ನೂಜಿಬಾಳ್ತಿಲ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ 19 ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೂಜಿಬಾಳ್ತಿಲ: ನೂಜಿಬಾಳ್ತಿಲ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ 19 ಕಾರ್ಯಪಡೆ ಸಭೆಯು ಮೇ 4.ರಂದು ಶ್ರೀಮತಿ ಗಂಗಮ್ಮ ಅಧ್ಯಕ್ಷತೆಯಲ್ಲಿ ಜರಗಿತು.

 

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಇಮ್ಯಾನುವೆಲ್ ಅವರು ಮಾತನಾಡಿ ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಇದರ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು. ಆಶಾ ಕಾರ್ಯಕರ್ತೆ ಆರೋಗ್ಯ ಸಹಾಯಕಿಯರಿಗೆ ಮನೆ ಭೇಟಿ ಸಂದರ್ಭದಲ್ಲಿ ಏನಾದರೂ ತೊಂದರೆಯಾಗುತ್ತಿದ್ದರೆ ಕೂಡಲೇ ಗ್ರಾಮ ಪಂಚಾಯಿತಿ ಗಮನಕ್ಕೆ ತರುವುದು, ನಾವು ನಿಮಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ. ನಮ್ಮ ಈ ಗ್ರಾಮವನ್ನು ಕೊರೋನಾ ಮುಕ್ತ ಮಾಡುವುದಕ್ಕೆ ನಾವೆಲ್ಲರೂ ಶ್ರಮಿಸೋಣ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ್ ಅವರು ಮಾತನಾಡಿ ಕೊರೋನಾ ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಇದನ್ನು ತಡೆಗಟ್ಟಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹೊರರಾಜ್ಯ ಮತ್ತು ಜಿಲ್ಲೆಯಿಂದ ಬಂದ ಅವರ ಬಗ್ಗೆ ಮಾಹಿತಿ ಪಡೆದುಕೊಂಡು ಅವರನ್ನು ಹತ್ತುದಿನ ಹೋಂಮ್ ಕ್ವಾರಂಟೈನ್ ಇರುವಂತೆ ತಿಳಿಸುವುದು ಎಲ್ಲರೂ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸ್ಯಾನಿಟೈಸರ್ ಬಳಸುವುದು ಮತ್ತು ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಲು ತಿಳುವಳಿಕೆ ನೀಡುವುದು. ಒಟ್ಟಿನಲ್ಲಿ ಕೊರೋನಾ ರೋಗ ತಡೆಗಟ್ಟಲು ಪ್ರತಿಯೊಬ್ಬರು ಸಹಕಾರ ನೀಡಿದರೆ ಯಶಸ್ವಿಯಾಗಲು ಸಾಧ್ಯ ಎಂದರು.

ಸಭೆಯಲ್ಲಿ ಕೊರೋನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ನೂಜಿಬಾಳ್ತಿಲ ಮತ್ತು ರೆಂಜಿಲಾಡಿ ಗ್ರಾಮಮಟ್ಟದ ಕಾರ್ಯಪಡೆ ಸಮಿತಿಯನ್ನು ರಚಿಸಲಾಯಿತು. ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ ಹಳೆ ನೂಜಿ, ಶ್ರೀಮತಿ ಚಂದ್ರಾವತಿ ಜಾಲು, ಶ್ರೀಮತಿ ವಿಜಯಲಕ್ಷ್ಮಿ, ಉಮೇಶ, ಶ್ರೀಮತಿ ಉಷಾ, ವಸಂತ ಪಿ, ಶ್ರೀಮತಿ ವಿನಯಕುಮಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಶ್ರೀಮತಿ ಭವಾನಿ ಕಿರಿಯ ಆರೋಗ್ಯ ಸಹಾಯಕಿ ದಯಾ ಕಿರಣ ಅಂಗನವಾಡಿ ಕಾರ್ಯಕರ್ತರಾದ ಅಮೀನ.ಕೆ., ವಾರಿಜಾ, ಏಲಿಯಮ್ಮ, ಹೇಮಾವತಿ, ಪ್ರಪುಲ್ಲ, ರಾಜೀವಿ, ಸುಮಿತ್ರಾ, ಆಶಾ ಕಾರ್ಯಕರ್ತರಾದ ಮರಿಯಮ್ಮ, ವಿನೋದ, ಶಿಲ್ಪ, ಲೀಲಾವತಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ರಾಮಚಂದ್ರಗೌಡ ಜಾಲು. ಸ್ವಯಂಸೇವಾ ಸಂಘ ಸಂಸ್ಥೆಯ ಪ್ರತಿನಿಧಿಗಳು ಮೋನಪ್ಪ ಗೌಡ ಅರಿ ಮಜಲು, ಜಯಂತ ಕುಮಾರ್ ಬರಮೇಲು, ಹರೀಶ್ .ಎನ್ ನಡುವಳಿಕೆ, ಸಂದೇಶ್ ನಾಗನ ಮಜಲು, ಹರಿಶ್ಚಂದ್ರ ಅಡೆಂಜ, ಸೋಮಶೇಖರ ನಡುಗುಡ್ಡೆ, ಪುರುಷೋತ್ತಮ ಗರ್ಗಸ್ ಪಾಲ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಹಕರಿಸಿದರು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗುರುವ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.