಟಿಗಾ ಕಾರನ್ನು ದ್ವಿಚಕ್ರ ವಾಹನದ ಹಿಂಬಾಗಕ್ಕೆ ಒರೆಸಿದಂತಹ ರೀತಿಯಲ್ಲಿ ಚಲಾಯಿಸಿಕೊಂಡು ಸ್ವಲ್ಪ ಮುಂದೆ ಹೋಗಿ ಕಾರನ್ನು ನಿಲ್ಲಿಸಿ ತನ್ನ ಬಳಿ ಬಂದ ವೇಳೆ ನನ್ನ ದ್ವಿಚಕ್ರ ವಾಹನಕ್ಕೆ ಕಾರನ್ನು ಒರೆಸಿಕೊಂಡು ಹೋದ ವಿಚಾರ ಪ್ರಸ್ತಾಪಿಸಿದಾಗ ನನ್ನನ್ನು ಉದ್ದೇಶಿಸಿ ಅವಾಚ್ಯ ಪದ ಬಳಸಿ ರೋಡಲ್ಲಿ ವಾಹನವನ್ನು ನಿಲ್ಲಿಸಿ ನನಗೆ ಕೇಳುತ್ತಿಯಾ ಎಂದು ಬೈಯ್ಯುತ್ತಾ ಕಲ್ಲಿನಿಂದ ಎಡಕುತ್ತಿಗೆಗೆ ಹೊಡೆದು ಹಲ್ಲೆ ನಡೆಸಿರುವುದಲ್ಲದೇ ಈ ವೇಳೆ ಅಲ್ಲಿಗೇ ಬಂದ ಕಿಶೋರ್ ಮತ್ತು ಇತರರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದಾರೆ. ಎರಡು ದೂರು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.