ಶಾಸಕರ ನೇತೃತ್ವದಲ್ಲಿ ಪಾಣಾಜೆ ಪಂಚಾಯತ್ ವ್ಯಾಪ್ತಿಯ ಕೋವಿಡ್-19 ಕಾರ್ಯಪಡೆ ಸಭೆ.

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
   ನಿಡ್ಪಳ್ಳಿ: ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ರೋಗ ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಚರ್ಚಿಸುವ ಸಲುವಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಇವರ ನೇತೃತ್ವದಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್-19 ಕಾರ್ಯಪಡೆ ಸಭೆ ಮೆ.4 ರಂದು ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.
  ಗ್ರಾಮ ಮಟ್ಟದಲ್ಲಿ ಇರುವ ಸೋಂಕಿತರ ಅಂಕಿಅಂಶಗಳ  ವಿವರ ಪಡೆದುಕೊಂಡ ಶಾಸಕರು ಹೊರ ಜಿಲ್ಲೆ ಮತ್ತು ವಿದೇಶದಿಂದ ಬರುವವರನ್ನು ಗುರುತಿಸಿ ಅವರ ಮೇಲೆ ನಿಗಾ ಇಟ್ಟು ಹೊರಗೆ ಸುತ್ತಾಡದಂತೆ, ಇಲ್ಲಿ ಸೋಂಕು ಹರಡದಂತೆ ತಡೆಯಲು ಪ್ರಯತ್ನಿಸುವಂತೆ ಅರೋಗ್ಯ ಇಲಾಖೆ ಮತ್ತು ಅಧಿಕಾರಿಗಳಿಗೆ ಸೂಚಿಸಿದರು.ರೋಗ ತಡೆಗಟ್ಟುವಲ್ಲಿ ನಮ್ಮ ಜವಾಬ್ದಾರಿ ಅರಿತು ಲೋಪವಾಗದಂತೆ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು.
    ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ವಿ.ಭಟ್, ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ, ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜ್ಯೋತಿಷ್  ಗೋಪಿನಾಥ್, ನೋಡೆಲ್ ಅಧಿಕಾರಿ ರಾಜಾರಾಮ್, ಪಿಡಬ್ಲ್ಯೂಡಿ ಇಂಜಿನಿಯರ್ ಪ್ರಮೋದ್, ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್.ಕೆ, ಸದಸ್ಯರಾದ ಸುಭಾಷ್ ರೈ, ಮೋಹನ ನಾಯ್ಕ, ನಾರಾಯಣ ನಾಯಕ್, ವಿಮಲ, ಮೈಮುನಾತುಲ್ ಮೆಹ್ರಾ, ಸುಲೋಚನ, ಕೃಷ್ಣಪ್ಪ ಪೂಜಾರಿ, ಜಯಶ್ರೀ, ಬೆಟ್ಟಂಪಾಡಿ ವಲಯ ಸಿ.ಅರ್.ಪಿ ಸೀತಾರಾಮ ಭಟ್, ಆರ್ಲಪದವು ಕೆನರಾ ಬ್ಯಾಂಕ್ ಮೆನೇಜರ್ ವಿಪಿನ್ ಲಾಲ್ ಎನ್.ಕೆ, ಗ್ರಾಮ ಕರಣಿಕ ಮಂಜುನಾಥ, ಕಿರಿಯ ಆರೋಗ್ಯ ಸಹಾಯಕಿ ಜ್ಯೋತಿ. ಬಿ.ಯಂ, ಒಡ್ಯ ಪ್ರಾಥಮಿಕ ಶಾಲಾ ಮುಖ್ಯ ಗುರು ಉಸ್ಮಾನ್, ಪಾಣಾಜೆ ಶಾಲಾ ಮುಖ್ಯ ಶಿಕ್ಷಕಿ ಶೀಲಾವತಿ, ಸೂರಂಬೈಲು ಶಾಲಾ ಶಿಕ್ಷಕಿ ಊರ್ಮಿಳಾ , ಅಂಗನವಾಡಿ ಮೇಲ್ವಿಚಾರಕಿ ಹರಿಣಾಕ್ಷಿ, ಬೀಟ್ ಪೊಲೀಸ್ ನಿತಿನ್ ಕುಮಾರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತಿತರರು ಪಾಲ್ಗೊಂಡರು. ಪಿಡಿಒ ಚಂದ್ರಮತಿ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ವಿಶ್ವನಾಥ, ಅರುಣ್ ಕುಮಾರ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.